
ಸಂಡೂರು, 28 ಅಕ್ಟೋಬರ್ (ಹಿ.ಸ.)
ಅಗತ್ಯ ವಸ್ತುಗಳ ಕಾಯ್ದೆ (1955) ಅಡಿಯಲ್ಲಿ ಸಂಡೂರು ತಾಲೂಕಿನಲ್ಲಿ ಜಪ್ತಿ ಮಾಡಲಾಗಿರುವ 627.60 ಕ್ವಿಂಟಾಲ್ ಅಕ್ಕಿಯನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲು ಜಿಲ್ಲಾಡಳಿತ ಆದೇಶಿಸಿದೆ.
2025-26ನೇ ಸಾಲಿನಲ್ಲಿ ದಾಖಲಾದ 16 ವಿವಿಧ ಪ್ರಕರಣಗಳಲ್ಲಿ ಈ 627.60 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿಯವರ ಆದೇಶದಂತೆ, ಸಂಡೂರಿನ ಸಗಟು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿರುವ ಈ ಅಕ್ಕಿ ದಾಸ್ತಾನನ್ನು ಪ್ರತ್ಯೇಕವಾಗಿ ಬಹಿರಂಗ ಹರಾಜು ಹಾಕಲಾಗುತ್ತಿದೆ.
ಹರಾಜು ಪ್ರಕ್ರಿಯೆಯು ನವೆಂಬರ್ 5 ರಂದು ಬೆಳಗ್ಗೆ 10:30 ಗಂಟೆಗೆ ಸಂಡೂರು ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ನಡೆಯಲಿದೆ. ಮುಂಗಡ ಭದ್ರತಾ ಠೇವಣಿ ರೂ.1,50,000 ಪಾವತಿಸಬೇಕು.
ಆಸಕ್ತ ಬಿಡ್ಡರ್ಗಳು ನಿಗದಿತ ಮುಂಗಡ ಠೇವಣಿ ಪಾವತಿಸಿ, ನಿಗದಿಪಡಿಸಿದ ಷರತ್ತುಗಳೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಸಂಡೂರು ತಾಲೂಕು ತಹಶೀಲ್ದಾರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್