ಸಿಂಗೀತಂ ಶ್ರೀನಿವಾಸ್ ಅಗಲಿಕೆಗೆ ಸಿಎಂ ಡಿ ಕೆ ಶಿವಕುಮಾರ್ ಸಂತಾಪ
ಬೆಂಗಳೂರು, 04 ಅಕ್ಟೋಬರ್ (ಹಿ.ಸ.): ಭಾರತೀಯ ಚಿತ್ರರಂಗದ ಮಾಣಿಕ್ಯ ಸಿಂಗೀತಂ ಶ್ರೀನಿವಾಸ್ ಅವರ ಅಗಲಿಕೆಯಿಂದ ದುಃಖಿತನಾಗಿದ್ದು, ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ'' ಎಂದು ಮುಖ್ಯಮಂತ್ರಿ ಡಿ‌ ಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ‌ ಚಿತ್ರಗಳ‌ ಮೂಲಕ ಕನ್
ಸಿಂಗೀತಂ ಶ್ರೀನಿವಾಸ ರಾವ್ ಸಂಗ್ರಹ ಚಿತ್ರ


ಬೆಂಗಳೂರು, 04 ಅಕ್ಟೋಬರ್ (ಹಿ.ಸ.):

ಭಾರತೀಯ ಚಿತ್ರರಂಗದ ಮಾಣಿಕ್ಯ ಸಿಂಗೀತಂ ಶ್ರೀನಿವಾಸ್ ಅವರ ಅಗಲಿಕೆಯಿಂದ ದುಃಖಿತನಾಗಿದ್ದು, ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ' ಎಂದು ಮುಖ್ಯಮಂತ್ರಿ ಡಿ‌ ಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ‌ ಚಿತ್ರಗಳ‌ ಮೂಲಕ ಕನ್ನಡ‌ ಚಲನಚಿತ್ರರಂಗಕ್ಕೆ

ಹೊಸ ಆಯಾಮ‌ ನೀಡಿದ ಸಿಂಗೀತಂ ಶ್ರೀನಿವಾಸ್ ಅವರು, ಡಾ. ರಾಜಕುಮಾರ್ ಅಭಿನಯದ, 'ಹಾಲುಜೇನು', 'ಚಲಿಸುವ ಮೋಡಗಳು', 'ಶ್ರಾವಣ ಬಂತು' ಮುಂತಾದ ಸದಭಿರುಚಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು ಎಂದು ಸ್ಮರಿಸಿದ್ದಾರೆ.

'ಸಿಂಗೀತಂ ಅವರ 'ಪುಷ್ಪಕ ವಿಮಾನ' ಮೂಕಿ ಚಿತ್ರ ಭಾರತೀಯ ಚಿತ್ರರಂಗದ ಮೈಲಿಗಲ್ಲು. ಅವರ ಅನನ್ಯ ಪ್ರತಿಭೆಗೆ ಸಾಕ್ಷಿ. ಕನ್ನಡ ಚಿತ್ರರಂಗದ ಜೊತೆ ಒಡನಾಟ ಇಟ್ಟುಕೊಂಡಿದ್ದ ಸಿಂಗೀತಂ, ತಮ್ಮ ಕೊನೆ ಉಸಿರು ಇರುವ ತನಕ‌ ಸಿನಿಮಾ ಧ್ಯಾನ ಮಾಡುತ್ತಿದ್ದರು' ಎಂದು ಸಿಎಂ ಹೇಳಿದ್ದಾರೆ.

'ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದು ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande