ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಪೋನ್‌ಇನ್ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿದರು.


ಕೋಲಾರ, ೧೨ ಫೆಬ್ರವರಿ (ಹಿ.ಸ) :

ಆ್ಯಂಕರ್ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕ ಹೋಗಲಾಡಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳ ವಿಷಯವಾರು ಪ್ರಶ್ನೆಗಳ ಜತೆಗೆ ಭಾವನಾತ್ಮಕ ಪ್ರಶ್ನೆಗಳಿಗೂ ಮಾನವೀಯ ನೆಲಗಟ್ಟಿನಲ್ಲಿ ಉತ್ತರ ನೀಡಿ ಗೊಂದಲ ಪರಿಹರಿಸಿ, ಆತ್ಮಸ್ಥೆöÊರ್ಯ ತುಂಬಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಕರೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬರುವ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಮೊದಲ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಷಯವಾರು ಅನುಮಾನಗಳಿಗೆ ಸಂಬ0ಧಿಸಿದ0ತೆ ಮಕ್ಕಳು ಒತ್ತಡಕ್ಕೆ ಸಿಲುಕಿದ್ದರೆ ಮಾಹಿತಿ ಸಂಗ್ರಹಿಸಿ, ಅಂತಹ ಶಾಲೆಗಳಿಗೆ ಸಂಪನ್ಮೂಲ ಶಿಕ್ಷಕರು ಹೋಗಿ ಒಂದು ಅವಧಿ ಪಾಠ ಮಾಡಿ ಆತ್ಮಸ್ಥೆöÊರ್ಯ ತುಂಬಿ ಬರುವ ಕೆಲಸ ಮಾಡೋಣ. ಮೊದಲ ಮತ್ತು ದ್ವಿತೀಯ ಪೂರ್ವಸಿದ್ದತಾ ಪರೀಕ್ಷೆ ವೇಳೆಗೆ ಶೇ.೭೦ ಫಲಿತಾಂಶ ವೃದ್ದಿಯಾಗಿದ್ದು, ಇದು ಶೇ.೧೦೦ ಆಗಲು ಸಂಕಲ್ಪದೊAದಿಗೆ ಕೆಲಸ ಮಾಡಲು ಶಿಕ್ಷಕರಿಗೆ ಕರೆ ನೀಡಿದ ಅವರು, ಯಾವುದೇ ಮಗು ಅನುತ್ತೀರ್ಣವಾಗಬಾರದು ಎಂದರು.

ಶಿಕ್ಷಣಾಧಿಕಾರಿ ಡಾ.ವೀಣಾ ಮಾತನಾಡಿ, ಫೋನ್ ಇನ್ ಕಾರ್ಯಕ್ರಮದಿಂದ ಮಕ್ಕಳಲ್ಲಿ ಶಿಕ್ಷಕರನ್ನು ಕೇಳಲಾಗದ ಗೊಂದಲಗಳಿಗೆ ಪರಿಹಾರ ಸಿಗಲಿದೆ, ಈ ಬಾರಿ ಶೇ.೧೦೦ ಫಲಿತಾಂಶಕ್ಕಾಗಿ ಇಲಾಖೆ ಪ್ರಯತ್ನ ನಡೆಸಿದ್ದು, ಶಿಕ್ಷಕರು ಸಹಕಾರ ನೀಡಬೇಕು. ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಕ್ಕಳು ಪರೀಕ್ಷೆ,ಪ್ರಶ್ನೆಪತ್ರಿಕೆ, ಕ್ಲಿಷ್ಟತೆ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಒಟ್ಟು ೧೭೨೨ ಪ್ರಶ್ನೆಗಳನ್ನು ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ಕೇಳಿ ಉತ್ತರ ಪಡೆದುಕೊಂಡರು ಎಂದು ತಿಳಿಸಿದ ಅವರು, ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿ ಮಕ್ಕಳಿಗೆ ಆತ್ಮಸ್ಥೆöÊರ್ಯ ತುಂಬಿದ್ದಾರೆ ಎಂದರು.

ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ ಮಾಹಿತಿ ನೀಡಿ, ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಸಂಬAಧಿಸಿದAತೆ ೩೬೫ ಪ್ರಶ್ನೆ, ದ್ವೀತೀಯ ಭಾಷೆ ಇಂಗ್ಲೀಷ್ ವಿಷಯಕ್ಕೆ ೪೮೦ ಪ್ರಶ್ನೆ, ಹಿಂದಿಗೆ ೧೪೫, ಗಣಿತ ವಿಷಯಕ್ಕೆ ಸಂಬ0ಧಿಸಿದ0ತೆ ೧೫೧, ವಿಜ್ಞಾನ ವಿಷಯಕ್ಕೆ ೩೧೫ ದೂರವಾಣಿ ಕರೆಗಳು, ಸಮಾಜವಿಜ್ಞಾನ ವಿಷಯಕ್ಕೆ ಸಂಬ0ಧಿಸಿದ0ತೆ ೨೧೯ ಕರೆ ಹಾಗೂ ಉರ್ದು ವಿಷಯಕ್ಕೆ ೪೭ ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.

೩ನೇ ಪೂರ್ವಸಿದ್ದತಾ ಪರೀಕ್ಷೆಗೆ ಸಿದ್ದತೆ, ಕಠಿಣ ಪ್ರಶ್ನೆಗಳು ಎಷ್ಟಿರುತ್ತವೆ, ವಾರ್ಷಿಕ ಪರೀಕ್ಷೆಗಳು ನಿಗಧಿಯಾದಂತೆ ನಡೆಯುತ್ತದೆಯೇ, ೧೦೦ ಅಂಕ ಗಳಿಕೆಗೆ ಏನು ಮಾಡಬೇಕು ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದರು. ಕೆಲವು ಮಕ್ಕಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗಧಿತ ವೇಳಾಪಟ್ಟಿಯಂತೆ ನಡೆಯುವುದೇ ಎಂದು ಪ್ರಶ್ನಿಸಿದ್ದು, ಅದಕ್ಕೆ ಹೌದು ಎಂದು ಉತ್ತರಿಸಿದ ಅವರು, ಪಠ್ಯಪುಸ್ತಕ ಹೊರತುಪಡಿಸಿ ಯಾವುದೇ ಕಾರಣಕ್ಕೂ ಪ್ರಶ್ನೆಗಳನ್ನು ಕೇಳುವುದಿಲ್ಲ. ಕನ್ನಡ,ಇಂಗ್ಲೀಷ್, ಹಿಂದಿಯಲ್ಲಿ ಮಕ್ಕಳು ವ್ಯಾಕರಣದ ಕುರಿತು ಹೆಚ್ಚು ಪ್ರಶ್ನೆ ಕೇಳಿದರೆ, ಗಣಿತದಲ್ಲಿ ೪ ಅಂಕಗಳ ಪ್ರಶ್ನೆ,ವಿಜ್ಞಾನದಲ್ಲಿ ರಸಾಯನಿಕ ಕ್ರಿಯೆಗಳ ಸಮೀಕರಣಗಳು ಮತ್ತು ಮಾನವ ವಿಕಾಸದ ಅಧ್ಯಾಯಗಳಿಂದ ಹೆಚ್ಚಿನ ಪ್ರಶ್ನೆ ಕೇಳಿದ ಮಕ್ಕಳು, ಸಮಾಜದಲ್ಲಿ ೩-೪ ಅಂಕದ ಪ್ರಶ್ನೆಗಳ ಕುರಿತು ಮಾಹಿತಿ ಕೇಳಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ಡಾ.ವೀಣಾ, ಸಹೀದಾ ಫಾತಿಮಾ, ಜಿಲ್ಲಾ ದೈಹಿಕ ಶಿಕ್ಷಣಧಿಕಾರಿ ಚಂದ್ರಶೇಖರ್, ವಿಷಯ ಪರಿವೀಕ್ಷಕ ಸಮೀವುಲ್ಲಾ, ಹಾಜರಿದ್ದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಮುಖ್ಯಶಿಕ್ಷಕ ಹನುಮನಹಳ್ಳಿ ಬಿ.ಕೆ.ನಾಗರಾಜ್,ರಾಜಣ್ಣ, ವಾಣಿ, ಬಿ.ಎ.ಕವಿತಾ, ರಮಾ,ವೇಣುಗೋಪಾಲ್, ಕೆ.ಎಸ್.ಪ್ರಭಾ, ಎನ್.ಎಸ್.ಭಾಗ್ಯ, ಟಿ.ಕೆ.ಗಂಗಾಧರಮೂರ್ತಿ, ನರಸಿಂಹರಾಜು, ಅಮರೇಶಬಾಬು, ಬಸವರಾಜ್, ಶ್ರೀನಿವಾಸಗೌಡ, ವಜಿಹಸುಲ್ತಾನ, ಫರೀದಾಬೇಗಂ-ಮತ್ತಿತರರು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು.

ಚಿತ್ರ : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಪೋನ್‌ಇನ್ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande