ಆಧುನಿಕ ಲಾಂಡ್ರಿ ಮಳಿಗೆ ಆರಂಭಿಸಲು ಮಡಿವಾಳ ಸಮುದಾಯದ ನಿರುದ್ಯೋಗಿ ಯುವಜನರಿಂದ ಅರ್ಜಿ ಆಹ್ವಾನ
ಧಾರವಾಡ, 28 ನವೆಂಬರ್ (ಹಿ.ಸ.): ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಯಡಿ ಆಧುನಿಕ ಲಾಂಡ್ರಿ ಮಳಿಗೆ ಆರಂಭಿಸಲು ಮಡಿವಾಳ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಡಿ ನಿಗಮದಿಂದ ಶೇ.4ರ ಬಡ್ಡಿದರ
ಆಧುನಿಕ ಲಾಂಡ್ರಿ ಮಳಿಗೆ ಆರಂಭಿಸಲು ಮಡಿವಾಳ ಸಮುದಾಯದ ನಿರುದ್ಯೋಗಿ ಯುವಜನರಿಂದ ಅರ್ಜಿ ಆಹ್ವಾನ


ಧಾರವಾಡ, 28 ನವೆಂಬರ್ (ಹಿ.ಸ.):

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಯಡಿ ಆಧುನಿಕ ಲಾಂಡ್ರಿ ಮಳಿಗೆ ಆರಂಭಿಸಲು ಮಡಿವಾಳ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯಡಿ ನಿಗಮದಿಂದ ಶೇ.4ರ ಬಡ್ಡಿದರದಲ್ಲಿ ಗರಿಷ್ಠ ₹5 ಲಕ್ಷ ಸಾಲ ಒದಗಿಸಲಾಗುತ್ತದೆ. ಈ ಸೌಲಭ್ಯದಲ್ಲಿ ಸಹಾಯಧನ ಇರುವುದಿಲ್ಲ. ಸಾಲ ಪಡೆಯುವ ಫಲಾನುಭವಿಯು ಸಾಲದ ಮೊತ್ತಕ್ಕೆ ಸಮನಾದ ಸ್ಥಿರಾಸ್ತಿಯನ್ನು ನಿಗಮದ ಹೆಸರಿನಲ್ಲಿ ಅಡಮಾನ ಇಡಬೇಕಾಗುತ್ತದೆ.

ಅರ್ಜಿದಾರರ ವಾರ್ಷಿಕ ಆದಾಯ ₹3.50 ಲಕ್ಷ ಮೀರಿರಬಾರದು. ವಯಸ್ಸು 55 ವರ್ಷ ಮೀರಿರಬಾರದು. ಈ ಹಿಂದೆ ಯಾವುದೇ ನಿಗಮದಿಂದ ಸಾಲ ಸೌಲಭ್ಯ ಪಡೆದಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಹಿಂದುಳಿದ ವರ್ಗಗಳ ಮಡಿವಾಳ, ಅಗಸ, ದೋಬಿ ಮತ್ತು ಪರೀಟ್ ಸಮುದಾಯದ ಅರ್ಹ ಅರ್ಜಿದಾರರು ಸೇವಾಸಿಂಧು ತಾಣದ ಮೂಲಕ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಹುಬ್ಬಳ್ಳಿ-ಧಾರವಾಡ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ನಿಗಮದ ಜಾಲತಾಣ www.kmmd.karnataka.gov.in ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಡಿಸೆಂಬರ್ 24, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿಯ ಸಹಾಯವಾಣಿ ಸಂಖ್ಯೆ 0836-2957829 ಸಂಪರ್ಕಿಸಬಹುದು ಎಂದು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande