
ನವದೆಹಲಿ, 17 ನವೆಂಬರ್ (ಹಿ.ಸ.):
ಭಾರತೀಯ ನೌಕಾಪಡೆಯು ಜಪಾನ್ ಕಡಲ ಸ್ವರಕ್ಷಣಾ ಪಡೆಯೊಂದಿಗೆ ನಡೆಸಿದ ದ್ವಿಪಕ್ಷೀಯ ಸಮುದ್ರ ಸಮರಾಭ್ಯಾಸ ‘ಜೈಮೆಕ್ಸ್’ನಲ್ಲಿ ಪಾಲ್ಗೊಂಡಿತು. ಈ ಅಭ್ಯಾಸವು ಎರಡೂ ದೇಶಗಳ ನೌಕಾಪಡೆಗಳ ನಡುವಿನ ಕಾರ್ಯಾಚರಣಾ ಸಹಕಾರ ಮತ್ತು ಸಮನ್ವಯವನ್ನು ಮತ್ತಷ್ಟು ಬಲಪಡಿಸಲು ನೆರವಾಯಿತು.
ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಹಡಗು ಸಹ್ಯಾದ್ರಿಯು ಜಪಾನ್ ನೌಕಾಪಡೆಯ ಹಡಗಿನೊಂದಿಗೆ ವಿವಿಧ ಸಮುದ್ರ ಕಾರ್ಯಾಚರಣೆಗಳಲ್ಲಿ ಭಾಗವಹಿಸಿತು. ಯುದ್ಧತಂತ್ರದ ಚಲನವಲನ, ಸಂವಹನ ಕವಾಯತು ಹಾಗೂ ಪರಸ್ಪರ ಹಡಗುಗಳಲ್ಲಿ ವಿಮಾನ ಇಳಿಸುವ ಅಭ್ಯಾಸ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಯಿತು.
ಈ ಸಮರಾಭ್ಯಾಸದ ಮೂಲಕ ಎರಡೂ ನೌಕಾಪಡೆಗಳು ಜಂಟಿ ಕಾರ್ಯಾಚರಣೆಗಳ ಸಮನ್ವಯವನ್ನು ಅಭ್ಯಾಸ ಮಾಡುವುದರ ಜೊತೆಗೆ ಪರಸ್ಪರರ ಕಾರ್ಯವಿಧಾನಗಳು ಮತ್ತು ಸಾಮರ್ಥ್ಯಗಳ ಕುರಿತು ತಿಳುವಳಿಕೆ ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯಿತು. ಕಾರ್ಯಾಚರಣಾ ಹೊಂದಾಣಿಕೆ, ಸಮನ್ವಯ ಮತ್ತು ಭಾಗವಹಿಸಿದ ಘಟಕಗಳ ನಡುವಿನ ಪರಸ್ಪರ ತಿಳುವಳಿಕೆಯನ್ನು ಬಲಪಡಿಸುವುದಕ್ಕೆ ಅಭ್ಯಾಸದಲ್ಲಿ ಆದ್ಯತೆ ನೀಡಲಾಯಿತು.
ಜೈಮೆಕ್ಸ್ನಲ್ಲಿ ಐಎನ್ಎಸ್ ಸಹ್ಯಾದ್ರಿ ಪಾಲ್ಗೊಂಡಿರುವುದು ಭಾರತ ಮತ್ತು ಜಪಾನ್ ನಡುವಿನ ಬೆಳೆಯುತ್ತಿರುವ ಸಮುದ್ರ ಸಹಭಾಗಿತ್ವ ಹಾಗೂ ಉಭಯ ನೌಕಾಪಡೆಗಳ ನಿರಂತರ ಸಹಕಾರವನ್ನು ಪ್ರತಿಬಿಂಬಿಸುತ್ತದೆ. ಇಂತಹ ಅಭ್ಯಾಸಗಳು ಪರಸ್ಪರ ವಿಶ್ವಾಸ ವೃದ್ಧಿ, ಕಾರ್ಯಾಚರಣಾ ಅನುಭವಗಳ ವಿನಿಮಯ ಮತ್ತು ಸಮುದ್ರ ವಲಯದಲ್ಲಿನ ಸಹಕಾರವನ್ನು ಬಲಪಡಿಸಲು ನೆರವಾಗುತ್ತವೆ. ಸುರಕ್ಷಿತ ಹಾಗೂ ಸ್ಥಿರ ಇಂಡೋ-ಪೆಸಿಫಿಕ್ ವಲಯ ನಿರ್ಮಾಣಕ್ಕೆ ಎರಡೂ ದೇಶಗಳ ನೌಕಾಪಡೆಗಳ ಬದ್ಧತೆಯನ್ನು ಈ ಅಭ್ಯಾಸ ಮತ್ತಷ್ಟು ದೃಢಪಡಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.