
ನವದೆಹಲಿ, 01 ಫೆಬ್ರವರಿ (ಹಿ.ಸ.) :
ಆ್ಯಂಕರ್ : ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ ತಿಂಗಳ ಆರಂಭದಿಂದಲೇ 19 ಕೆಜಿ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ₹49 ರಿಂದ ₹50ರ ವರೆಗೆ ಹೆಚ್ಚಿಸಿವೆ. ಆದರೆ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ಉಪಹಾರ ಗೃಹ, ಕೈಗಾರಿಕಾ ಅಡುಗೆ ಕೇಂದ್ರಗಳ ಮೇಲೆ ವೆಚ್ಚದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಮನೆ ಬಳಕೆಯ ಅಡುಗೆ ಅನಿಲದ ದರ ಯಥಾಸ್ಥಿತಿಯಲ್ಲಿರುವುದರಿಂದ ಸಾಮಾನ್ಯ ಜನರ ಅಡುಗೆ ಬಜೆಟ್‌ಗೆ ತಕ್ಷಣದ ಹೊರೆ ಬೀರುವುದಿಲ್ಲ.
ತಜ್ಞರ ಪ್ರಕಾರ, ಅಂತಾರಾಷ್ಟ್ರೀಯ ಅನಿಲ ಬೆಲೆಗಳು ಹಾಗೂ ತೆರಿಗೆ ರಚನೆಯ ಆಧಾರದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ದರವನ್ನು ಪ್ರತೀ ತಿಂಗಳು ಪರಿಷ್ಕರಿಸಲಾಗುತ್ತದೆ.
ಜನವರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲದ ಬೆಲೆ ಏರಿಕೆಯಾದ ಹಿನ್ನೆಲೆ ಫೆಬ್ರವರಿ ತಿಂಗಳಿಗೆ ವಾಣಿಜ್ಯ ಸಿಲಿಂಡರ್ ದರ ಹೆಚ್ಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa