‘ಆದರ್ಶ ಪುರುಷ’ ಶ್ರೀರಾಮನನ್ನು ಕಾಂಗ್ರೆಸ್ ದ್ವೇಷಿಸುತ್ತಿದೆ : ಆರ್. ಅಶೋಕ್
ಕಾಂಗ್ರೆಸ್
Ashok


ಬೆಂಗಳೂರು, 03 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಮಹಾತ್ಮ ಗಾಂಧೀಜಿಯವರು ಸದಾ ‘ರಘುಪತಿ ರಾಘವ ರಾಜಾ ರಾಮ’ ಭಜನೆ ಹಾಡುತ್ತಿದ್ದರು. ಆದರೆ ಇಂದಿನ ಕಾಂಗ್ರೆಸ್ ಪಕ್ಷವು ಭಾರತೀಯ ಸಂಸ್ಕೃತಿಯ ‘ಆದರ್ಶ ಪುರುಷ’ರಾದ ಶ್ರೀರಾಮನನ್ನು ದ್ವೇಷಿಸುವ ಮನಸ್ಥಿತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಇದುವರೆಗೆ 18 ನಿರ್ಣಯಗಳನ್ನು ಅಂಗೀಕರಿಸಿದೆ. ಇಂತಹ ದಾಖಲೆ ಬೇರೆ ಯಾವುದೇ ರಾಜ್ಯದಲ್ಲಿಲ್ಲ ಎಂದು ಹೇಳಿದರು. ಇದೀಗ ಕಾಂಗ್ರೆಸ್ ಸರ್ಕಾರವು ವಿಬಿ–ಜಿ ರಾಮ್ ಜಿ ಕಾಯ್ದೆ ವಿಚಾರವಾಗಿ 19ನೇ ನಿರ್ಣಯವನ್ನು ಅಂಗೀಕರಿಸಲು ಮುಂದಾಗಿದೆ ಎಂದು ಟೀಕಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಆದರೆ ನಿರಂತರವಾಗಿ ಕೇಂದ್ರದ ವಿರುದ್ಧ ನಿರ್ಣಯಗಳ ಮೂಲಕ ಕಾಂಗ್ರೆಸ್ ಸರ್ಕಾರ ರಾಜಕೀಯ ದ್ವೇಷವನ್ನು ಪ್ರದರ್ಶಿಸುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದರು.

ಕೇಂದ್ರ–ರಾಜ್ಯ ಸಹಕಾರವೇ ಅಭಿವೃದ್ಧಿಯ ಮೂಲ ಎಂದು ಒತ್ತಿ ಹೇಳಿದ ಅವರು, ಜನರ ನಿಜವಾದ ಸಮಸ್ಯೆಗಳ ಬಗ್ಗೆ ಚಿಂತಿಸದೆ ರಾಜಕೀಯ ನಿರ್ಣಯಗಳಲ್ಲೇ ಸರ್ಕಾರ ತೊಡಗಿರುವುದು ದುಃಖಕರ ಸಂಗತಿ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande