
ಗ್ಯಾಂಗ್ಟಾಕ್, 08ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಿಕ್ಕಿಂನ ಭಾರತ–ಚೀನಾ ಗಡಿಭಾಗದಲ್ಲಿರುವ ಶೆರಥಾಂಗ್‌ಗೆ ಭೇಟಿ ನೀಡಿದರು.
ಪಾಕ್ಯಾಂಗ್ ಜಿಲ್ಲಾ ಮಾಹಿತಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಭೇಟಿಯ ಸಂದರ್ಭದಲ್ಲಿ ಶೆರಥಾಂಗ್ ಯುದ್ಧ ಸ್ಮಾರಕಕ್ಕೆ ತೆರಳಿ ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ಅಲ್ಲದೆ, ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇದಕ್ಕೂ ಮುನ್ನ ತಮ್ಮ ಪ್ರವಾಸದ ಮೊದಲ ದಿನವಾದ ನವೆಂಬರ್ 7ರಂದು ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಾಯುಪಡೆ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಯೋಧರೊಂದಿಗೆ ಸಂವಾದ ನಡೆಸಿದ್ದರು. ಬಳಿಕ ಸಿಲಿಗುರಿ ಸಮೀಪದ ಸುಕ್ನಾದಲ್ಲಿ ಭಾರತೀಯ ಸೇನೆಯ ಯೋಧರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.