ಸಮಯ ಸಾಧಕರ ಬಗ್ಗೆ ಎಚ್ಚರ ವಹಿಸಲು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕರೆ
ಸಮಯ ಸಾಧಕರ ಬಗ್ಗೆ ಎಚ್ಚರ ವಹಿಸಲು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕರೆ
ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ನಿಂದ ದ್ವಿತೀಯ ಪಿ.ಯುಸಿ ವಿದ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ಪುಸ್ತಕ ಯೋಜನೆಯಲ್ಲಿ ಪುಸ್ತಕಗಳನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿತರಿಸಿದರು.


ಕೋಲಾರ, ೧೦ ಫೆಬ್ರವರಿ (ಹಿ.ಸ) :

ಆ್ಯಂಕರ್ : ಸಮಾಜದಲ್ಲಿ ಎರಡು ಪಂಗಡಗಳಿವೆ, ಒಂದು ಸಾಧಕರು ಮತ್ತೊಂದು ಸಮಯ ಸಾಧಕರು ನಾವು ಸಾಧಕರಾಗುವ ಕಡೆ ಯೋಚಿಸಬೇಕಾದ ಅವಶ್ಯಕತೆ ಇದೆ ಎಂದು ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಮಾಲೂರು ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿರುವ ಸಭಾಭವನದಲ್ಲಿ ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪುನೀತ ಪುಸ್ತಕ ಯೋಜನೆಯ ಪುಸ್ತಕ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಸಾಧನೆಯ ಬಗ್ಗೆ ಹೆಚ್ಚು ಒಲವು ತೋರಿಸಿದರೆ ಸಾಧಕರ ಹಾದಿಯಲ್ಲಿ ಸಾಗಬಹುದು, ಅದಕ್ಕೆ ನೂರಾರು ಸಾಧಕರು ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ ಈಗಿನ ಸಮಾಜ ಚಲನಚಿತ್ರ ನಟರ, ಕ್ರಿಕೆಟ್ ಪಟುಗಳ ಅಭಿಮಾನಿಗಳಾಗಿ ಸಮಯ ಸಾಧಕತನದ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ, ಆದರೆ ಸಾಧನೆಯ ಹಾದಿಯಲ್ಲಿ ಸಾಗಿದರೆ ಮಾತ್ರ ಒಂದು ವೃಕ್ಷವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮರ ತನ್ನ ಇಡೀ ಬದುಕಿನಲ್ಲಿ ಇನ್ನೊಬ್ಬರ ಬದುಕಿಗೆ ಆಸರೆಯಾಗಿ ಬೇಕಾದ್ದುದನ್ನೇ ನೀಡುವ ಕಲ್ಪವೃಕ್ಷವಾಗುತ್ತದೆ. ಅದು ನಮಗೆ ಆದರ್ಶವಾಗಬೇಕು ಎಂದರು.

ಶಾಸಕ ಕೆ ವೈ ನಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ತಾಲೂಕು ನಮ್ಮದಾಗಬೇಕು. ಆ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಶ್ರಮಿಸಬೇಕಿದೆ ಅದಕ್ಕಾಗಿ ಬೇಕಾಗಿರುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ, ನಾವು ಹಾಗೂ ಆಡಳಿತ ವರ್ಗ ಮತ್ತು ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ನಂತಹ ಅನೇಕ ಸಂಘ-ಸ0ಸ್ಥೆಗಳು ಸಹ ಶ್ರಮಿಸುತ್ತಿದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕಿದೆ ಎಂದರು.

ಇಡೀ ರಾಜ್ಯದಲ್ಲೇ ಯೋಚಿಸದ ರೀತಿಯಲ್ಲಿ ನಮ್ಮ ಮಾಸ್ತಿ ಟಿ.ಸಿ. ರಮೇಶ್ ರವರ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಯೋಚಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪ್ರಶ್ನೋತ್ತರ ಕೋಶವನ್ನು ಸಿದ್ಧಪಡಿಸಿರುವುದು ನಮ್ಮ ಹೆಮ್ಮೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಮಾಸ್ತಿ ಟಿ.ಸಿ. ರಮೇಶ್ ರವರು ಪ್ರಸ್ತಾವಿಕವಾಗಿ ಮಾತನಾಡಿ ಬಾಲ್ಯದ ಬಡತನ ನನ್ನ ವಿದ್ಯಾಭ್ಯಾಸ ಹೆಚ್ಚಿಗೆ ಮುಂದುವರಿಸಲಾಗಲಿಲ್ಲ. ಈಗಿನ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ಇದೇ ರೀತಿ ಸಮಾಜಕ್ಕೆ ಅವಶ್ಯಕವಾದ ಅನೇಕ ಜನಪರ ಕಾರ್ಯಗಳು ಮಾಡಬೇಕೆಂಬುದು ನನ್ನ ಹಾಗೂ ನನ್ನ ಟ್ರಸ್ಟ್ ನ ಮೂಲ ಉದ್ದೇಶ ಆಗಿದೆ. ಆ ನಿಟ್ಟಿನಲ್ಲಿ ಶ್ರಮಿಸಲು ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಸಲಹೆ ಅತ್ಯಗತ್ಯ ಎಂದರು.

ಮಾಲೂರು ತಾಲೂಕಿನ ತಹಶೀಲ್ದಾರ್ ಎಂವಿ ರೂಪ ಮಾತನಾಡಿ ಪುಸ್ತಕಗಳು ನಮಗೆ ಎಲ್ಲವನ್ನೂ ನೀಡುತ್ತದೆ ಅದರ ಒಡನಾಟ ನಮ್ಮ ಬದುಕಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳಾಗಬೇಕು ಎಂದು ಅವರು ಕರೆ ಇತ್ತರು.

ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರಾದ ಪಲ್ಲವಿ ಮಣಿಯವರು ಮಾತನಾಡಿ ಗರ್ವದಿಂದ ಬೀಗದೆ ಗೌರವದಿಂದ ಬಾಗಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಪ್ರತಿಯೊಬ್ಬರ ಬಾಳಿನ ಬೆಳಕಾಗುವ ನಿಟ್ಟಿನಲ್ಲಿ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ಶ್ರಮಿಸುತ್ತಿದೆ ಅದಕ್ಕೆ ನಮ್ಮ ಸಹಕಾರವಿದ್ದರೆ ಇನ್ನಷ್ಟು ಸೇವೆ ಮಾಡುತ್ತದೆ. ಆ ನಿಟ್ಟಿನಲ್ಲಿ ನಾವು ಯೋಚಿಸೋಣ ಎಂದರು.

ನಿವೃತ್ತ ಜಂಟಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮಚಂದ್ರಪ್ಪ ಮಾತನಾಡಿ ನಮ್ಮ ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇವರ ಸೇವೆ ಲಭ್ಯವಾಗುತ್ತಿದೆ. ಮುಂದೆ ಇದು ಜಿಲ್ಲಾಮಟ್ಟಕ್ಕೂ ವಿಸ್ತರಿಸಲಿ ಎಂದು ಅವರು ನುಡಿದರು

ಕಾರ್ಯಕ್ರಮದಲ್ಲಿ ಧಾರವಾಹಿ ನಟಿ ಗೀತಾ ರಾಘವೇಂದ್ರ, ಶಶಿಕಲಾ, ಚೈತ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಂಪಯ್ಯ, ಮಾಸ್ತಿ ಪ್ರಾಂಶುಪಾಲರಾದ ರಾಮಣ್ಣ, ಹಿರಿಯ ಮುಖಂಡರಾದ ಆನೇಪುರ ಹನುಮಂತಪ್ಪ, ಅಶ್ವಥ್ ರೆಡ್ಡಿ, ಚಂದ್ರ ಶೇಖರ ಗೌಡ, ನಾರಾಯಣ ಗುರು ಮಹಾಸಂಸ್ಥಾನದ ಸಂಸ್ಥಾಪಕ ಅಂಬರೀಶ್, ವ್ಯವಸ್ಥಾಪಕ ಶ್ರೀನಿವಾಸ್, ಮಾಸ್ತಿ ರಘು, ರಮೇಶ್ ಬಾಬು, ಪ್ರಶಾಂತ್, ಸುನಿಲ್, ಶಂಕರ್, ಹಸಾಡಂಹಳ್ಳಿ ವಿಜಯ ಕುಮಾರ್, ಹಸಾಡಂಡಳ್ಳಿ ಕಲಾವಿದ ಶ್ರೀನಿವಾಸ್, ಕರಿಸಂದ್ರ ಮಂಜುನಾಥ್, ಗಣೇಶ್, ಬಂಟಹಳ್ಳಿ, ಸುರೇಶ್, ಬಂಟಹಳ್ಳಿ, ಶಿವಕುಮಾರ್ ಭಾಗವಹಿಸಿದ್ದರು.

ಚಿತ್ರ : ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ನಿಂದ ದ್ವಿತೀಯ ಪಿ.ಯುಸಿ ವಿದ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ಪುಸ್ತಕ ಯೋಜನೆಯಲ್ಲಿ ಪುಸ್ತಕಗಳನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande