
ಬಳ್ಳಾರಿ, 24 ಅಕ್ಟೋಬರ್ (ಹಿ.ಸ.)
ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಯೋಜಿಸಲಾಗುವ ಸಮೂಹ ವಿವಾಹಗಳ ವೆಚ್ಚಕ್ಕಾಗಿ ಪ್ರತಿ ಜೋಡಿಗೆ ರೂ.50,000 ಪ್ರೋತ್ಸಾಹಧನ ನೀಡಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದವರಿಗೆ ಸಮೂಹ ವಿವಾಹಗಳನ್ನು ಆಯೋಜಿಸುವ ಸಂಸ್ಥೆಗಳು, ಕಾರ್ಯಕ್ರಮ ನಡೆಯುವ ದಿನಾಂಕಕ್ಕಿ0ತ ಕನಿಷ್ಠ 7 ದಿನಗಳ ಮುಂಚಿತವಾಗಿ ಸಮೂಹ ವಿವಾಹ ಆಯೋಜನೆಯ ಕುರಿತು ಅರ್ಜಿ ಸಲ್ಲಿಸಬೇಕು. ವಿವಾಹ ನೆರವೇರಿದ ದಿನಾಂಕದಿ0ದ 3 ದಿನಗಳ ಒಳಗಾಗಿ ಅಗತ್ಯ ದಾಖಲೆಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಹೆಚ್ಚಿನ ವಿವರಗಳು ಹಾಗೂ ಅಧಿಸೂಚನೆಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ http://dom.karnataka.gov.in ಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ: 08392-200125 / 224, ಬಳ್ಳಾರಿ ಮಾಹಿತಿ ಕೇಂದ್ರ: 8310321101, ಸಂಡೂರು ಮಾಹಿತಿ ಕೇಂದ್ರ: 9036925966 / 8660575061, ಸಿರುಗುಪ್ಪ ಮಾಹಿತಿ ಕೇಂದ್ರ: 9148889975 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್