ಹಾಸನದಲ್ಲಿ ಮೈಸೂರು ದಸರಾ ಮಾದರಿ ಕ್ರೀಡೋತ್ಸವ: ಸಚಿವ ಕೆ. ಎಂ. ಶಿವಲಿಂಗೇಗೌಡ
ಹಾಸನ, 26 ಅಕ್ಟೋಬರ್ (ಹಿ.ಸ.) ಮೈಸೂರು ದಸರಾದಲ್ಲಿ ನಡೆದ ಕ್ರೀಡಾಪಂದ್ಯಾಟಗಳ ಮಾದರಿಯಲ್ಲೇ ಹಾಸನಾಂಬ ಕ್ರೀಡೋತ್ಸವವನ್ನು ನಡೆಸಬೇಕು ಎಂಬ ಆಶಯವಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದರು. ಹಾಸನ ಮಹಾನಗರ ಪಾಲಿಕೆ ಮೈದಾನದಲ್ಲಿ ಹಾಸನಾಂಬ
ಹಾಸನದಲ್ಲಿ ಮೈಸೂರು ದಸರಾ ಮಾದರಿ ಕ್ರೀಡೋತ್ಸವ: ಸಚಿವ ಕೆ. ಎಂ. ಶಿವಲಿಂಗೇಗೌಡ


ಹಾಸನ, 26 ಅಕ್ಟೋಬರ್ (ಹಿ.ಸ.)

ಮೈಸೂರು ದಸರಾದಲ್ಲಿ ನಡೆದ ಕ್ರೀಡಾಪಂದ್ಯಾಟಗಳ ಮಾದರಿಯಲ್ಲೇ ಹಾಸನಾಂಬ ಕ್ರೀಡೋತ್ಸವವನ್ನು ನಡೆಸಬೇಕು ಎಂಬ ಆಶಯವಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದರು.

ಹಾಸನ ಮಹಾನಗರ ಪಾಲಿಕೆ ಮೈದಾನದಲ್ಲಿ ಹಾಸನಾಂಬ ಉತ್ಸವದ ಪ್ರಮುಖ ವೇದಿಕೆ ನಿರ್ಮಾಣ ಹಾಗೂ ಕ್ರೀಡೋತ್ಸವ ಆಯೋಜನೆ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದರು. ಕುಸ್ತಿ, ಕಬ್ಬಡಿ, ವಾಲಿಬಾಲ್ ಕ್ರೀಡಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಬಳಿಕ ಮಾತನಾಡುತ್ತ, ಮೈಸೂರು ದಸರಾ ವೇಳೆ ಕುಸ್ತಿ, ಕಬ್ಬಡಿ ಹಾಗೂ ವಾಲಿಬಾಲ್ ಪಂದ್ಯಾಟಗಳನ್ನು, ಕ್ರೀಡಾಂಗಣಗಳ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿ ಅಧ್ಯಯನ ನಡೆಸಿದ್ದೇನೆ. ಅದೇ ಮಾದರಿಯಲ್ಲಿ ಇಲ್ಲೂ ಕ್ರೀಡೋತ್ಸವ ನಡೆಸಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.

ಮೈದಾನದ ಸುತ್ತಮುತ್ತಲಿನ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು, ಪಂದ್ಯಕ್ಕೆ ಮಳೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಬೇಕು. ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಗೂ ವೀಕ್ಷಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಲತಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande