
ಕಾಬೂಲ್, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಅಫ್ಘಾನಿಸ್ತಾನ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯ ಬಳಿಕ ಪ್ರತೀಕಾರ ಕ್ರಮವಾಗಿ ಅಫ್ಘಾನ್ ತಾಲಿಬಾನ್ ಪಡೆಗಳು ಮಿಲಿಟರಿ ಪ್ರತಿಕ್ರಿಯೆ ಆರಂಭಿಸಿದ್ದಾಗಿ ಹೇಳಲಾಗಿದೆ. ಕಳೆದ 48 ಗಂಟೆಗಳಿ0ದ ಗಡಿಯಲ್ಲಿನ ವಿರಳ ಗುಂಡಿನ ಚಕಮಕಿ ಇದೀಗ ಭಾರಿ ಶಸ್ತ್ರಾಸ್ತ್ರಗಳ ಬಳಕೆಗೆ ತಲುಪಿದೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ಪ್ರಕಾರ, ನಾಗರಿಕರ ಸಾವಿಗೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಸೇನಾ ನೆಲೆಗಳು ಮತ್ತು ಗಡಿ ಪೋಸ್ಟ್ಗಳನ್ನು ಗುರಿಯಾಗಿಸಿಕೊಂಡಿವೆ. ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ಗಳು, ಟ್ಯಾಂಕ್ಗಳು, ಫಿರಂಗಿ ಮತ್ತು ಮೋರ್ಟಾರ್ಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಂಗರ್ಹಾರ್–ಖೈಬರ್ ಮತ್ತು ಕುನಾರ್–ಬಜೌರ್ ಗಡಿ ಪ್ರದೇಶಗಳಲ್ಲಿ ದಾಳಿ ನಡೆಸಿ 15 ಪಾಕಿಸ್ತಾನಿ ಠಾಣೆಗಳನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಮಾಡಿದ್ದಾರೆ. ನಂಗರ್ಹಾರ್ ಪ್ರಾಂತ್ಯ ಗಡಿಯ ಬಳಿಯ ಎರಡು ಠಾಣೆಗಳು, ಗೋಶ್ತಾ ಪ್ರದೇಶದ ಬಳಿ ಮೂರು ಠಾಣೆಗಳು ಹಾಗೂ ಕುನಾರ್ ಪ್ರಾಂತ್ಯ ಗಡಿಯಲ್ಲಿನ ಎರಡು ಠಾಣೆಗಳಲ್ಲಿ ಅಫ್ಘಾನ್ ಪಡೆಗಳು ನೆಲೆಗೊಂಡಿರುವುದಾಗಿ ತಿಳಿಸಲಾಗಿದೆ. ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಗಳೂ ಹರಿದಾಡುತ್ತಿವೆ.
ಆದರೆ ಈ ವರದಿಯನ್ನು ಪಾಕಿಸ್ತಾನ ಸರ್ಕಾರ ಸ್ವತಂತ್ರವಾಗಿ ದೃಢೀಕರಿಸಿಲ್ಲ.
ಫೆಬ್ರವರಿ 22ರ ವೈಮಾನಿಕ ದಾಳಿ ಹಿನ್ನೆಲೆ
ಫೆಬ್ರವರಿ 22ರಂದು ಪಾಕಿಸ್ತಾನಿ ಯುದ್ಧವಿಮಾನಗಳು ಖೋಗ್ಯಾನಿ ಮತ್ತು ಘನಿ ಖೇಲ್ ಜಿಲ್ಲೆಗಳು (ನಂಗರ್ಹಾರ್) ಹಾಗೂ ಪಕ್ತಿಕಾ ಪ್ರಾಂತ್ಯದ ಬೆರ್ಮಲ್ ಮತ್ತು ಅರ್ಗುನ್ ಪ್ರದೇಶಗಳಲ್ಲಿ ದಾಳಿ ನಡೆಸಿದವು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ಒಂದೇ ಕುಟುಂಬದ 16 ನಾಗರಿಕರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದ್ದರೆ, ತಾಲಿಬಾನ್ ಆಡಳಿತವು ಇದನ್ನು ನಾಗರಿಕರ ಮೇಲಿನ ದಾಳಿ ಎಂದು ಕರೆದಿದ್ದು, ಪ್ರತೀಕಾರದ ಎಚ್ಚರಿಕೆ ನೀಡಿತ್ತು.
ಪ್ರಾದೇಶಿಕ ಭದ್ರತೆಗೆ ಆತಂಕ
ಗಡಿಯಲ್ಲಿ ಉಲ್ಬಣಗೊಳ್ಳುತ್ತಿರುವ ಮಿಲಿಟರಿ ಘರ್ಷಣೆ ಪ್ರಾದೇಶಿಕ ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ. ಗಡಿಯಾಚೆಗಿನ ಉಗ್ರ ಚಟುವಟಿಕೆಗಳ ಬಗ್ಗೆ ಎರಡೂ ರಾಷ್ಟ್ರಗಳು ಈ ಹಿಂದೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಲೇ ಬಂದಿವೆ. ಉದ್ವಿಗ್ನತೆ ಇಳಿಯದಿದ್ದರೆ, ಸಂಘರ್ಷವು ವ್ಯಾಪಕ ಸ್ವರೂಪ ಪಡೆಯುವ ಸಾಧ್ಯತೆಯ ಬಗ್ಗೆ ವಿಶ್ಲೇಷಕರು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa