ಏಷ್ಯಾಕ್ಕೆ ಸುರಕ್ಷಿತ, ಸದೃಢ ಇಂಧನ ಭವಿಷ್ಯ ನಿರ್ಮಿಸಲು ಭಾರತ ಬದ್ಧ: ವಿಕ್ರಮ್ ಮಿಸ್ರಿ
ನವದೆಹಲಿ, 17 ನವೆಂಬರ್ (ಹಿ.ಸ.): ಏಷ್ಯಾಕ್ಕೆ ಸುರಕ್ಷಿತ ಮತ್ತು ಸದೃಢ ಇಂಧನ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಇಂಧನ ಭದ್ರತೆ, ಆರ್ಥಿಕ ಭದ್ರತೆ ಹಾಗೂ
विदेश सचिव विक्रम मिसरी मंगलवार को मनीला में आयोजित चौथी एशिया जीरो-एमिशन कम्युनिटी (एजेडईसी) नेताओं की बैठक को संबोधित करते हुए


ನವದೆಹಲಿ, 17 ನವೆಂಬರ್ (ಹಿ.ಸ.):

ಏಷ್ಯಾಕ್ಕೆ ಸುರಕ್ಷಿತ ಮತ್ತು ಸದೃಢ ಇಂಧನ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಇಂಧನ ಭದ್ರತೆ, ಆರ್ಥಿಕ ಭದ್ರತೆ ಹಾಗೂ ಪೂರೈಕೆ ಸರಪಳಿಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ ನಾಲ್ಕನೇ ಏಷ್ಯಾ ಶೂನ್ಯ ಹೊರಸೂಸುವಿಕೆ ಸಮುದಾಯದ ನಾಯಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಪಾನ್ ಮತ್ತು ಫಿಲಿಪ್ಪೀನ್ಸ್ ಜಂಟಿಯಾಗಿ ಈ ಸಭೆಯನ್ನು ಆಯೋಜಿಸಿದ್ದವು.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ ವಿಕ್ರಮ್ ಮಿಸ್ರಿ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ. ಏಷ್ಯಾಕ್ಕೆ ಸುರಕ್ಷಿತ ಮತ್ತು ಸದೃಢ ಇಂಧನ ಭವಿಷ್ಯ ರೂಪಿಸಲು ಇಂಧನ ಕ್ಷೇತ್ರದ ಸ್ಥಿರತೆ ಹಾಗೂ ಆರ್ಥಿಕ ಭದ್ರತೆಯ ವಿಚಾರದಲ್ಲಿ ಸಮಾನ ಮನಸ್ಕ ಪಾಲುದಾರ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಪಾನ್‌ನ 'ಬ್ರಿಡ್ಜ್ ಏಷ್ಯಾ' ಉಪಕ್ರಮಕ್ಕೆ ಭಾರತದ ಸ್ವಾಗತ

ಪ್ರಾದೇಶಿಕ ಪಾಲುದಾರ ರಾಷ್ಟ್ರಗಳ ನಡುವೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿರುವ ಜಪಾನ್‌ನ 'ಬ್ರಿಡ್ಜ್ ಏಷ್ಯಾ' ಉಪಕ್ರಮವನ್ನೂ ಭಾರತ ಸ್ವಾಗತಿಸಿದೆ.

ಏಷ್ಯಾ ಶೂನ್ಯ ಹೊರಸೂಸುವಿಕೆ ಸಮುದಾಯದ ನಾಯಕರ ಸಭೆಯಲ್ಲಿ ಜಪಾನ್ ಪ್ರಧಾನಿ ಸಾನೆ ತಕೈಚಿ ಈ ಉಪಕ್ರಮವನ್ನು ಪ್ರಸ್ತಾಪಿಸಿದ್ದರು. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಯೋಗದ ಸಂಶೋಧನೆ, ಅಭಿವೃದ್ಧಿ ಹಾಗೂ ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳುವುದು ಈ ಉಪಕ್ರಮದ ಉದ್ದೇಶವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande