
ಕೈವ್, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಷ್ಯಾ ಆಕ್ರಮಣದ ನಾಲ್ಕನೇ ವಾರ್ಷಿಕೋತ್ಸವದ ಮುನ್ನದಿನ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಪರವಾಗಿ ದೃಢ ಬೆಂಬಲ ಘೋಷಿಸುತ್ತಾರೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ಕೈವ್ನ ಅಧ್ಯಕ್ಷೀಯ ಭವನದಲ್ಲಿ ಮಾತನಾಡಿದ ಅವರು, ಮಂಗಳವಾರ ನಡೆಯಲಿರುವ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ರಷ್ಯಾ ವಿರುದ್ಧದ ಹೋರಾಟಕ್ಕೆ ಅಮೆರಿಕ ಬೆಂಬಲ ಸ್ಪಷ್ಟವಾಗಬೇಕು ಎಂದು ಮನವಿ ಮಾಡಿದರು.
ಸಿಎನ್ಎನ್ ವರದಿ ಪ್ರಕಾರ, “ಉಕ್ರೇನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಹೋರಾಟ ನಡೆಸುತ್ತಿದೆ. ಅಮೆರಿಕ ಶಕ್ತಿಶಾಲಿ ರಾಷ್ಟ್ರ. ಅದು ನಿಜವಾಗಿಯೂ ಪುಟಿನ್ ಅವರನ್ನು ತಡೆಯಬಹುದು. ನಾವು ಹಲವು ವರ್ಷಗಳಿಂದ ಹೋರಾಡಿ ದಣಿದಿದ್ದೇವೆ. ಆದರೆ ಪುಟಿನ್ ಅವರ ಬೇಡಿಕೆಗಳಿಗೆ ಮಣಿಯುವುದು ಆಯ್ಕೆಯಲ್ಲ,” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಯುದ್ಧ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲೂ ಉಕ್ರೇನ್–ರಷ್ಯಾ–ಅಮೆರಿಕ ನಡುವಿನ ತ್ರಿಪಕ್ಷೀಯ ಶಾಂತಿ ಮಾತುಕತೆಗಳು ಇನ್ನೂ ಫಲ ನೀಡಿಲ್ಲ. ಭವಿಷ್ಯದಲ್ಲಿ ರಷ್ಯಾ ಮತ್ತೊಮ್ಮೆ ದಾಳಿ ಮಾಡಿದರೆ ಮಿತ್ರ ರಾಷ್ಟ್ರಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದರು.
“ಮುಂಚೂಣಿಯಲ್ಲಿ ಹೋರಾಟ ನಿಲ್ಲಿಸಲು ನಾವು ಸಿದ್ಧ. ಆದರೆ ಪೂರ್ವದ ಡೊನೆಟ್ಸ್ಕ್ ಪ್ರದೇಶಗಳಿಂದ ಉಕ್ರೇನ್ ಸೈನ್ಯ ಹಿಂತೆಗೆದುಕೊಳ್ಳುವುದಿಲ್ಲ. ಆ ಪ್ರದೇಶದ ಸುಮಾರು 20% ಭಾಗವನ್ನು ಬಿಟ್ಟುಕೊಡಬೇಕೆಂದು ರಷ್ಯಾ ಒತ್ತಾಯಿಸುತ್ತಿದೆ. ನಾವು ಮಕ್ಕಳಲ್ಲ ದೇಶವನ್ನು ತಟ್ಟೆಯಲ್ಲಿ ಹಸ್ತಾಂತರಿಸಲು ಸಾಧ್ಯವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa