ಎಲ್.ಕೆ. ಅಡ್ವಾಣಿ ಜನ್ಮದಿನ: ಉಪರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ
ನವದೆಹಲಿ, 08 ನವೆಂಬರ್ (ಹಿ.ಸ.): ದೇಶದ ಮಾಜಿ ಉಪಪ್ರಧಾನಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಜನ್ಮದಿನದ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಉ
भाजपा के वरिष्ठ नेता लालकृष्ण आडवाणी (फाइल फोटो)


ನವದೆಹಲಿ, 08 ನವೆಂಬರ್ (ಹಿ.ಸ.):

ದೇಶದ ಮಾಜಿ ಉಪಪ್ರಧಾನಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಜನ್ಮದಿನದ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿದ್ದು, ದಶಕಗಳ ಕಾಲ ಅಡ್ವಾಣಿ ಅವರು ಸಲ್ಲಿಸಿರುವ ಜನಸೇವೆ ಮತ್ತು ರಾಷ್ಟ್ರದ ಬಗೆಗಿನ ಸಮರ್ಪಣೆ ಭಾರತದ ಪ್ರಜಾಪ್ರಭುತ್ವದ ಪಯಣದ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಅವರಿಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ನೆಮ್ಮದಿ ದೊರೆಯಲಿ ಎಂದು ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಎಷ್ಟೇ ಕಠಿಣ ಪರಿಸ್ಥಿತಿಗಳು ಎದುರಾದರೂ ಹೊಸದಾಗಿ ಏನನ್ನಾದರೂ ನಿರ್ಮಿಸುವ ಅವರ ಸಂಕಲ್ಪ ಜೀವನದುದ್ದಕ್ಕೂ ಮುಂದುವರಿದಿತ್ತು. ಭಾರತೀಯ ಜನಸಂಘವನ್ನು ಬಲಪಡಿಸುವುದರಿಂದ ಹಿಡಿದು ಭಾರತೀಯ ಜನತಾ ಪಕ್ಷದ ನಿರ್ಮಾಣದವರೆಗೆ ಈ ಗುಣ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರ ಅಧಿಕಾರಾವಧಿಯಲ್ಲಿ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಅವರು ಉತ್ತಮ ಆರೋಗ್ಯದಿಂದಿರಲಿ ಹಾಗೂ ಎಲ್ಲರಿಗೂ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುತ್ತಿರಲಿ ಎಂದು ಹಾರೈಸಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರಾಷ್ಟ್ರದ ಬಗೆಗಿನ ಅಡ್ವಾಣಿ ಅವರ ಸಮರ್ಪಣೆ, ಸಾರ್ವಜನಿಕ ಜೀವನದ ಸುದೀರ್ಘ ಅನುಭವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗೆಗಿನ ಬದ್ಧತೆ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದ್ದಾರೆ. ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸುಖಮಯ ಜೀವನ ದೊರೆಯಲಿ ಎಂದು ಹಾರೈಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಡ್ವಾಣಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ನೈತಿಕತೆ, ಸಮರ್ಪಣೆ ಮತ್ತು ನಾಯಕತ್ವದ ಹೊಸ ಮಾದರಿಗಳನ್ನು ರೂಪಿಸಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಸ್ಥಾಪನೆಯಿಂದ ಹಿಡಿದು ಪಕ್ಷವನ್ನು ದೇಶದ ಮೂಲೆಮೂಲೆಗಳಿಗೆ ವಿಸ್ತರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ತಮ್ಮ ವ್ಯಕ್ತಿತ್ವ ಮತ್ತು ಕಾರ್ಯಗಳ ಮೂಲಕ ಭಾರತೀಯ ರಾಜಕೀಯವನ್ನು ಶ್ರೀಮಂತಗೊಳಿಸಿದ್ದಾರೆ. ಜನಸೇವೆಗೆ ಸಮರ್ಪಿತವಾದ ಅವರ ಜೀವನ ಹಾಗೂ ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿವೆ ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಾಮಾನ್ಯ ಕುಟುಂಬದಿಂದ ಬಂದ ಅಡ್ವಾಣಿ ಅವರು ಬಿಜೆಪಿಯ ಸಂಸ್ಥಾಪಕ ಸದಸ್ಯ, ರಾಷ್ಟ್ರೀಯ ಅಧ್ಯಕ್ಷ ಹಾಗೂ ದೇಶದ ಉಪಪ್ರಧಾನಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರತಿಯೊಂದು ಪಾತ್ರದಲ್ಲೂ ಜನಸೇವೆ ಮತ್ತು ರಾಷ್ಟ್ರ ಮೊದಲು ಎಂಬ ತತ್ವಕ್ಕೆ ಮಾದರಿಯಾಗಿದ್ದಾರೆ. ಹೋರಾಟ, ತ್ಯಾಗ ಮತ್ತು ತಪಸ್ಸಿನಿಂದ ಕೂಡಿದ ಅವರ ಜೀವನ ಮಾತೃಭೂಮಿ ಹಾಗೂ ಸಿದ್ಧಾಂತದ ಬಗೆಗಿನ ಸಮರ್ಪಣೆಯ ಮಹತ್ವವನ್ನು ಸಾರುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಡ್ವಾಣಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಮಂಗಳಕರ ಜೀವನ ದೊರೆಯಲಿ. ಅವರ ಮಾರ್ಗದರ್ಶನ ಎಲ್ಲರಿಗೂ ನಿರಂತರವಾಗಿ ಲಭಿಸಲಿ ಎಂದು ಹಾರೈಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ರಾಷ್ಟ್ರದ ಬಗೆಗಿನ ಅಡ್ವಾಣಿ ಅವರ ಸಮರ್ಪಣೆ, ವಿಚಾರಗಳಲ್ಲಿನ ದೃಢತೆ, ತತ್ವಗಳ ಬಗೆಗಿನ ಅಚಲ ನಿಷ್ಠೆ ಹಾಗೂ ಸಂಘಟನೆಯ ಬಗೆಗಿನ ಬದ್ಧತೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ ಎಂದು ತಿಳಿಸಿದ್ದಾರೆ. ಬಿಜೆಪಿಯನ್ನು ಬಲಿಷ್ಠ ಸಂಘಟನೆಯಾಗಿ ರೂಪಿಸುವುದರಿಂದ ಹಿಡಿದು ರಾಷ್ಟ್ರ ನಿರ್ಮಾಣದವರೆಗೆ ಅವರ ಕೊಡುಗೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭಗವಾನ್ ಶ್ರೀರಾಮನ ಕೃಪೆ ಅಡ್ವಾಣಿ ಅವರ ಮೇಲೆ ಸದಾ ಇರಲಿ. ಅವರು ಆರೋಗ್ಯವಂತರಾಗಿ ದೀರ್ಘಾಯುಷ್ಯ ಹೊಂದಲಿ ಹಾಗೂ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಎಲ್ಲರಿಗೂ ನಿರಂತರವಾಗಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಭಾರತೀಯ ಜನಸಂಘದಿಂದ ಭಾರತೀಯ ಜನತಾ ಪಕ್ಷದವರೆಗೆ ಸಂಘಟನೆಯ ವಿಸ್ತರಣೆ, ರಾಷ್ಟ್ರೀಯತೆಯ ವಿಚಾರಧಾರೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಹಾಗೂ ಶ್ರೀರಾಮ ಜನ್ಮಭೂಮಿ ಚಳವಳಿಯನ್ನು ಜನಾಂದೋಲನವನ್ನಾಗಿ ರೂಪಿಸುವಲ್ಲಿ ಅಡ್ವಾಣಿ ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿನ ಅವರ ನೈತಿಕತೆ ಮತ್ತು ಸಂಘಟನೆಯ ಬಗೆಗಿನ ಅಚಲ ನಿಷ್ಠೆ ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣೆಯಾಗಿರಲಿದೆ ಎಂದು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande