ಅಭಿವೃದ್ಧಿ ಹೊಂದಿದ ಭಾರತದ ಕನಸು ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯ : ಪ್ರಧಾನಿ ಮೋದಿ
ನವದೆಹಲಿ, 03 ಫೆಬ್ರವರಿ (ಹಿ.ಸ.) : ಆ್ಯಂಕರ್ : ಆತ್ಮವಿಶ್ವಾಸವೇ ಯಶಸ್ಸಿನ ಮೂಲಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ದೇಶವಾಸಿಗಳ ಆತ್ಮವಿಶ್ವಾಸ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಆತ್ಮವಿಶ್ವಾಸ ಇದ್ದ
Pm


ನವದೆಹಲಿ, 03 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಆತ್ಮವಿಶ್ವಾಸವೇ ಯಶಸ್ಸಿನ ಮೂಲಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ದೇಶವಾಸಿಗಳ ಆತ್ಮವಿಶ್ವಾಸ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಆತ್ಮವಿಶ್ವಾಸ ಇದ್ದರೆ ಅಸಾಧ್ಯವೆನಿಸುವುದೂ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ,

ಸಮೃದ್ಧಿಯು ಶುಭದಿಂದ ಹುಟ್ಟುತ್ತದೆ; ಹೆಮ್ಮೆಯಿಂದ ಅದು ಬೆಳೆಯುತ್ತದೆ; ಕೌಶಲ್ಯದಿಂದ ಅದು ಬೇರೂರುತ್ತದೆ; ಸಂಯಮದಿಂದ ಅದು ನಿಲ್ಲುತ್ತದೆ

ಎಂಬ ನಾಣ್ಣುಡಿಯನ್ನು ಹಂಚಿಕೊಂಡರು. ಈ ನಾಣ್ಣುಡಿಯ ಅರ್ಥವನ್ನು ವಿವರಿಸಿದ ಅವರು, ಒಳ್ಳೆಯ ಕಾರ್ಯಗಳಿಂದ ಸಮೃದ್ಧಿ ಹುಟ್ಟುತ್ತದೆ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಅದು ವೃದ್ಧಿಯಾಗುತ್ತದೆ, ಕೌಶಲ್ಯ ಮತ್ತು ದಕ್ಷತೆಯಿಂದ ಬಲವಾದ ಅಡಿಪಾಯ ಹೊಂದುತ್ತದೆ ಹಾಗೂ ಸಂಯಮದಿಂದ ಸ್ಥಿರತೆಯನ್ನು ಸಾಧಿಸುತ್ತದೆ ಎಂದು ತಿಳಿಸಿದ್ದಾರೆ.

ರಾಷ್ಟ್ರದ ಪ್ರಗತಿಗೆ ಆತ್ಮವಿಶ್ವಾಸ, ಕೌಶಲ್ಯ ಮತ್ತು ಶಿಸ್ತಿನ ಸಂಯೋಜನೆ ಅತ್ಯಂತ ಅಗತ್ಯವೆಂದು ಒತ್ತಿ ಹೇಳಿದ ಪ್ರಧಾನಿ, ನಾಗರಿಕರು ಸ್ವಯಂ ನಿಯಂತ್ರಣ ಹಾಗೂ ಹೊಣೆಗಾರಿಕೆಯಿಂದ ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸವೇ ಅಭಿವೃದ್ಧಿ ಹೊಂದಿದ ಭಾರತದ ಭವಿಷ್ಯವನ್ನು ರೂಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande