
ಬಳ್ಳಾರಿ, 06 ಅಕ್ಟೋಬರ್ (ಹಿ.ಸ.)
ಛಾಯಾಚಿತ್ರ ಪತ್ರಕರ್ತ ವೇಣಿ ಲೋಕನಾಥ್ ಅವರ ಶ್ರದ್ಧಾಂಜಲಿ ಸಭೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿತ್ತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಎನ್. ವೀರಭದ್ರಗೌಡ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಶ್ರೀಯುತ ವೇಣಿ ಲೋಕನಾಥ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ನಿವೃತ್ತ ವಾರ್ತಾಧಿಕಾರಿಗಳಾದ ಚೋರನೂರು ಟಿ.ಕೊಟ್ರಪ್ಪ, ವಾರ್ತಾ ಸಹಾಯಕರಾದ ವಿ.ಸಿ. ಗುರುರಾಜ್, ಹಿರಿಯ ಪತ್ರಕರ್ತರಾದ ಜಿ.ಪ್ರಭಾಕರ್, ಎಂ. ಅಹಿರಾಜ್, ಪತ್ರಕರ್ತರಾದ ಎಚ್.ಎಂ.ಮಹೇಂದ್ರಕುಮಾರ್, ಹನುಮೇಶರಾವ್, ಹೆಚ್.ಬಸವರಾಜ್, ಮೊದಲಾದವರು ಲೋಕನಾಥ ಅವರ ಜೊತೆಗಿನ ಸಂಬಂಧ, ಅವರ ಪೆÇೀಟೋಗ್ರಫಿ, ಸುದ್ದಿಗೆ ಸೂಕ್ತವಾದ ಪೆÇೀಟೋವನ್ನು ಸಕಾಲಕ್ಕೆ ನೀಡುವಲ್ಲಿ ಅವರ ಕರ್ತವ್ಯ ಪ್ರಜ್ಞೆ, ಸಮಯಪ್ರಜ್ಞೆ, ಅಖಂಡ ಬಳ್ಳಾರಿ ಜಿಲ್ಲೆಯ ಪ್ರಮುಖ ವಿದ್ಯಮಾನಗಳನ್ನು ಸೆರೆ ಹಿಡಿಯುವ ಕುರಿತು ಮಾತನಾಡಿದರು.
ಮುಖ್ಯಮಂತ್ರಿ ಸೇರಿ ಸಚಿವರು - ಅಧಿಕಾರಿಗಳನ್ನು ಕಾಡಿ - ಬೇಡಿ ತಮಗೆ ಬೇಕಾದ ಫೋಟೋಗಳನ್ನು ಸೆರೆ ಹಿಡಿಯುವುದರಲ್ಲಿ ಸಿದ್ದಹಸ್ತರಾಗಿದ್ದರು ವೇಣಿ ಲೋಕನಾಥ್ ಅವರು. ಅಷ್ಟೇ ಅಲ್ಲ ಅವರು, ಪೆÇೀಟೋ ಲೈಬ್ರರಿಯಾಗಿದ್ದರು. ಮಾಧ್ಯಮ ಕ್ಷೇತ್ರದವರ ಯಾವುದೇ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮಾತೃಹೃದಯಿ ಆಗಿದ್ದರು ಎಂದರು.
ಪತ್ರಕರ್ತರಾದ ಎನ್. ಗುರುಶಾಂತ, ನಂದೀಶ್, ಜಿ. ಚಂದ್ರಶೇಖರಗೌಡ, ಮಾರೆಪ್ಪ, ನರಸಿಂಹ ಮೂರ್ತಿ ಕುಲಕರ್ಣಿ, ವೆಂಕೋಬಿ ಸಂಗನಕಲ್ಲು, ವೆಂಕಟೇಶ ದೇಸಾಯಿ, ಮಲ್ಲಿಕಾರ್ಜುನ ಚಿಲಕರಾಗಿ, ತಾಳೂರು ಎರ್ರಿಸ್ವಾಮಿ, ಜಂಭುನಾಥ, ಮಲ್ಲಿಕಾರ್ಜುನ, ಈ. ಗೋವರ್ಧನರೆಡ್ಡಿ, ಖಲಂದರ್, ಗಿರಿಯಾದವ್, ವಾರ್ತಾ ಇಲಾಖೆಯ ಹನುಂಮತಪ್ಪ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್