ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಕಾರ್ಯಕ್ರಮ
ಧಾರವಾಡ, 12 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮತ್ತು ಪೊಲೀಸ್ ಇಲಾಖೆಯ ಕಾರ್ಯಪದ್ಧತಿಯ ಕುರಿತು ತಿಳುವಳಿಕೆ ಹೆಚ್ಚಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ‘ತೆರೆದ ಮನೆ’ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಅಣ್ಣಿಗೇರಿ ಪೊಲೀಸ್ ಠಾಣ
Awareness


ಧಾರವಾಡ, 12 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮತ್ತು ಪೊಲೀಸ್ ಇಲಾಖೆಯ ಕಾರ್ಯಪದ್ಧತಿಯ ಕುರಿತು ತಿಳುವಳಿಕೆ ಹೆಚ್ಚಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ‘ತೆರೆದ ಮನೆ’ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಅಣ್ಣಿಗೇರಿ ಪೊಲೀಸ್ ಠಾಣೆಯ ವತಿಯಿಂದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಳ್ಳಾವರ ಪೊಲೀಸ್ ಠಾಣೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಾರಕೊಪ್ಪ, ಕುಂದಗೋಳ ಪೊಲೀಸ್ ಠಾಣೆಯಿಂದ ಜಿಎಸ್ಎಸ್ ಶಾಲೆ ಹಾಗೂ ಗರಗ ಪೊಲೀಸ್ ಠಾಣೆಯಿಂದ ಹೊಸ ತೇಗುರ್ ಗ್ರಾಮದ ಕರಿಯಮ್ಮ ದೇವಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮಗಳು ನಡೆಯಿತು.

ಈ ವೇಳೆ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ತುರ್ತು ಸಹಾಯವಾಣಿ–112, ಮಕ್ಕಳ ಸಹಾಯವಾಣಿ–1098 ಮತ್ತು ಸೈಬರ್ ಅಪರಾಧ ಸಹಾಯವಾಣಿ–1930 ಕುರಿತು ವಿವರಿಸಲಾಯಿತು.

ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆ ಹಾಗೂ ಕೊಟ್ಪಾ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಬಗ್ಗೆ ಅರಿವು ಮೂಡಿಸಿ, ವಿದ್ಯಾರ್ಥಿಗಳು ಕಾನೂನುಬದ್ಧ ಮತ್ತು ಜಾಗೃತ ನಾಗರಿಕರಾಗಿ ಬೆಳೆವಂತೆ ಮಾರ್ಗದರ್ಶನ ನೀಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande