ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಜಾಗತಿಕ ಶೇ.10 ಸುಂಕಕ್ಕೆ ಟ್ರಂಪ್ ಸಹಿ
ವಾಷಿಂಗ್ಟನ್, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ಅಮೆರಿಕದ ಸುಪ್ರೀಂ ಕೋರ್ಟ್ ಇತ್ತೀಚಿನ ಸುಂಕ ನೀತಿಗಳನ್ನು ಅಸಂವಿಧಾನಿಕವೆಂದು ಘೋಷಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ದೇಶಗಳ ಮೇಲೂ ಶೇಕಡಾ 10 ರಷ್ಟು ಜಾಗತಿಕ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಸುಂಕ ತಕ
Trump post


ವಾಷಿಂಗ್ಟನ್, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅಮೆರಿಕದ ಸುಪ್ರೀಂ ಕೋರ್ಟ್ ಇತ್ತೀಚಿನ ಸುಂಕ ನೀತಿಗಳನ್ನು ಅಸಂವಿಧಾನಿಕವೆಂದು ಘೋಷಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ದೇಶಗಳ ಮೇಲೂ ಶೇಕಡಾ 10 ರಷ್ಟು ಜಾಗತಿಕ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಸುಂಕ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶ್ವೇತಭವನ ತಿಳಿಸಿದೆ.

ಯುಎಸ್ ಸುಪ್ರೀಂ ಕೋರ್ಟ್ ಇತ್ತೀಚೆಗೆ ಟ್ರಂಪ್ ಆಡಳಿತ ಜಾರಿಗೊಳಿಸಿದ್ದ ಕೆಲವು ಸುಂಕ ಕ್ರಮಗಳನ್ನು ಅಸಂವಿಧಾನಿಕವೆಂದು ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ ಫೆಬ್ರವರಿ 21ರಂದು ಅಧ್ಯಕ್ಷ ಟ್ರಂಪ್ ಹೊಸ ಆದೇಶ ಹೊರಡಿಸಿದ್ದು, ಈಗಿನ ಯುಎಸ್ ಸುಂಕಗಳ ಜೊತೆಗೆ ಹೆಚ್ಚುವರಿ ಶೇಕಡಾ 10 ರಷ್ಟು ಜಾಗತಿಕ ಸುಂಕ ವಿಧಿಸಲಾಗುತ್ತದೆ.

ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ರುತ್ ಸೋಷಿಯಲ್‌ ನಲ್ಲಿ ಈ ಕುರಿತು ಪ್ರಕಟಣೆ ಹಂಚಿಕೊಂಡಿದ್ದಾರೆ. ಅದನ್ನು ಶ್ವೇತಭವನವೂ ಮರುಹಂಚಿಕೆ ಮಾಡಿದ್ದು, “ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಈ ಕ್ರಮ ಅಗತ್ಯ” ಎಂದು ಉಲ್ಲೇಖಿಸಿದೆ.

ಈ ಸುಂಕವು ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ಈ ನಿರ್ಧಾರದಿಂದ ಹೊಸ ಚರ್ಚೆಗಳು ಆರಂಭವಾಗುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ನಿರಾಶಾದಾಯಕವೆಂದು ಹೇಳಿರುವ ಟ್ರಂಪ್, ತಮ್ಮ ವಾದಗಳನ್ನು ನ್ಯಾಯಾಲಯ ಸರಿಯಾಗಿ ಆಲಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇಂತಹ ತೀರ್ಪನ್ನು ತಾನು ನಿರೀಕ್ಷಿಸಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande