ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಆನೆ ಆಯ್ಕೆ ಬಹುತೇಕ ಅಂತಿಮ; ಧನಂಜಯನತ್ತ ಅರಣ್ಯ ಇಲಾಖೆ ಚಿತ್ತ
ಮೈಸೂರು, 04 ಅಕ್ಟೋಬರ್ (ಹಿ.ಸ.): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರುವ ಆನೆ ಯಾರು? ಎಂಬ ಕುತೂಹಲ ಮೂಡಿದೆ. ಪ್ರತಿಷ್ಠಿತ ಅಭಿಮನ್ಯು ಆನೆ ನಿವೃತ್ತಿಯಾದ ಹಿನ್ನೆಲೆಯಲ್ಲಿ, ಈ ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರುವ ಆನೆಯ ಆಯ್ಕೆ
mysore-dasara-2026-dhananjaya-elephant-likely-to-carry-golden-howdah


ಮೈಸೂರು, 04 ಅಕ್ಟೋಬರ್ (ಹಿ.ಸ.):

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರುವ ಆನೆ ಯಾರು? ಎಂಬ ಕುತೂಹಲ ಮೂಡಿದೆ.

ಪ್ರತಿಷ್ಠಿತ ಅಭಿಮನ್ಯು ಆನೆ ನಿವೃತ್ತಿಯಾದ ಹಿನ್ನೆಲೆಯಲ್ಲಿ, ಈ ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರುವ ಆನೆಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಧನಂಜಯ ಆನೆಯ ಹೆಸರು ಮುಂಚೂಣಿಗೆ ಬಂದಿದೆ.

ಅಂಬಾರಿ ಹೊರುವ ಆನೆಯ ಆಯ್ಕೆಗಾಗಿ ಅರಣ್ಯ ಇಲಾಖೆ ವಿವಿಧ ಹಂತಗಳಲ್ಲಿ ತಾಲೀಮು ಹಾಗೂ ಪರಿಶೀಲನೆ ನಡೆಸಿದೆ. ಈ ಪ್ರಕ್ರಿಯೆಯಲ್ಲಿ ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಆನೆಗಳು ಪ್ರಮುಖವಾಗಿ ಪರಿಗಣನೆಯಲ್ಲಿವೆ. ತಾಲೀಮು ವೇಳೆ ಆನೆಗಳ ಸಾಮರ್ಥ್ಯ, ಗಾಂಭೀರ್ಯ, ನಡಿಗೆ, ದೈಹಿಕ ಸ್ಥಿರತೆ ಹಾಗೂ ಬೆನ್ನು ಸಮತಟ್ಟಾಗಿರುವಿಕೆಯಂತಹ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

ನಡೆಸಲಾದ ತಾಲೀಮು ಮತ್ತು ಪರಿಶೀಲನೆಗಳಲ್ಲಿ ಧನಂಜಯ ಆನೆಯ ಹೆಸರು ಮುನ್ನೆಲೆಗೆ ಬಂದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅದರ ಸಾಮರ್ಥ್ಯವನ್ನು ಗಮನಿಸಿದ್ದಾರೆ ಎನ್ನಲಾಗಿದೆ.

ಆದರೆ ಅಂತಿಮವಾಗಿ ಯಾವ ಆನೆಯನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.ಅರಣ್ಯ ಇಲಾಖೆಯ ಹೇಳಿಕೆಯ ಪ್ರಕಾರ, ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ಆನೆಯ ದೈಹಿಕ ಸಾಮರ್ಥ್ಯ, ತರಬೇತಿ, ಗಾಂಭೀರ್ಯ, ಬೆನ್ನು ಸಮತಟ್ಟಾಗಿರುವಿಕೆ ಹಾಗೂ ಅಂಬಾರಿಯ ಭಾರವನ್ನು ಸುರಕ್ಷಿತವಾಗಿ ಹೊರುವ ಸಾಮರ್ಥ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಅಂಬಾರಿ ಆನೆಯ ಆಯ್ಕೆ ಕುರಿತು ಸರ್ಕಾರಿ ಮಟ್ಟದಲ್ಲೂ ಚರ್ಚೆಗಳು ನಡೆಯುತ್ತಿವೆ. ದಸರಾ ಮೆರವಣಿಗೆಯ ಸಾಂಪ್ರದಾಯಿಕ ಮಹತ್ವದ ಜೊತೆಗೆ ಆನೆಯ ಸುರಕ್ಷತೆ ಹಾಗೂ ಅಂಬಾರಿ ಹೊರುವ ಸಾಮರ್ಥ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande