
ನವದೆಹಲಿ, 25 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ಗೆ ೧೨ ವರ್ಷ ಪೂರ್ಣಗೊಂಡಿವೆ. ೧೨ ವರ್ಷಗಳ ಹಿಂದೆ ವಿಜಯದಶಮಿಯ ಸಂದರ್ಭದಲ್ಲಿ ಜನರೊಂದಿಗೆ ಸಂವಾದ ನಡೆಸಲು ರೇಡಿಯೊವನ್ನು ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದ ಪ್ರಧಾನಿ, ತಮ್ಮ ಸಂವಾದದ ಪಯಣವನ್ನು ಜನರ ಪ್ರಯತ್ನಗಳನ್ನು ಅರಿಯುವ ತೀರ್ಥಯಾತ್ರೆ ಎಂದು ಬಣ್ಣಿಸಿದ್ದಾರೆ.
‘ಮನ್ ಕಿ ಬಾತ್’ನ ೧೩೯ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, “ನನಗೆ ‘ಮನ್ ಕಿ ಬಾತ್’ ಯಾವುದೇ ತೀರ್ಥಯಾತ್ರೆಗಿಂತ ಕಡಿಮೆಯಲ್ಲ. ಇದು ಜನರ ಪ್ರಯತ್ನಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮತ್ತು ಅವರ ಕೊಡುಗೆಗಳನ್ನು ಗೌರವಿಸುವ ಪಯಣವಾಗಿದೆ” ಎಂದು ಹೇಳಿದರು.
ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೊ ಮೂಲಕ ಜನರೊಂದಿಗೆ ಸಂವಾದ ನಡೆಸುತ್ತಾರೆ. ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕಾರ್ಯಗಳನ್ನು ಮಾಡುತ್ತಿರುವ ವ್ಯಕ್ತಿಗಳ ಸಾಧನೆಗಳು ಹಾಗೂ ಜನರ ಸಹಭಾಗಿತ್ವದಿಂದ ನಡೆಯುತ್ತಿರುವ ಉತ್ತಮ ಕಾರ್ಯಗಳಿಗೆ ಅವರು ಮಹತ್ವ ನೀಡುತ್ತಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.