
ಕೋಲಾರ, ೦೩ ಫೆಬ್ರವರಿ (ಹಿ.ಸ) :
ಆ್ಯಂಕರ್ : ಮಾಸ್ಟರ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ೨೦೨೬ ನೇ ಜನವರಿ ೨೮ ರಿಂದ ಫೆಬ್ರವರಿ ೧ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಂಗಾರಪೇಟೆ ನಿವಾಸಿ ಅಂತರಾಷ್ಟ್ರೀಯ ಕ್ರೀಡಾಪಟು ಮಹಾದೇವಿ ಎಸ್ ಪಾಟೀಲ್ ಅವರು ೪/೪೦೦ ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಟ್ರಿಪಲ್ ಜಂಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ ಅಲ್ಲದೆ ೩೦೦ ಮೀಟರ್ ಹರ್ಡಲ್ಸ್ ನಲ್ಲಿ ಐದನೇ ಸ್ಥಾನ ಪಡೆದು ನಮ್ಮ ಬೆಮೆಲ್ ನಗರದ ಬಸವ ಸಮಿತಿ ಹಾಗೂ ಅಕ್ಕನ ಬಳಗದ ಘನತೆಯನ್ನು ಹೆಚ್ಚಿಸಿದ್ದಾರೆ. ೨೦೨೬ರ ಆಗಸ್ಟ್ ನಲ್ಲಿ ಸೌತ್ ಕೊರಿಯಾ ಅಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಲು ಮಾಸ್ಟರ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ೪೬ ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ೨೦೨೬.
೨೦೨೬ ನೇ ಜನವರಿ ೨೮ ರಿಂದ ಫೆಬ್ರವರಿ ೧ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ, ನಮ್ಮ ಸಮಿತಿಯ ಅಂತರಾಷ್ಟ್ರೀಯ ಕ್ರೀಡಾಪಟು ಮಹಾದೇವಿ ಎಸ್ ಪಾಟೀಲ್ ಅವರು ೪/೪೦೦ ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅದೇರೀತಿ ಟ್ರಿಪಲ್ ಜಂಪ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ ಅಲ್ಲದೆ ೩೦೦ ಮೀಟರ್ ಹರ್ಡಲ್ಸ್ ನಲ್ಲಿ ಐದನೇ ಸ್ಥಾನ ಪಡೆದು ನಮ್ಮ ಬೆಮೆಲ್ ನಗರದ ಬಸವ ಸಮಿತಿ ಹಾಗೂ ಅಕ್ಕನ ಬಳಗದ ಘನತೆಯನ್ನು ಹೆಚ್ಚಿಸಿದ್ದು ಅಲ್ಲದೇ ಕರ್ನಾಟಕದ ಬಾವುಟವನ್ನು ಪಕ್ಕದ ಕೇರಳದಲ್ಲಿ ಹಾರಿಸಿರುವ ಅವರಿಗೆ ಎಲ್ಲಾ ಗಡಿನಾಡಿನ ಬಸವ ಸಮಿತಿ, ಅಕ್ಕನ ಬಳಗ, ಕನ್ನಡ ಶಕ್ತಿ ಕೇಂದ್ರ ಹಾಗೂ ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪರವಾಗಿ ಹಾರ್ದಿಕ ಅಭಿನಂದನೆಗಳು. ಮಹಾದೇವಿ ಎಸ್ ಪಾಟೀಲ್ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ.
ಮುಂಬರುವ ಆಗಸ್ಟ್ ನಲ್ಲಿ ಸೌತ್ ಕೊರಿಯಾ ದಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಬಾವುಟವನ್ನು ಪಕ್ಕದ ಕೇರಳದಲ್ಲಿ ಹಾರಿಸಿರುವ ಅವರ ತಂಡಕ್ಕೆ ಎಲ್ಲ ಗಡಿನಾಡಿನ ಬಸವ ಸಮಿತಿ, ಅಕ್ಕನ ಬಳಗ, ಕನ್ನಡ ಶಕ್ತಿ ಕೇಂದ್ರ ಹಾಗೂ ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪರವಾಗಿ ಬಾ.ಹ. ಶೇಖರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಚಿತ್ರ : ಕೇರಳದ ತಿರುವನಂತಪುರ0ನಲ್ಲಿ ನಡೆದ ಮಾಸ್ರ‍್ಸ್ ಅಥ್ಲೆಟಿಕ್ ಫೆಡರೇಷನ್ ರಾಷ್ಟಿçಯ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರಪೇಟೆಯ ಮಹದೇವಿ ಎಸ್.ಪಾಟೀಲ್ ದ್ವಿತೀಯ ಸ್ಥಾನ ಪಡೆದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್