
ಹುಬ್ಬಳ್ಳಿ, 26 ಅಕ್ಟೋಬರ್ (ಹಿ.ಸ.):
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಸ್ಥಾಪಿಸಿರುವ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸದಾನಂದ ವಿ. ಡಂಗನವರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್, ಮಲ್ಲಿಕಾರ್ಜುನ ಎಸ್. ಅಕ್ಕಿ, ಹಾಸಿಮ್ ಹಿಂಡಸಗೇರಿ, ಡಿ. ದೊಡ್ಡಮನಿ, ಬಾಳಮ್ಮ ಜಂಗಿನವರ, ಅಕ್ಕಮ್ಮ ಕಂಬಳಿ, ಕಲಾವತಿ ದತ್ತವಾಡ, ಶರೀಫ ಗರಗದ, ಸಾಗರ ಹಿರೇಮನಿ, ಚಂದ್ರು ಸಂಕನ್ನವರ, ಶಿವಾನಂದ ಮುತ್ತಣ್ಣವರ, ಅನಿಲ ಬುನಿಯನ, ಕುಮಾರ ಗೋರಕ್ಕನವರ, ಶಿವಾನಂದ ಕದಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.