ಬೆಂಗಳೂರು ಕೌಶಲ್ಯ ಶೃಂಗಸಭೆಯ ಎರಡನೇ ಆವೃತ್ತಿ ನ.3ರಿಂದ
ಬೆಂಗಳೂರು, 07 ಅಕ್ಟೋಬರ್ (ಹಿ.ಸ.): ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ–2026’ರ ಎರಡನೇ ಆವೃತ್ತಿಯನ್ನು ನವೆಂಬರ್ 3ರಿಂದ 5ರವರೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ನಲ್ಲಿ ಆಯೋಜಿಸಲಾಗಿದೆ. ‘ವರ್ಕ್ಫೋರ್ಸ್ 2030: ಸ್ಕೇಲ
bengaluru-skill-summit-second-edition-to-be-held-from-november-3


ಬೆಂಗಳೂರು, 07 ಅಕ್ಟೋಬರ್ (ಹಿ.ಸ.):

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ–2026’ರ ಎರಡನೇ ಆವೃತ್ತಿಯನ್ನು ನವೆಂಬರ್ 3ರಿಂದ 5ರವರೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ನಲ್ಲಿ ಆಯೋಜಿಸಲಾಗಿದೆ.

‘ವರ್ಕ್ಫೋರ್ಸ್ 2030: ಸ್ಕೇಲ್, ಸಿಸ್ಟಮ್ಸ್, ಸಿನರ್ಜಿ’ ಎಂಬ ಧ್ಯೇಯದೊಂದಿಗೆ ಶೃಂಗಸಭೆ ನಡೆಯಲಿದೆ. ಕೃತಕ ಬುದ್ಧಿಮತ್ತೆ ಹೊಸ ತಂತ್ರಜ್ಞಾನಗಳು ಹಾಗೂ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರಕ್ಕೆ ಅನುಗುಣವಾಗಿ ಯುವಜನರನ್ನು ಸಜ್ಜುಗೊಳಿಸುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.

ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಸಂಸ್ಥೆಗಳು ಹಾಗೂ ಯುವಜನರನ್ನು ಒಂದೇ ವೇದಿಕೆಗೆ ತಂದು ಭವಿಷ್ಯದ ಕೌಶಲ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಚರ್ಚೆ ನಡೆಸಲಾಗುತ್ತದೆ.

“ಕೃತಕ ಬುದ್ಧಿಮತ್ತೆ ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ.

ಮುಂದಿನ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪರಿವರ್ತನೆ ನಡೆಯಲಿದ್ದು, ನಮ್ಮ ಯುವಜನರನ್ನು ಅದಕ್ಕೆ ಸಿದ್ಧಗೊಳಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ.

ಜಾಗತಿಕ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಯುವಜನರಿಗೆ ತರಬೇತಿ ಮತ್ತು ಅವಕಾಶಗಳನ್ನು ಒದಗಿಸುವುದು ನಮ್ಮ ಗುರಿ,” ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.

ಶೃಂಗಸಭೆಯಲ್ಲಿ ‘ಎಮರ್ಜಿಂಗ್ ಸ್ಕಿಲ್ಸ್’, ‘ಸ್ಕಿಲ್ಸ್ ಫಾರ್ ಆಲ್’, ‘ಇನ್ನೋವೇಶನ್’ ಮತ್ತು ‘ಗ್ಲೋಬಲ್ ಸ್ಕಿಲ್ಸ್’ ಎಂಬ ನಾಲ್ಕು ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

AI, ಹಸಿರು ಉದ್ಯೋಗಗಳು, ಮಹಿಳಾ ಕೌಶಲ್ಯಾಭಿವೃದ್ಧಿ, ಗಿಗ್ ಆರ್ಥಿಕತೆ ಹಾಗೂ ಜಾಗತಿಕ ಉದ್ಯೋಗಾವಕಾಶಗಳು ಪ್ರಮುಖ ವಿಚಾರಗಳಾಗಿವೆ.

6,500ಕ್ಕೂ ಹೆಚ್ಚು ಪ್ರತಿನಿಧಿಗಳು, 150ಕ್ಕೂ ಅಧಿಕ ಭಾಷಣಕಾರರು, 50ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 100ಕ್ಕೂ ಅಧಿಕ ಪಾಲುದಾರರು ಭಾಗವಹಿಸುವ ನಿರೀಕ್ಷೆಯಿದೆ.

ಜಪಾನ್ ಈ ಬಾರಿಯ ಶೃಂಗಸಭೆಯಲ್ಲಿ ‘ಕಂಟ್ರಿ ಪಾರ್ಟ್ನರ್’ ಆಗಿ ಭಾಗವಹಿಸಲಿದ್ದು, AI, ರೊಬೋಟಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕರ್ನಾಟಕದ ಯುವಜನರಿಗೆ ಜಾಗತಿಕ ಅವಕಾಶಗಳನ್ನು ಕಲ್ಪಿಸುವ ಕುರಿತು ಸಹಭಾಗಿತ್ವಕ್ಕೆ ಒತ್ತು ನೀಡಲಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande