26 ವರ್ಷಗಳ ಬಳಿಕ ಭಾನುವಾರ ಷೇರು ಮಾರುಕಟ್ಟೆ ವಹಿವಾಟು
ನವದೆಹಲಿ, 01 ಫೆಬ್ರವರಿ (ಹಿ.ಸ.) : ಆ್ಯಂಕರ್ : ಸಾಮಾನ್ಯವಾಗಿ ಭಾನುವಾರ ಮುಚ್ಚಿರುವ ಷೇರು ಮಾರುಕಟ್ಟೆ ಇಂದು 26 ವರ್ಷಗಳ ಬಳಿಕ ವಿಶೇಷ ಕಾರಣಕ್ಕಾಗಿ ತೆರೆದುಕೊಳ್ಳಲಿದೆ. ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆ ಇಂದು ಭಾನುವಾರವೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಹಾಗೂ ಬಾಂಬೆ ಷೇರು ವಿನಿಮಯ ಕೇಂದ್
Stock market


ನವದೆಹಲಿ, 01 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಸಾಮಾನ್ಯವಾಗಿ ಭಾನುವಾರ ಮುಚ್ಚಿರುವ ಷೇರು ಮಾರುಕಟ್ಟೆ ಇಂದು 26 ವರ್ಷಗಳ ಬಳಿಕ ವಿಶೇಷ ಕಾರಣಕ್ಕಾಗಿ ತೆರೆದುಕೊಳ್ಳಲಿದೆ. ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆ ಇಂದು ಭಾನುವಾರವೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಹಾಗೂ ಬಾಂಬೆ ಷೇರು ವಿನಿಮಯ ಕೇಂದ್ರ (BSE)ಗಳಲ್ಲಿ ದಿನವಿಡೀ ಸಾಮಾನ್ಯ ವಹಿವಾಟು ನಡೆಯಲಿದೆ.

1999ರ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಭಾನುವಾರ ಬಜೆಟ್ ಮಂಡಿಸುತ್ತಿರುವುದರಿಂದ, ಮಾರುಕಟ್ಟೆಯನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ಫೆಬ್ರವರಿ 28, 1999ರಂದು ಭಾನುವಾರವೇ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಹಣಕಾಸು ಸಚಿವ ಯಶವಂತ ಸಿನ್ಹಾ ಕೇಂದ್ರ ಬಜೆಟ್ ಮಂಡಿಸಿದ್ದರು. ಆ ಕಾಲದಲ್ಲಿ ಪ್ರತಿವರ್ಷ ಫೆಬ್ರವರಿ 28ರಂದು ಬಜೆಟ್ ಮಂಡಿಸುವ ಸಂಪ್ರದಾಯವಿತ್ತು.

2017ರಿಂದ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂದಿದ್ದು, ಮಧ್ಯಂತರ ಬಜೆಟ್ ಹೊರತುಪಡಿಸಿ ಎಲ್ಲ ಬಜೆಟ್‌ಗಳನ್ನೂ ಈ ದಿನವೇ ಮಂಡಿಸಲಾಗುತ್ತಿದೆ. ಈ ವರ್ಷ ಫೆಬ್ರವರಿ 1 ಭಾನುವಾರ ಬಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ತೆರೆದಿಡಲು ನಿರ್ಧರಿಸಲಾಗಿದೆ.

ಬಜೆಟ್‌ವು ತೆರಿಗೆ ನೀತಿ, ಸರ್ಕಾರಿ ವೆಚ್ಚ, ಮೂಲಸೌಕರ್ಯ, ಉತ್ಪಾದನೆ, ಬ್ಯಾಂಕಿಂಗ್ ಹಾಗೂ ಬಂಡವಾಳ ಮಾರುಕಟ್ಟೆಗಳಿಗೆ ನೇರ ಪರಿಣಾಮ ಬೀರುವುದರಿಂದ, ಮಾರುಕಟ್ಟೆಯ ತ್ವರಿತ ಪ್ರತಿಕ್ರಿಯೆಗೆ ಅವಕಾಶ ಕಲ್ಪಿಸುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. ಮಾರುಕಟ್ಟೆ ಮುಚ್ಚಿದ್ದಲ್ಲಿ ಹೂಡಿಕೆದಾರರು ಮುಂದಿನ ವಹಿವಾಟು ದಿನದವರೆಗೆ ಕಾಯಬೇಕಾಗುತ್ತಿತ್ತು ಎಂಬುದು ಗಮನಾರ್ಹ.

ಇಂದು ಬಜೆಟ್ ಮಂಡನೆಯ ದಿನ ವಿಶೇಷ ನೇರ ವ್ಯಾಪಾರ ಅಧಿವೇಶನ ನಡೆಯಲಿದೆ ಎಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ತಮ್ಮ ಸುತ್ತೋಲೆಗಳ ಮೂಲಕ ಸ್ಪಷ್ಟಪಡಿಸಿವೆ. ಆದರೆ ಹೂಡಿಕೆದಾರರಿಗೆ ವ್ಯಾಪಾರ ಪ್ರಕ್ರಿಯೆ ಹಾಗೂ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಾರುಕಟ್ಟೆ ಸಮಯವೂ ಸಾಮಾನ್ಯ ದಿನಗಳಂತೆ ಬೆಳಿಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೆ ಇರುತ್ತದೆ.

ಬಜೆಟ್ ಭಾಷಣ ಸಾಮಾನ್ಯವಾಗಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಬಜೆಟ್ ಘೋಷಣೆಯ ತಕ್ಷಣವೇ ಹೂಡಿಕೆದಾರರು ತಮ್ಮ ಹೂಡಿಕೆ ತಂತ್ರಗಳನ್ನು ಪರಿಷ್ಕರಿಸಲು ಇದು ನೆರವಾಗಲಿದೆ. ವಿಶೇಷವಾಗಿ ಅಲ್ಪಾವಧಿ ವ್ಯಾಪಾರಿಗಳಿಗೆ ಈ ದಿನ ಮಹತ್ವದ್ದಾಗಿರಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande