ಮೀನಳ್ಳಿ ಶರಣಮ್ಮ ನಿಧನ
ಬಳ್ಳಾರಿ, 27 ಅಕ್ಟೋಬರ್ (ಹಿ.ಸ.) ಮೀನಳ್ಳಿ ಗ್ರಾಮದ ಹಿರಿಯರಾಗಿರುವ ಮೀನಳ್ಳಿ ಶರಣಮ್ಮ (90) ಅವರು ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಗ್ರಾಮದಲ್ಲಿ ನಿಧನರಾಗಿದ್ದಾರೆ. ಮೃತರು ನಾಲ್ವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳನ್ನು, ಅಳಿಯಂದಿರರು - ಸೊಸೆಯಂದಿರರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ
ಮೀನಳ್ಳಿ ಶರಣಮ್ಮ ನಿಧನ


ಬಳ್ಳಾರಿ, 27 ಅಕ್ಟೋಬರ್ (ಹಿ.ಸ.)

ಮೀನಳ್ಳಿ ಗ್ರಾಮದ ಹಿರಿಯರಾಗಿರುವ ಮೀನಳ್ಳಿ ಶರಣಮ್ಮ (90) ಅವರು ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಗ್ರಾಮದಲ್ಲಿ ನಿಧನರಾಗಿದ್ದಾರೆ.

ಮೃತರು ನಾಲ್ವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳನ್ನು, ಅಳಿಯಂದಿರರು - ಸೊಸೆಯಂದಿರರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುವರ್ಗವನ್ನು - ಅಭಿಮಾನಿಗಳನ್ನು : ಪ್ರೀತಿಪಾತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಮೀನಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 10.30 ಕ್ಕೆ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರು, ಕುಟುಂಬದವರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮೃತ ಮೀನಳ್ಳಿ ಶರಣಮ್ಮ ಜಿಲ್ಲಾ ಲಾಲಗೊಂಡ ಸಮಾಜದ ಮುಖಂಡರೂ, ಮೋಕ - ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮೀನಳ್ಳಿ ಚಂದ್ರಶೇಖರಗೌಡ ಅವರ ತಾಯಿ.

ವಿವರಗಳಿಗಾಗಿ, 99864 55580 ಗೆ ಸಂಪರ್ಕ ಮಾಡಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande