ಜಿಲ್ಲಾ ಶಿಕ್ಷಣಾಧಿಕಾರಿ ಎಸ್.ಆರ್.ವೀಣಾ ಅವರಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್
ಜಿಲ್ಲಾ ಶಿಕ್ಷಣಾಧಿಕಾರಿ ಎಸ್.ಆರ್.ವೀಣಾ ಅವರಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್
ಶಾಲಾ ಶಿಕ್ಷಣ ಇಲಾಖೆಯ ಕೋಲಾರ ಜಿಲ್ಲಾ ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ ಅವರು ಮಂಡಿಸಿದ್ದ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾಕ್ಟರೇಟ್ ನೀಡಿದೆ. ಅವರನ್ನು ಡಿಡಿಪಿಐ ಅಲ್ಮಾಸ್ ಫವೀನ್ ತಾಜ್ ಸನ್ಮಾನಿಸಿದರು.


ಕೋಲಾರ, ೦೩ ಫೆಬ್ರವರಿ (ಹಿ.ಸ) :

ಆ್ಯಂಕರ್ : ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ ಅವರು ಮಂಡಿಸಿದ್ದ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪಿಹೆಚ್‌ಡಿ (ಡಾಕ್ಟರೇಟ್) ಪದವಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.

ಶಿಕ್ಷಣಾಧಿಕಾರಿ ವೀಣಾ ಅವರು ಮಂಡಿಸಿದ್ದ `ಆಟ್ಯೂಟೂಡ್ ಅಂಡ್ ಟೀಚಿಂಗ್ ಕಂಪಿಟೆನ್ಸಿ ಆಫ್ ಅಂಗನವಾಡಿ ವಕರ‍್ಸ್ ಟೂ ವರ್ಡ್್ಸ ಅರ್ಲಿ ಚೈಲ್ಡ್ಹುಡ್ ಕೇರ್ ಅಂಡ್ ಎಜುಕೇಷನ್' ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಈ ಸಂದರ್ಭದಲ್ಲಿ ವೀಣಾ ರವರನ್ನು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿ, ಇಲಾಖೆಯ ಬಿಡುವಿಲ್ಲದ ಕೆಲಸಗಳ ನಡುವೆಯೇ ತಮ್ಮ ಅಧ್ಯಯನ ಮುಂದುವರೆಸಿ ೫೬ನೇ ವಯಸ್ಸಿನಲ್ಲಿ ಡಾಕ್ಟರೇಟ್ ಗೌರವಕ್ಕೆ ವೀಣಾ ಅವರು ಪಾತ್ರರಾಗಿದ್ದು, ಇದು ಇಲಾಖೆಯ ಹೆಮ್ಮೆ ಎಂದು ತಿಳಿಸಿದರು.

ಕೆಲಸದ ಒತ್ತಡದ ನಡುವೆಯೂ ಅಧ್ಯಯನ ನಡೆಸುವುದು ಸುಲಭದ ವಿಷಯವಲ್ಲ, ಈ ನಿಟ್ಟಿನಲ್ಲಿ ವೀಣಾ ಅವರ ಸಾಧನೆ ಎಲ್ಲರಿಗೂ ಆದರ್ಶವಾಗಿದೆ, ಅವರು ಪಿಹೆಚ್‌ಡಿ ಪಡೆಯಬೇಕೆಂಬ ಛಲ ಈಡೇರಿದ್ದು, ಅವರಿಗೆ ಮತ್ತಷ್ಟು ಗೌರವಗಳು ಸಿಗಲಿ ಎಂದು ಹಾರೈಸಿದರು.

ಸಂಶೋಧನೆಗೆ ಅವರು ಆಯ್ಕೆ ಮಾಡಿಕೊಂಡಿರುವ ವಿಷಯ ಅತ್ಯುತ್ತಮವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿಗಳಲ್ಲಿ ಮಕ್ಕಳ ಕುರಿತು ವಹಿಸಬೇಕಾದ ಮುನ್ನಚ್ಚರಿಕೆಗಳ ಕುರಿತು ತಿಳಿಸುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ ಇಲಾಖೆಯಲ್ಲಿ ಕೆಲಸದ ಒತ್ತಡ ಸಾಮಾನ್ಯ ಅದರೆ ಅದನ್ನು ಸವಾಲಾಗಿ ಸ್ವೀಕರಿಸಿ ಅಧ್ಯಯನ ಮಾಡಿದರೆ ಸಾಧನೆ ಮಾಡಬಹುದು ಎಂಬುದನ್ನು ವೀಣಾ ಅವರು ನಿರೂಪಿಸಿ, ಯುವ ಸಿಬ್ಬಂದಿಗೆ ಮಾದರಿಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೀಣಾ, ತಮಗೆ ಪಿಹೆಚ್‌ಡಿ ಪಡೆಯಲೇಕು ಎಂಬ ಹಠ ಇತ್ತು, ಅದನ್ನು ಇಂದು ಸಾಧಿಸಿದ್ದೇನೆ ಎಂಬ ಅತ್ಮತೃಪ್ತಿ ಇದೆ, ನನ್ನೀ ಸಣ್ಣ ಸಾಧನೆಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ತೋರಿರುವ ಪ್ರೀತಿ, ಶುಭ ಹಾರೈಕೆ ಎಂದಿಗೂ ಮರೆಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮಿವುಲ್ಲಾ, ಶರಣಪ್ಪ ಜಮಾದಾರ್, ಬಬಿತಾ, ವ್ಯವಸ್ಥಾಪಕ ಗೋವಿಂದಗೌಡ, ಅಧೀಕ್ಷಕ ದಿನೇಶ್‌ಬಾಬು, ಇಲಾಖೆಯ ಚಿರಂಜೀವಿ, ರವೀಂದ್ರ, ರವಿ,ವೇಣು, ಯಾಸೀನ್ ಉಪಸ್ಥಿತರಿದ್ದರು.

ಚಿತ್ರ : ಶಾಲಾ ಶಿಕ್ಷಣ ಇಲಾಖೆಯ ಕೋಲಾರ ಜಿಲ್ಲಾ ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ ಅವರು ಮಂಡಿಸಿದ್ದ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾಕ್ಟರೇಟ್ ನೀಡಿದೆ. ಅವರನ್ನು ಡಿಡಿಪಿಐ ಅಲ್ಮಾಸ್ ಫವೀನ್ ತಾಜ್ ಸನ್ಮಾನಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande