ಉತ್ತರಾಖಂಡದಲ್ಲಿ ಎಚ್‌ಆರ್‌ಟಿಸಿ ಬಸ್ ಅಪಘಾತ ; ಮೂವರ ಸಾವು
ಡೆಹ್ರಾಡೂನ್, 03 ಫೆಬ್ರವರಿ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಕಲ್ಸಿ ಪ್ರದೇಶದ ಮೀನಕ್ ರಸ್ತೆಯ ಕುವಾನು ಬಳಿ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ. ನೆರ್ವಾದಿಂದ ಪೌಂಟಾ ಸಾಹಿಬ್‌ಗೆ ತೆರ
Accident


ಡೆಹ್ರಾಡೂನ್, 03 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಕಲ್ಸಿ ಪ್ರದೇಶದ ಮೀನಕ್ ರಸ್ತೆಯ ಕುವಾನು ಬಳಿ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ.

ನೆರ್ವಾದಿಂದ ಪೌಂಟಾ ಸಾಹಿಬ್‌ಗೆ ತೆರಳುತ್ತಿದ್ದ ಬಸ್ ಮತ್ತೊಂದು ವಾಹನವನ್ನು ಹಿಂದಿಕ್ಕುವ ವೇಳೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. SDRF, ಪೊಲೀಸರು ಹಾಗೂ ಸ್ಥಳೀಯ ಆಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande