ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣಪ್ಪ ಅವಿರೋಧ ಆಯ್ಕೆ
ಕೋಲಾರ, 16 ನವೆಂಬರ್ (ಹಿ.ಸ.) ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ಹಿಂದಿ ಮಹಿಳಾ ಸೇವಾ ಸಮಿತಿಯಲ್ಲಿ ನಡೆದ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮಹಾಸಭೆಯಲ್ಲಿ ನೂತನ ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಘದ ರಾಜ್ಯಾಧ್ಯಕ್ಷರಾಗಿ ಕೋಲಾರ ಜಿಲ್ಲ
ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಕೋಲಾರದ ವಿ.ವಿ.ರಾಮಕೃಷ್ಣಪ್ಪ ಆಯ್ಕೆಯಾಗಿದ್ದಾರೆ.


ಕೋಲಾರ, 16 ನವೆಂಬರ್ (ಹಿ.ಸ.)

ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ಹಿಂದಿ ಮಹಿಳಾ ಸೇವಾ ಸಮಿತಿಯಲ್ಲಿ ನಡೆದ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮಹಾಸಭೆಯಲ್ಲಿ ನೂತನ ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಘದ ರಾಜ್ಯಾಧ್ಯಕ್ಷರಾಗಿ ಕೋಲಾರ ಜಿಲ್ಲೆಯ ವಿ.ವಿ. ರಾಮಕೃಷ್ಣಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅದರಂತೆ, ಉಪಾಧ್ಯಕ್ಷರಾಗಿ ಬೆಂಗಳೂರಿನ ಮಮತಾ ಡಿ., ಕಾರ್ಯದರ್ಶಿಯಾಗಿ ಹಾವೇರಿಯ ಡಾ. ಮಾಲತೇಶ್ ಎಂ. ಚಲವಾದಿ, ಖಜಾಂಚಿಯಾಗಿ ಬಳ್ಳಾರಿಯ ಮೆಹಬೂಬ್ ಬಾಷಾ, ಗೌರವಾಧ್ಯಕ್ಷರಾಗಿ ಚಿತ್ರದುರ್ಗದ ಮಂಜುನಾಥ್ ಡಿ., ಕಾರ್ಯಾಧ್ಯಕ್ಷರಾಗಿ ಬಾಗಲಕೋಟೆಯ ಅವಿನಾಶ ಹಿರೇಮಠ್ ಆಯ್ಕೆಯಾಗಿದ್ದಾರೆ.

ಮಾಧ್ಯಮ ಕಾರ್ಯದರ್ಶಿಯಾಗಿ ಮೈಸೂರಿನ ಡಾ. ವಿಜೆ, ಸಹ ಕಾರ್ಯದರ್ಶಿಯಾಗಿ ಕಲಬುರಗಿಯ ರವಿ ಚಹ್ವಾನ್, ಸಂಘಟನಾ ಕಾರ್ಯದರ್ಶಿಯಾಗಿ ಚಿಕ್ಕಬಳ್ಳಾಪುರದ ಶ್ರೀನಿವಾಸ್ ಕೆ.ವಿ., ಮಹಿಳಾ ಕಾರ್ಯದರ್ಶಿಯಾಗಿ ತುಮಕೂರಿನ ಡಾ. ಲೀಲಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೊಡಗಿನ ಮಹೇಂದ್ರ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬೆಳಗಾವಿಯ ಡಾ. ಸುನೀಲ್ ಪರೀಟ್ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗಂಗಾಧರ್ ಅವರು ನೂತನ ಪದಾಧಿಕಾರಿಗಳ ಸರ್ವಾನುಮತದ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದು, ನೂತನ ಸಮಿತಿಯ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರು.

ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ವಿ. ರಾಮಕೃಷ್ಣಪ್ಪ ಅವರು ಮೂಲತಃ ಮುಳಬಾಗಿಲಿನವರಾಗಿದ್ದು, ಸರ್ಕಾರಿ ಅನುದಾನಿತ ಪ್ರೌಢಶಾಲೆಯಾದ ಹೆಚ್. ಗೊಲ್ಲಹಳ್ಳಿಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಈವರೆಗೆ ಕೋಲಾರ ಜಿಲ್ಲಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande