ಟಾಟಾ ಕಂಪನಿಗೆ ಕರೆಂಟ್ ಕಟ್ ಮಾಡುವಂತೆ ಕೋಲಾರ ಶಾಸಕರ ಪ್ರಚೋದನಾಕಾರಿ ಹೇಳಿಕೆ
ಟಾಟಾ ಕಂಪನಿಗೆ ಕರೆಂಟ್ ಕಟ್ ಮಾಡುವಂತೆ ಕೋಲಾರ ಶಾಸಕರ ಪ್ರಚೋದನಾಕಾರಿ ಹೇಳಿಕೆ
ಕೋಲಾರ ವೇಮಗಲ್ ಕೈಗಾರಿಕಾ ಪ್ರಾಂಗಣದಲ್ಲಿರುವ ಟಾಟಾ ಕಂಪನಿ ಮತ್ತು ಶಾಸಕ ಕೊತ್ತೂರು ಮಂಜುನಾಥ್


ಕೋಲಾರ,೨೩ ಫೆಬ್ರವರಿ (ಹಿ.ಸ) :

ಆ್ಯಂಕರ್ : ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಟಾಟಾ ಕಂಪನಿಯ ಸೇನಾ ಹೆಲಿಕಾಪ್ಟರ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೆ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ನೀಡಿರುವ ಪ್ರಚೋದನಾಕಾರಿ ಹೇಳಿಕೆ ರಾಜಕೀಯವಾಗಿ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚ್ಗೆ ಗ್ರಾಸವಾಗಿದೆ.

ಕಳೆದ ವಾರ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘಕವನ್ನು ಉದ್ಘಾಟಿಸಿದ್ದರು. ಕರ್ನಾಟಕ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಕೇಂದ್ರ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಹಾಗು ಫ್ರಾನ್ಸ್ ದೇಶದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲ ಆಹ್ವಾನಿತರಿಗ ಈ ಮೈಲ್ ಮೂಲಕ ಆಹ್ವಾನ ಮಾಡಲಾಗಿತ್ತು.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗು ಕೋಲಾರದ ಸಂಸದ ಎಂ.ಮಲ್ಲೇಶ್ ಬಾಬರವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ನಡೆದ ದಿನ ಕೊತ್ತೂರು ಮಂಜುನಾಥ್ ಮುಳಬಾಗಿಲು ತಾಲ್ಲೂಕಿನ ಆವಣಿಯಲ್ಲಿ ನಡೆದ ರಾಮಲಿಂಗೇಶ್ವರ ರಥೋತ್ಸವ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್ ಜೊತೆಯಲ್ಲಿ ಭಾಗಿಯಾಗಿದ್ದರು. ಆದರೆ ಮರುದಿನ ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿಯ ಸಭೆಯಲ್ಲಿ ಮಾತನಾಡಿದ ಮಂಜುನಾಥ್ ಪ್ರಚೋಧನಾಕಾರಿ ಹೇಳಿಕೆ ನೀಡಿದ್ದರು.

ಟಾಟಾ ಕಂಪನಿವರು ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಟಾಟಾ ಕಂಪನಿಗೆ ರೈತರು ಭೂಮಿ ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನಿಸದೆ ಅವಮಾನ ಮಾಡಲಾಗಿದೆ. ಕಂಪನಿಯರಿಗೆ ಬುದ್ದಿ ಕಲಿಸಬೇಕು ಎಂದು ಗುಡುಗಿದ್ದರು. ಕಂಪಮಿವರಿಗೆ ಹೇಗೆ ಬುದ್ದಿ ಕಲಿಸಬೇಕು ಎಂಬುದು ನನಗೆ ತಿಳಿದಿದೆ. ಪಟ್ಟಣ ಪಂಚಾಯಿತಿಯವರು ಕಂಪನಿಯ ಖಾತೆ ರದ್ದು ಮಾಡುತ್ತಾರೆ. ಟ್ರಾಕ್ಟರ್ ನುಗ್ಗಿಸಿ ಗೇಟ್ ಕೆಡವಲಾಗುವುದು. ಕಂಪನಿಯವರು ಪ್ರತ್ಯೇಕ ವಿದ್ಯುತ್ ಫೀಡರ್ ಅಳವಡಿಸಿಕೊಂಡಿಲ್ಲ.ಲೈನ್ಮಾನ್ಗೆ ಹೇಳಿ ಕರೆಂಟ್ ಕಟ್ ಮಾಡಲಾಗುವುದು.ಅವರಿಗೆ ಹೇಗೆ ಬುದ್ದಿ ಕಲಿಸಬೇಕು ಎಂಬುದು ತಿಳಿದಿದೆ. ನಮಗೆ ಕೈಗಾರಿಕೆಗಳು ಬೇಕಾಗಿಲ್ಲ.ನಾವು ರೈತರ ಪರ ಇದ್ದೇವೆ. ರೈತರು ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದ್ದಾರೆ. ಭೂಮೀ ನೀಡಿದ ರೈತರ ಮಕ್ಕಳಿಗೆ ವಾಚ್ಮಾನ್ ಹೌಸ್ ಕೀಪಿಂಗ್ ಅಂತಹ ಕೆಳದರ್ಜೆ ಕೆಲಸಗಳನ್ನು ನೀಡಲಾಗಿದೆ. ಆದರೆ ದೊಡ್ಡ ಹುದ್ದೆಗಳನ್ನು ಬೇರೆಯವರಿಗೆ ನೀಡಲಾಗಿದೆ. ಅವರೆಲ್ಲಾ ಏಷಾರಾಮಿ ಕಾರುಗಳಲ್ಲಿ ಬರುತ್ತಾರೆ. ಸ್ಥಳೀಯ ಕಾರ್ಮಿಕರನ್ನು ಹನ್ನೊಂದು ತಿಂಗಳ ನ0ತರ ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಮಂಜನಾಥ್ ಗುಡುಗಿದ್ದರು. ಸರೋಜನಿ ಮಹಿಷಿಯ ವರದಿಯ ಪ್ರಕಾರ ಸ್ಥಳೀಯರಿಗೆ ಉದ್ಯೋಗ ನೀಡದ ಕಂಪನಿಗಳು ನಮಗೆ ಬೇಕಾಗಿಲ್ಲ. ನಮಗೆ ಕೈಗಾರಿಕೆಗಳು ಬೇಕಾಗಿಲ್ಲ. ಅವರ ಬಳಿ ನಾನು ಹೋಗುವುದಿಲ್ಲ. ಕಂಪನಿಗಳಿಗೆ ಜನಪ್ರತಿನಿಧಿಗಳೆಂದರೆ ನಿರ್ಲಕ್ಷ.ಅವರಿಂದ ನಮಗೆ ಏನಾಗಬೇಕಾಗಿದೆ ಎಂದು ಕೈಗಾರಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಮಂಜುನಾಥ್ ಹೇಳಿಕೆಗೆ ಜೆಡಿಎಸ್ ಹಾಗು ಬಿ.ಜೆ.ಪಿ ಪಕ್ಷದವರು ತೀವ್ರ ಆಕ್ವೇಪವ್ಯಕ್ತಪಡಿಸಿದ್ದಾರೆ. ಕೂಡಲೇ ಮಂಜನಾಥ್ ಕ್ಚಮೆಯಾಚಿಸಬೇಕೇಂದು ಒತ್ತಾಯಿಸಿದ್ದಾರೆ. ಆದರೆ ಮಂಜುನಾಥ್ ವರಸೆ ಬದಲಾಯಿಸಿದ್ದಾರೆ. ನಾನು ಕಂಪನಿಗೆ ಕರಂಟ್ ಕತ್ತರಿಸಲು ಹೇಳಿಲ್ಲ. ಒಂದು ವೇಳೆ ಕತ್ತರಿಸಿದರೆ ಹೇಗೆ ಎಂದು ಹೇಳಿದೆ ಅಷ್ಟೆ ಎಂದು ತಾವು ನೀಡಿದ ಹೇಳಿಕೆಯಿಂದ ನುಣುಚಿಕೊಡರು.

ಟಾಟಾ ಕಂಪನಿಯ ಹೆಲಿಕಾಪ್ಟರ್ ಜೋಡಣೆಗೆ ಏರೋಸ್ಪೇಸ್ ಎರೋನಾಟಿಕಲ್ ಹಾಗು ಮೆಕಾನಿಕಲ್ ಇಂಜಿನಿಯರಿ0ಗ್ ಪದವಿಧರರು ಬೇಕಾಗಿದ್ದಾರೆ. ಸ್ಥಳೀಯವಾಗಿ ಉನ್ನತ ತಾಂತ್ರಿಕ ಶಿಕ್ಷಣ ಪಡೆದವರು ಲಭ್ಯವಲ್ಲ. ಟಾಟಾ ಕಂಪನಿ ಅಲ್ಲದೆ ಇತರ ಕಂಪನಿಗಳಿಗ ತಾಂತ್ರಿಕ ಪರಿಣತಿ ಪಡೆದವರು ದೊರೆಯುತ್ತಿಲ್ಲ. ಸರೋಜನಿ ಮಹಿಷಿ ವರದಿ ಸರ್ಕಾರದ ಕಡತಗಳಲ್ಲಿ ದೂಳು ತಿನ್ನುತ್ತಿದೆ. ಜಿ೨೦ ದೇಶಗಳ ನಡಡುವೆ ನಡೆದ ಒಪ್ಪಂದಗಳ ನ0ತರ ಸರೋಜನಿ ಮಹಿಷಿಯ ವರದಿ ಅಪಶೃತವಾಗಿದೆ. ಈ ಹಿಂದೆ ಸಿ ಮತ್ತು ಡಿ ದರ್ಜೆ ಉದ್ಯೋಗಗಳನ್ನು ಸ್ಥಳೀಯ ಕನ್ನಡಿಗರಿಗೆ ಮೀಸಲು ಇರಿಸಬೇಕೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಉದ್ಯಮಿಗಳು ಈ ಸುತ್ತೋಲೆಯನ್ನು ಹೈ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಹೈ ಕೋರ್ಟ್ ಸುತ್ತೋಲೆಯನ್ನು ರದ್ದುಗೊಳಿತ್ತು. ೮೦ರ ದಶಕದಲ್ಲಿ ಸರೊಜಿನಿ ಮಹಿಷಿ ಕರ್ನಾಟಕದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕೆಂದು ವರದಿ ನೀಡಿದ್ದರು. ಆ ನಂತರ ಔಧ್ಯಮಿಕ ಕ್ಷೇತ್ರದಲ್ಲಿ ಅಘಾದವಾದ ಬದಲಾವಣೆಗಳು ಆಗಿವೆ. ಕರ್ನಾಟಕ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಮನಮೋಹೋನ್ ಸಿಂಗ್ ಪ್ರದಾನಿಯಾಗಿದ್ದಾಗ ಉದಾರೀಕರಣ ಮತ್ತು ಖಾಸಗಿಕರಣದ ಪರ್ವ ಆರಂಭವಾಯಿತು. ಎಲ್ಲಾ ಕಾರ್ಮಿಕ ಕಾಯ್ದೆಗಳು ಕಂಪನಿಗಳ ಪರ ಇವೆ. ಗುತ್ತಿಗೆ ಪದ್ದತಿಯಿಂದಾಗಿ ಕಾರ್ಮಿಕರನ್ನು ಯಾವುದೇ ನೋಟೀಸ್ ನೀಡದೆ ಕಾರ್ಮಿಕರನ್ನು ಹೊರಹಾಕ ಬಹುದಾಗಿದೆ. ದುರ್ಬಲ ಕಾರ್ಮಿಕ ಕಾಯ್ದೆಗಳಿಂದಾಗಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲಾ. ಶಾಸಕ ಮಂಜುನಾಥ್ ರವರಿಗೆ ಉದಾರೀಕರಣ ಹಾಗು ಖಾಸಗೀಕರಣದ ಬಗ್ಗೆ ಯಾವುದೇ ಕನಿಷ್ಟ ಮಾಹಿತಿ ಇಲ್ಲ ಎನಿಸತ್ತದೆ.

ಸರ್ಕಾರಿ ವಲಯ ಸೇರಿದಂತೆ ಖಾಸಗಿ ಔದ್ಯೋಗಿಕ ವಲಯದಲ್ಲಿ ನೌಕರರನ್ನು ಗುತ್ತಿಗೆ ಮೇಲೆ ನೇಮಕ ಮಾಡಲಾಗುತ್ತದೆ. ಈ ಹಿಂದೆ ನೇಮಕಾತಿ ಆದೇಶ ನೀಡಲಾಗುತ್ತಿತ್ತು. ಆದರೆ ಜಿ೨೦ ರಾಷ್ಟçಗಳ ನಡುವಿನ ಒಪ್ಪಂದ ನಂತರ ನೇಮಕಾತಿ ಬದಲು ವಿಹ್ಯೇರ್ ಎಂದು ನೇಮಕಾತಿಯನ್ನು ವ್ಯಾಖ್ಯಾನಿಸಲಾಗುತ್ತಿದೆ. ಇದು ಗುತ್ತಿಗೆ ಪದ್ದತಿಯ ಮರು ವ್ಯಾಖ್ಯಾನವಾಗಿದೆ. ಇಡೀ ದೇಶದ ಖಾಸಗಿ ಉದ್ಯಮದಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕಾತಿ ಮಾಡಲಾಗುತ್ತಿದೆ. ಖಾಸಗಿ ಉದ್ಯಮದಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳೇ ಇಲ್ಲ. ಬದಲಾಗಿ ಖಾಸಗೀಕರಣ ಮತ್ತು ಉದಾರೀಕರಣದಿಂದಾಗಿ ಕಂಪನಿಗಳು ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಎಂದು ಹುದ್ದೆಗಳನ್ನು ವರ್ಗೀಕರಣ ಮಾಡಿವೆ. ಬಹುಶಃ ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ದೇಶದ ಖಾಸಗಿ ಉದ್ಯಮ ವಲಯದಲ್ಲಿ ಆಗಿರುವ ಬದಲಾವಣೆಗಳ ಅರಿವು ಇಲ್ಲ ಎನಿಸುತ್ತದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಡ್ ಪ್ಲಸ್ ಭದ್ರತಾ ವಲಯದಲ್ಲಿ ಇರುವ ಕಾರಣ ಶಿಷ್ಟಾಚಾರವನ್ನು ಪಾಲಿಸಲಾಗಿದೆ. ಅದರ ಪ್ರಕಾರ ಆಹ್ವಾನಿತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಚಿತ್ರ : ಕೋಲಾರ ವೇಮಗಲ್ ಕೈಗಾರಿಕಾ ಪ್ರಾಂಗಣದಲ್ಲಿರುವ ಟಾಟಾ ಕಂಪನಿ ಮತ್ತು ಶಾಸಕ ಕೊತ್ತೂರು ಮಂಜುನಾಥ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande