ಮಣಿಲಾದ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಪ್ರಧಾನಿ ಮೋದಿ ಭೇಟಿ
ನವದೆಹಲಿ, 17 ನವೆಂಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಫಿಲಿಪ್ಪೀನ್ಸ್ ರಾಜಧಾನಿ ಮಣಿಲಾದಲ್ಲಿರುವ ಐತಿಹಾಸಿಕ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಭೇಟಿ ನೀಡಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಮಣಿಲಾದ ಗುರುದ್ವಾರ ಖಾಲ್ಸಾ ದಿವಾನ್‌ಗೆ ಭೇಟ
प्रधानमंत्री नरेन्द्र मोदी के साथ अन्य लोग मौजूद।


ನವದೆಹಲಿ, 17 ನವೆಂಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಫಿಲಿಪ್ಪೀನ್ಸ್ ರಾಜಧಾನಿ ಮಣಿಲಾದಲ್ಲಿರುವ ಐತಿಹಾಸಿಕ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಭೇಟಿ ನೀಡಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಮಣಿಲಾದ ಗುರುದ್ವಾರ ಖಾಲ್ಸಾ ದಿವಾನ್‌ಗೆ ಭೇಟಿ ನೀಡಿರುವುದು ಅತ್ಯಂತ ಧನ್ಯತೆಯ ಭಾವನೆ ಮೂಡಿಸಿದೆ. ಇದು ಫಿಲಿಪ್ಪೀನ್ಸ್‌ನ ಅತ್ಯಂತ ಹಳೆಯ ಗುರುದ್ವಾರವಾಗಿದೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತ ಮತ್ತು ಫಿಲಿಪ್ಪೀನ್ಸ್ ನಡುವಿನ ಸಜೀವ ಸಾಂಸ್ಕೃತಿಕ ಸಂಬಂಧ ಹಾಗೂ ಜನರ ನಡುವಿನ ಬಾಂಧವ್ಯಕ್ಕೆ ಈ ಗುರುದ್ವಾರ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಣಿಲಾದ ಈ ಗುರುದ್ವಾರದ ಪುನರ್ವಿಕಾಸ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದ ನೇತೃತ್ವವನ್ನೂ ಪ್ರಧಾನಿ ವಹಿಸಿದರು.

23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಫಿಲಿಪ್ಪೀನ್ಸ್ ರಾಜಧಾನಿ ಮಣಿಲಾಗೆ ಆಗಮಿಸಿದ್ದಾರೆ.

ಮಣಿಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫಿಲಿಪ್ಪೀನ್ಸ್‌ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಬರ್ಟ್ ಜೋಸೆಫ್ 'ಜೇ' ಮಾಂಟೆಸ್ ಡಿ ಕ್ಲಾರೊ ಅವರು ಪ್ರಧಾನಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಮುದಾಯದವರು 'ವಂದೇ ಮಾತರಂ' ಘೋಷಣೆಗಳೊಂದಿಗೆ ಪ್ರಧಾನಿಗೆ ಸ್ವಾಗತ ಕೋರಿದರು. ಮಕ್ಕಳು ಸಂಸ್ಕೃತ ಮಂತ್ರಗಳನ್ನು ಪಠಿಸುವುದರ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande