ಕುರಟಹಳ್ಳಿ ಕೃಷಿ ಸಾಧಕ ರಾಧಕೃಷ್ಣಗೆ ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ
ಕುರಟಹಳ್ಳಿ ಕೃಷಿ ಸಾಧಕ ರಾಧಕೃಷ್ಣಗೆ ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ
ಚಿಂತಾಮಣಿ ತಾಲ್ಲೂಕಿನ ಕುರಟಹಳ್ಳಿಯ ರಾಧಕೃಷ್ಣ ರವರನ್ನು ಅತ್ಯುತ್ತಮ ಕೃಷಿ ಸಾಧನೆಗಾಗಿ ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ವಿಜ್ಞಾನ ಮೇಳದಲ್ಲಿ ಸನ್ಮಾನಿಸಲಾಯಿತು.


ಕೋಲಾರ, 16 ನವೆಂಬರ್ (ಹಿ.ಸ.):

ಗಾಂಧಿ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆದ ಕೃಷಿಮೇಳದ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿ ರಾಧಕೃಷ್ಣರವರ ಕೃಷಿ ಸಾದನೆಗಾಗಿ ಕೃಷಿ ಸಚಿವ ಪಿ.ಎಂ.ನರೇ0ದ್ರಸ್ವಾಮಿ ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದರು.

ಚಿಂತಾಮಣಿ ತಾಲೂಕಿನ ಕುರಟಹಳ್ಳಿ ಗ್ರಾಮದ ಜೀಮನಪಲ್ಲಿ ರಾಮಪ್ಪ ಮತ್ತು ರಾಮಕ್ಕ ಅವರ ೩ನೇ ಮಗ ಸಿ.ಆರ್ ರಾಧಾಕೃಷ್ಣ ೧೯೭೮ರಲ್ಲಿ ಬಿ.ಎಸ್ಸಿ ಪದವೀಧರರು. ಮೂವರು ಸಹೋದರರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮೂಲ ಕಸಬು ಕುರಿ ಮತ್ತು ಹಂದಿ ಸಾಕಾಣಿಕೆ. ಮೊದಲಿಗೆ ಎರಡು ಎಕರೆಯಲ್ಲಿ ಆರಂಭಗೊAಡ ಇವರ ಕೃಷಿ ಜೀವನ ಇಂದು ೫೦ ಎಕರೆಯವರೆಗೂ ವಿಸ್ತಿರಿಸಿರುವುದು ಒಂದು ಯಶೋಗಾಧೆ ಮತ್ತು ಸಾಹಸಮಯ ಕೃಷಿ ಬದುಕು.

ತಂದೆಯ ಪ್ರೇರಣೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ೨೦ ಸದಸ್ಯರ ಅವಿಭಕ್ತ ಕುಟುಂಬ ಇಡೀ ತಾಲೂಕಿನಲ್ಲಿ ಮಾದರಿ ಕೃಷಿ ಕುಟುಂಬವಾಗಿದೆ. ಇವರ ಕೃಷಿ ಬದುಕನ್ನು ಬೆಂಗಳೂರು ಚಂದನ ದೂರದರ್ಶನ ವಾಹಿನಿಯಲ್ಲಿ ಪ್ರಸಾರಗೊಂಡ ರೈತ ರತ್ನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಕೃತಿಯ ಅರಿವೇ ಜ್ಞಾನ, ಕೃಷಿಯ ಅರಿವೇ ಜೀವನ, ಜ್ಞಾನ, ವಿಜ್ಞಾನ, ಜೀವನ ಒಂದಾದರೆ ಮಾತ್ರ ಉಜ್ಜೀವನ ಇದು ಕೃಷಿಯಿಂದ ಮಾತ್ರ ಸಾಧ್ಯ ಎಂಬುವುದನ್ನು ರಾಧಾಕ್ಷೃಷ್ಣ ರವರು ಸಾಧಿಸಿ ತೋರಿಸಿದ್ದಾರೆ. ಕುಟುಂಬದ ಪ್ರತಿಯೊಬ್ಬರು ದುಡಿಮೆಯಲ್ಲಿ ತೊಡಗಿರುವುದೇ ಅವರ ಯಶಸ್ಸಿಗೆ ಸಕಾರಣ. ಒಕ್ಕಲತನದಲ್ಲಿ ಆದಾಯ ವೃದ್ಧಿ ಮಾಡಿಕೊಂಡ ರೈತ ಕಟುಂಬವಾಗಿದೆ.

ರಾಧಾಕೃಷ್ಣರ ಕೃಷಿ ಬದುಕು ಒಂದು ಪಾಠಶಾಲೆ, ಅವರ ಕೃಷಿ ಭೂಮಿಯೇ ಒಂದು ವಿಶ್ವವಿದ್ಯಾಲಯ, ಕೃಷಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ, ಅಂತರ್ಜಲಕ್ಕಾಗಿ ಹತ್ತಾರು ಸಮಸ್ಯೆಗಳನ್ನು ಎದುರಿಸಿ, ಸುಮಾರು ೧೨ ಬೋರ್ವೆಲ್ ಗಳನ್ನು ೨೦೦೦ ಅಡಿಗಳವರೆಗೂ ಕೊರಿಸಿ ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿ, ಆಧುನಿಕ ಕೃಷಿಯಲ್ಲಿ ಹಲವಾರು ಹೊಸ ಸಮಸ್ಯೆಗಳು ಹೆಚ್ಚಾಗಿ ಆದಾಯ ಕುಂಠಿತಗೊ0ಡು ಕೃಷಿಯಿಂದ ವಿಮುಖರಾಗಬೇಕೆನಿಸಿದಾಗ ೨೦೦೬ರಲ್ಲಿ ಸುಭಾಷ್ ಪಾಳೇಕಾರ್ ಅವರಿಂದ ತರಬೇತಿ ಪಡೆದರು. ಜಲತಜ್ಞ ಅಯ್ಯಪ್ಪ ಮಸಗಿ ಮಾರ್ಗದರ್ಶನದಲ್ಲಿ ಹನಿಹನಿ ನೀರನ್ನು ಬಳಸಿಕೊಂಡು ಜಲಸ್ವಾಲಂಬನೆ ಸಾಧಿಸಿದರು.

ರಾಧಾಕೃಷ್ಣರವರು ಪರಿಸರ ಮತ್ತು ಪ್ರಕೃತಿಯನ್ನು ದೇವರೆಂದು ಇಂದಿಗೂ ಆರಾಧಿಸುತ್ತಾರೆ. ಕೃಷಿಯಲ್ಲಿ ಬಂದ ಲಾಭದಲ್ಲಿಯೇ ಬದುಕು ಕಟ್ಟಿಕೊಂಡು ಸಮಗ್ರ ಕೃಷಿಯೊಂದಿಗೆ ಜಾನುವಾರುಗಳ ಪೋಷಣೆಯೊಂದಿಗೆ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ತಾತ್ಪಕತೆಯನ್ನು ಉಳಸಿಕೊಂಡು ಬಂದಿದ್ದಾರೆ. ಒಬ್ಬ ಸಾಮಾನ್ಯ ಕೃಷಿಕನಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಮತ್ತು ಕುಕ್ಕಟ ಸಾಕಾಣಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅವರ ಕೃಷಿ ಭೂಮಿ ಪ್ರಾಯೋಗಿಕವಾಗಿ ಕೃಷಿವಿಶ್ವವಿದ್ಯಾನಿಲಯವಾಗಿದೆ. ಹಲವಾರು ಕೃಷಿ ವಿಜ್ಞಾನಿಗಳೊಂದಿಗೆ, ಮೈಸೂರು, ತುಮಕೂರು, ಗದಗ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತ ತಂಡಗಳು ಕೃಷಿ ಅಧ್ಯಯನ ಪ್ರವಾಸದಲ್ಲಿ ರಾಧಾಕೃಷ್ಣ ಅವರ ಕೃಷಿ ಭೂಮಿಗೆ ಬೇಟಿ ನೀಡಿರುತ್ತಾರೆ.

ಆಧುನಿಕ ಕೃಷಿಯೊಂದಿಗೆ, ಸಮಗ್ರ ಕೃಷಿ, ಸಾವಯವ ಕೃಷಿ, ಶೂನ್ಯ ಬಂಡವಾಳದ ಕೃಷಿ ಪ್ರಕೃತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಹೇಗೆ ಕೃಷಿಯಿಂದ ಲಾಭ ಪಡೆಯಬಹುದುಉಒ ಕಸಬುಗಳನ್ನು ಯಾವ ರೀತಿಯಲ್ಲಿ ಕೈಗೊಂಡು ರೈತ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ರಾಧಾಕೃಷ್ಣ ವಿವರಿಸುತ್ತಾರೆ. ಶ್ರೀಗಂಧ, ಸಾಗವಾನೆ , ತೆಂಗು, ಸೀಬೆ ನುಗ್ಗೆ, ಮಾವು, ಹಲಸು, ಜಂಬು ನೇರಳೆ, ಹುಣಸೆ ಬೆಳೆದು ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ. ಸಂಪೂರ್ಣ ಸಾವಯವ ಕೃಷಿಗೆ ಅಳವಡಿಸಿ ತೋಟದಲ್ಲಿ ಮಿಶ್ರ ಬೆಳೆಯಾಗಿ ಅವರೆ, ಹುರಳಿ, ಅಲಸಂದೆ, ತೊಗರಿ ಬೆಳೆಯುತ್ತಿದ್ದಾರೆ. ಕುಟುಂಬಕ್ಕೆ ಬೇಕಾದ ತರಕಾರಿಗಳನ್ನು ಬೆಳೆದು ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆದು ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿದ್ದಾರೆ.

ಉಪಕಸುಬಗಳಾಗಿ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯನ್ನು ವಾಣಿಜ್ಯಕರಣಗೊಳಿಸಿ ಮೂಲ ಆದಾಯ ಹೆಚ್ಚಿಸಿಕೊಳ್ಳಲು ಸಾಕಾಣಿಕೆಯ ಚಾವಣೆಯಲ್ಲಿ ಸೊಲಾರ್ ವಿದ್ಯುತ್ ಉತ್ಪಾದನೆ ಮಾಡಿ ವಾರ್ಷಿಕ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಕೃಷಿ ಭೂಮಿಯಲ್ಲಿ ಸದಾ ಉತ್ತಮ ಪರಿಸರ ಮತ್ತು ಹಸರೀಕರಣ ಸೃಷ್ಟಿಸಿದ್ದಾರೆ. ಅವರ ಕೃಷಿ ಸಾಧನೆಗಾಗಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ೨೦೧೬ ರಲ್ಲಿ ಶ್ರೇಷ್ಟ ತೋಟಗಾರಿಕೆ ರೈತಪ್ರಶಸ್ತಿ, ೨೦೧೭ ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಿ.ಬೈರೇಗೌಡ ರಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ೨೦೧೮ ರಲ್ಲಿ ಕೇಂದ್ರ ಸರ್ಕಾರದ ಬೆಸ್ಟ್ ಶಿಫ್ ಪಾರ್ಮರ್ ರಾಷ್ಟಿçÃಯ ಪ್ರಶಸ್ತಿ, ೨೦೧೯ ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಲ್ಯೂಮಿನಿ ಅಸೋಸಿಯೇಷನ್ ಸಕಲವರ ರಾಮಯ್ಯರೆಡ್ಡಿ, ೨೦೨೪ ರಲ್ಲಿ ಪ್ರೊ.ಜಿ.ಕೆ.ವಿರೇಶ್ ರಾಜ್ಯಮಟ್ಟದ ಪ್ರಶಸ್ತಿ, ೨೦೨೫ ರಲ್ಲಿ ಮಾಜಿ ಪ್ರಧಾನೊ ದೇವೇಗೌಡ ರಾಜ್ಯಮಟ್ಟದ ಶ್ರೇಷ್ಟ ಕೃಷಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ಎಲ್ಲಾ ಪ್ರಶಸ್ತಿಗಳು ಗೌರವಯುತವಾಗಿ ತಮ್ಮ ಕುಟುಂಬದ ಸದಸ್ಯರ ಪ್ರತಿ ಬೆವರಿನ ಹನಿಗಳಿಗೆ ಅರ್ಪಣೆ ಮಾಡುತ್ತೇನೆ ಎಂದು ರಾಧಾಕೃಷ್ಣ ಅವರು ತಮ್ಮ ಮನದಾಳದ ಮಾತುಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ವೇಳೆ ಕೇಂದ್ರ ಸೂಕ್ಷö್ಮ ಮತ್ತು ಮದ್ಯಮ ಉದ್ಯಮಗಳ ಸಚಿವೆ ಶೋಭ ಕರಂದ್ಲಾಜ್ಲೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್, ಸುದಾಮ್ದಾಸ್, ಕುಲಪತಿ ಡಾ.ಪಿ.ವೆಂಕಟರವಣ, ಕೃಷಿ ಇಲಾಖೆ ಕಾರ್ಯದರ್ಶಿ ಡಾ.ತ್ರಿಲೋಕಚಂದ್ರ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande