
ಬೆಂಗಳೂರು, 08 ಅಕ್ಟೋಬರ್ (ಹಿ.ಸ.):
ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ಆಯೋಜಿಸಿರುವ ಎಸ್‌ಐಆರ್ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಧ್ರುವ್ ರಾಠೀ ಭಾಗವಹಿಸಿರುವುದನ್ನು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಪ್ರಶ್ನಿಸಿದ್ದಾರೆ.
ವಿದೇಶಿ ನಾಗರಿಕರಾಗಿರುವ ಧ್ರುವ್ ರಾಠೀ ಅವರಿಗೆ ಭಾರತದ ಚುನಾವಣಾ ವ್ಯವಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ರಾಜಕೀಯ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಇರುವ ಕಾನೂನು ಆಧಾರವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಧ್ರುವ್ ರಾಠೀ ಮತ್ತು ಸಿಜೆಪಿ ಈ ಕುರಿತು ಸ್ಪಷ್ಟ ಉತ್ತರ ನೀಡಬೇಕು ಎಂದು ಭಾಸ್ಕರರಾವ್ ಆಗ್ರಹಿಸಿದ್ದಾರೆ.
ಭಾರತದ ಚುನಾವಣಾ ವ್ಯವಸ್ಥೆ ಭಾರತೀಯ ನಾಗರಿಕರ ಹಕ್ಕು ಮತ್ತು ಹೊಣೆಗಾರಿಕೆಯಾಗಿರುವಾಗ, ಭಾರತದ ಆಂತರಿಕ ಚುನಾವಣಾ ರಾಜಕೀಯದಲ್ಲಿ ವಿದೇಶಿ ನಾಗರಿಕರಿಗೆ ಸಕ್ರಿಯ ಪಾತ್ರ ಏಕೆ ನೀಡಲಾಗುತ್ತಿದೆ ಎಂಬುದನ್ನೂ ಅವರು ಪ್ರಶ್ನಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.