ಪ್ರೌಢಶಾಲಾ ಮಟ್ಟದ ತಾಲ್ಲೂಕು ಹಂತದ ವಿಜ್ಞಾನ ವಿಚಾರಗೋಷ್ಠಿ
ಪ್ರೌಢಶಾಲಾ ಮಟ್ಟದ ತಾಲ್ಲೂಕು ಹಂತದ ವಿಜ್ಞಾನ ವಿಚಾರಗೋಷ್ಠಿ
ಕೋಲಾರ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಟಿಗೆ ಚಾಲನೆ


ಕೋಲಾರ.25 ಅಕ್ಟೋಬರ್ (ಹಿ.ಸ.):

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯಗತ್ಯವಾಗಿರುವ ವಿಜ್ಞಾನದಿಂದ ಮಾತ್ರ ದೇಶದ ಸಮಗ್ರ ಅಭಿವೃದ್ದಿ ಸಾಧ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕಿ ಲೇಖಾ ತಿಳಿಸಿದರು.

ಕೋಲಾರ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಟಿಗೆ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿನ ಅಂಧಕಾರ,ಮೌಢ್ಯತೆ ನಿರ್ಮೂಲನೆಗೂ ವಿಜ್ಞಾನವೇ ಮದ್ದಾಗಿದೆ ಎಂದ ಅವರು, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು . ಮಕ್ಕಳು ಮೂಢ ನಂಬಿಕೆಗಳಿಂದ ದೂರವಾಗಬೇಕು, ಪೋಷಕರಿಗೂ ಅರಿವು ಮೂಡಿಸಬೇಕು, ಯಾವುದೇ ವಿಷಯ, ನಿರ್ಧಾರವನ್ನು ಪ್ರಶ್ನಿಸಿ ಉತ್ತರ ಪಡೆದುಕೊಂಡೇ ಒಪ್ಪುವ ಪ್ರವೃತ್ತಿ ಬಲಗೊಳ್ಳಬೇಕು ಎಂದರು.

ವಿಶ್ವದಲ್ಲೇ ಭಾರತದ ವಿಜ್ಞಾನಿಗಳು ಅನೇಕರು ಸಾಧಕರಿದ್ದಾರೆ, ಅವರ ಸಾಧನೆ ಇಂದು ದಾರಿದೀಪವಾಗಿದೆ, ಇಸ್ರೋ ವಿಜ್ಞಾನಿಗಳು ಇಂದು ಚಂದ್ರನಲ್ಲಿಗೆ ಹೋಗಲು ಸಫಲರಾಗುವತ್ತ ಸಾಗಿದ್ದಾರೆ, ಇಂತಹ ವಿಜ್ಞಾನಿಗಳ ಆದರ್ಶ ವ್ಯಕ್ತಿತ್ವ ಹೊಂದಿದ್ದು ಅವರ ಜೀವನ ಆದರ್ಶಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದರು. ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು.ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ ಇದನ್ನು ಅರಿಯದೇ ಅನೇಕರು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಯತ್ತ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದರು.

ಅರಾಭಿಕೊತ್ತನೂರು ವಿಜ್ಞಾನ ಶಿಕ್ಷಕಿ ಶ್ವೇತಾ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಆನ್ಲೈನ್ ಕಲಿಕೆ ಸೇರಿದಂತೆ ಕಲಿಕೆ ಮತ್ತಷ್ಟು ವೇಗದಿಂದ ಸಾಗುತ್ತಿದೆ. ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಜಗತ್ತಿಗೆ ಹೊಂದಿಕೊಂಡು ಆಧುನಿಕ ವ್ಯವಸ್ಥೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ, ಇದಕ್ಕೆಲ್ಲಾ ವಿಜ್ಞಾನವೇ ಆಸರೆಯಾಗಿದೆ, ನಮ್ಮದೇಶ ವಿಶ್ವಮಾನ್ಯವಾಗಲು ವಿಜ್ಞಾನವೂ ಕೊಡುಗೆ ನೀಡಿದೆ ಎಂದರು.

ವಿಜ್ಞಾನದಿಂದ ಮಾತ್ರ ನಾವಿಂದು ಜಗತ್ತಿನ ಕೆಲವೇ ಬಲಿಷ್ಟ ದೇಶಗಳಲ್ಲಿ ಒಂದಾಗಿ ಬೆಳೆಯಲು ಸಾಧ್ಯವಾಗಿದೆ, ನಮ್ಮ ರಕ್ಷಣೆಗೆ ಇಂದು ಬಳಸುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಿಜ್ಞಾನದ ಸಾಧನೆಯಾಗಿದೆ ಎಂದು ತಿಳಿಸಿ, ವಿಜ್ಞಾನ ಕಬ್ಬಿಣದ ಕಡಲೆಯಲ್ಲ, ಕಲಿಯುವ ಆಸಕ್ತಿ ಅತಿ ಮುಖ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ ಅವರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ನರಸಾಪುರ ಕೆಪಿಎಸ್ ಶಾಲೆಯ ಗಾಯತ್ರಿ, ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಶ್ವೇತಾ, ಮದ್ದೇರಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಆರ್ಶಿಯಾ ಮತ್ತಿತರರು ಹಾಜರಿದ್ದರು.

ಪ್ರಥಮ ಬಹುಮಾನ ಕೆಪಿಎಸ್ ನರಸಾಪುರ ಪ್ರಥಮ, ಚಿನ್ಮಯ ಶಾಲೆ ದ್ವಿತೀಯ, ತೃತೀಯ ಸ್ಥಾನ ಶುಭಲ ಶಾಲೆಯ ಮಕ್ಕಳು ಪಡೆದುಕೊಂಡರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande