ಬಳ್ಳಾರಿ: ಅಕ್ಟೋಬರ್ 26 ಮತ್ತು 27 ರಂದು ಮೋಕಾ - ಯರಗುಡಿ - ವಿದ್ಯುತ್ ವ್ಯತ್ಯಯ
ಬಳ್ಳಾರಿ, 23 ಅಕ್ಟೋಬರ್ (ಹಿ.ಸ.) ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ. ಮೋಕಾ ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ತೈಲ ಸೋರಿಕೆ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಅಕ್ಟೋಬರ್ 26 ಮತ್ತು 27 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬಳ್ಳಾರಿ: ಅಕ್ಟೋಬರ್ 26 ಮತ್ತು 27 ರಂದು ಮೋಕಾ - ಯರಗುಡಿ - ವಿದ್ಯುತ್ ವ್ಯತ್ಯಯ


ಬಳ್ಳಾರಿ, 23 ಅಕ್ಟೋಬರ್ (ಹಿ.ಸ.)

ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ. ಮೋಕಾ ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ತೈಲ ಸೋರಿಕೆ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಅಕ್ಟೋಬರ್ 26 ಮತ್ತು 27 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಮೋಕಾ ಉಪ-ಕೇಂದ್ರದಲ್ಲಿರುವ ಪರಿವರ್ತಕ-1 ಮತ್ತು ಪರಿವರ್ತಕ-3 ರಲ್ಲಿ ದುರಸ್ತಿ ಕಾಮಗಾರಿ ನಡೆಯಲಿದ್ದು, ಮೋಕಾ ಹಾಗೂ 33/11 ಕೆ.ವಿ. ಯರ್ರಗುಡಿ ಉಪ-ಕೇಂದ್ರಗಳಿAದ ವಿದ್ಯುತ್ ಪಡೆಯುವ ಮಾರ್ಗಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ತಿಳಿಸಿದ್ದಾರೆ.

*ವಿದ್ಯುತ್ ವ್ಯತ್ಯಯವಾಗುವ ವಿವರ (ಅಕ್ಟೋಬರ್ 26 ರಂದು):*

ಮೋಕಾ - ಬಿ.ಡಿ.ಹಳ್ಳಿ ಕೃಷಿ ಪ್ರದೇಶಗಳು (ಬಿ.ಡಿ.ಹಳ್ಳಿ ಐಪಿ ಮಾರ್ಗ)

ಕೃಷಿ ಪ್ರದೇಶಗಳು: ಗೋಟೂರು, ಕೆ.ಕೆ.ಹಾಳ್, ಮಸೀದಿಪುರ, ವಣೆನೂರು, ಬಾಣಾಪುರ, ಗುಡುದೂರು (ಮಸೀದಿಪುರ ಐಪಿ ಮಾರ್ಗ)

ಕೃಷಿ ಪ್ರದೇಶಗಳು: ಶಿವಪುರ, ಅಶೋಕನಗರ ಕ್ಯಾಂಪ್, ಕಪ್ಪಗಲ್ಲು, ಸಿರುವಾರ, ಸಂಗನಕಲ್ಲು, ಚಾಗನೂರು (ಮೋಕಾ/ಶಿವಪುರ ಐಪಿ ಮಾರ್ಗ)

ಶಿವಪುರ ವಾಟರ್ ವರ್ಕ್ಸ್ (ವಾಟರ್ ವರ್ಕ್ಸ್ ಮಾರ್ಗ)

*ಅಕ್ಟೋಬರ್ 27 ರಂದು:*

ಎನ್ಡಿಪಿಎಲ್ (33 ಕೆ.ವಿ. ಎನ್ಡಿಪಿಎಲ್ ಮಾರ್ಗ)

ಕೃಷಿ ಪ್ರದೇಶಗಳು: ಡಿ.ಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಹಳ್ಳಿ, ಬ್ಯಾಳಚಿಂತೆ (ಡಿ.ಎನ್.ಹಳ್ಳಿ ಹಾಗೂ ಜಿ.ಎನ್.ಹಳ್ಳಿ ಐಪಿ ಮಾರ್ಗಗಳು)

ಕೃಷಿ ಪ್ರದೇಶಗಳು: ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು (ಹಳೆ ಯರ್ರಗುಡಿ ಐಪಿ ಮಾರ್ಗ)

ಕೃಷಿ ಪ್ರದೇಶಗಳು: ಡಿ.ಎನ್.ಹಳ್ಳಿ, ಮೋಕಾ (ವೇದಾವತಿ ಐಪಿ ಮಾರ್ಗ)

ಗ್ರಾಮಗಳು: ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು, ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ (ಸಿಂಧುವಾಳ ಮತ್ತು ಸೋಲಾರ್ ಮಾರ್ಗ)

ಕೃಷಿ ಪ್ರದೇಶಗಳು: ಎಂ. ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್, ಡಿ.ಎನ್.ಹಳ್ಳಿ (ಜಾಲಿಹಾಳ್ ಐಪಿ ಮಾರ್ಗ)

*ರೈತರಿಗೆ ಮತ್ತು ಸಾರ್ವಜನಿಕರಿಗೆ ಸೂಚನೆ:*

ಅಕ್ಟೋಬರ್ 26 ಮತ್ತು 27 ರಂದು ಈ ಉಪ-ಕೇಂದ್ರಗಳ ಎಲ್ಲಾ ಕೃಷಿ ಮಾರ್ಗಗಳಿಗೆ ಮುಂಜಾನೆ 03 ಗಂಟೆಯಿAದ ಬೆಳಗ್ಗೆ 10 ಗಂಟೆಯವರೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಉಳಿದ ವಿದ್ಯುತ್ ಪೂರೈಕೆಯನ್ನು ನಿರ್ವಹಣಾ ಕಾರ್ಯ ಮುಗಿದ ನಂತರ ನೀಡಲಾಗುವುದು. ಸಾರ್ವಜನಿಕರು ಹಾಗೂ ರೈತರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande