ಹಾಸನಾಂಬ ಭಕ್ತರಿಗೆ 60 ರೂ. ಗೆ ಲಾಡು ಪ್ರಸಾದ ವಿತರಿಸಲು ಸಚಿವ ಶಿವಲಿಂಗೇಗೌಡ ಸೂಚನೆ
ಹಾಸನ, 30 ಅಕ್ಟೋಬರ್ (ಹಿ.ಸ.): ಹಾಸನಾಂಬ ದೇವಸ್ಥಾನಕ್ಕೆ ಧರ್ಮ ದರ್ಶನದಲ್ಲಿ ಆಗಮಿಸುವ ಭಕ್ತರಿಗೆ ಲಾಡು ಪ್ರಸಾದವನ್ನು ಗರಿಷ್ಠ 60 ರೂ.ಗೆ ಕೊಡಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಆದೇಶಿಸಿದ್ದಾರೆ. ಇಂದು ಬೆಳಗ್ಗೆ ಲಾಡು ಪ್ರಸಾದ ವಿತರಣೆ ಬಗ್ಗೆ ಅಧಿಕಾರಿಗಳ ಜ
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ


ಹಾಸನ, 30 ಅಕ್ಟೋಬರ್ (ಹಿ.ಸ.):

ಹಾಸನಾಂಬ ದೇವಸ್ಥಾನಕ್ಕೆ ಧರ್ಮ ದರ್ಶನದಲ್ಲಿ ಆಗಮಿಸುವ ಭಕ್ತರಿಗೆ ಲಾಡು ಪ್ರಸಾದವನ್ನು ಗರಿಷ್ಠ 60 ರೂ.ಗೆ ಕೊಡಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಆದೇಶಿಸಿದ್ದಾರೆ.

ಇಂದು ಬೆಳಗ್ಗೆ ಲಾಡು ಪ್ರಸಾದ ವಿತರಣೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ಧರ್ಮ ದರ್ಶನಕ್ಕೆ ಬರುವ ಭಕ್ತರು ಬಡವರಾಗಿರುತ್ತಾರೆ. ಅವರಿಗೆ 100 ರೂ. ಹೊರೆಯಾಗುತ್ತದೆ. ಹಾಗಾಗಿ ಈ ಬಾರಿ ಲಾಡು ಪ್ರಸಾದವನ್ನು ಎಲ್ಲರಿಗೂ ಸಮಾನವಾಗಿ 60 ರೂ. ಗೆ ವಿತರಿಸಬೇಕು. 40 ರೂ. ಲಾಭವನ್ನಿಟ್ಟುಕೊಂಡು ಲಾಡು ಪ್ರಸಾದ ವಿತರಿಸುವುದು ಬೇಡ ಎಂದು ನಿರ್ದೇಶನ ನೀಡಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, 1 ಸಾವಿರ ರೂ.ಗಳ ಟಿಕೆಟ್‌ ತೆಗೆದುಕೊಂಡವರಿಗೆ 2 ಲಾಡು ಸಿಗುತ್ತದೆ. ಆದರೆ ಧರ್ಮ ದರ್ಶನದಲ್ಲಿ ಬರುವ ಭಕ್ತರು ಲಾಡು ಪ್ರಸಾದಕ್ಕಾಗಿ ಪ್ರತ್ಯೇಕವಾಗಿ ಹಣ ತೆರಬೇಕು. ಇಸ್ಕಾನ್‌ನವರಿಂದ ಪ್ರತಿ ಲಾಡುಗೆ 56 ರೂ. ನಂತೆ ಟೆಂಡರ್‌ ಆಗಿದೆ. ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಪ್ರಸ್ತುತ 100 ರೂ.ಗೆ ಲಾಡು ವಿತರಿಸಲು ನಿರ್ಧರಿಸಲಾಗಿತ್ತು. ಆದರೆ ಇದು ಬಡವರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ 56 ರೂ. ಗೆ ವಿತರಿಸಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು. ಆದರೆ ಚಿಲ್ಲರೆ ಸಮಸ್ಯೆ ತಲೆದೋರುತ್ತದೆ ಎಂಬ ಕಾರಣಕ್ಕೆ 60 ರೂ. ಗೆ ವಿತರಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande