ಯಕ್ಷಗಾನ ರಂಗಸ್ಥಳದಲ್ಲಿ ಹೆಜ್ಜೆಹಾಕಿದ 9 ತಿಂಗಳ ತುಂಬು ಗರ್ಭಿಣಿ
ಯಕ್ಷಗಾನದ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ; ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದ ಪ್ರಸಂಗ
nine-months-pregnant-woman-performs-yakshagana-on-stage


ಮಂಗಳೂರು, 21 ಅಕ್ಟೋಬರ್ (ಹಿ.ಸ.):

ಯಕ್ಷಗಾನ ಗಂಡೂ ಕಲೆ ಎಂದು ಪ್ರಸಿದ್ದಿ ಆದರೆ, ಇಂದು ಯಕ್ಷಗಾನದಲ್ಲಿ ಹೆಣ್ಣುಮಕ್ಕಳು ಅದೆಷ್ಟೋ ಮಂದಿ ಸಾಧನೆಯನ್ನು ಮಾಡುತ್ತಿದ್ದಾರೆ. ವ್ಯಾಪಕ ಜನಮನ್ನಣೆಯನ್ನೂ ಪಡೆಯುತ್ತಿದ್ದಾರೆ.

ಈ ಸಾಲಿನಲ್ಲಿ ದಶಕಗಳಿಂದ ತನ್ನ ಹೆಸರನ್ನು ಅಚ್ಚಳಿಯದೆ ಕಾಪಿಟ್ಟುಕೊಂಡು ಬಂದವರು ಶ್ರೀಮತಿ ದಿಶಾ ಸಿ ಶೆಟ್ಟಿ.

ಮೂಲತಃ ಮಂಗಳೂರಿನ ಸುರತ್ಕಲ್ ನ ದಿಶಾ ಶೆಟ್ಟಿ ಎಳವೆಯಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡವರು, ತಾಯಿ ಮತ್ತು ತಾಯಿಯ ಸಹೋದರಿಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರಿಂದ, ಯಕ್ಷಗಾನದ ಆಸಕ್ತಿ ರಕ್ತಗತವಾಗಿ ಬಂದಿದ್ದು, ನಾಟ್ಯಗುರುಗಳಾದ ರಕ್ಷಿತ್ ಪಡ್ರೆ ಹಾಗೂ ರಾಕೇಶ್ ರೈ ಅಡ್ಕ ಅವರ ಶಿಷ್ಯೆಯಾಗಿ ದಿಶಾ ಶೆಟ್ಟಿ ರಂಗಸ್ಥಳದಲ್ಲಿ ಮಹಿಳಾ ಯಕ್ಷಗಾನ ರಂಗದ ಸಮರ್ಥ ಪುಂಡಯವೇಷಧಾರಿಯಾಗಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡವರು.

ಸುದರ್ಶನ, ಅಭಿಮನ್ಯು, ಅಶ್ವತ್ಥಾಮ, ಚಂಡ – ಮುಂಡರು ಇದು ಇವರಿಗೆ ಹೆಸರು ತಂದುಕೊಟ್ಟ ಪ್ರಮುಖ ಪಾತ್ರಗಳು. ಇವರ ರಾಧಾ ವಿಲಾಸದ ಕೃಷ್ಣ ಬಹುತೇಕ ಕರಾವಳಿಯಲ್ಲಿ ನೋಡದವರೇ ಇಲ್ಲ, ತನ್ನ ಅಕ್ಕ ಡಾ. ವರ್ಷಾ ಶೆಟ್ಟಿ ಅವರೊಂದಿಗೆ ಇವರು ಜೊತೆಯಾಗಿ ನಡೆಸಿಕೊಡುವ ಕೃಷ್ಣ – ರಾಧೆಯರ ಅಧ್ಬುತ ಪ್ರಯೋಗಕ್ಕೆ ಜನ ಮನಸೋತಿದ್ದಾರೆ. ಹೇಗೆ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉಪನ್ಯಾಸಕಿಯಾಗಿರುವ ಇವರು, 9 ತಿಂಗಳ ತುಂಬು ಗರ್ಭಿಣಿಯಾಗಿ ಯಕ್ಷಗಾನ ರಂಗಸ್ಥಳದಲ್ಲಿ ಕಾಣಿಸಿಕೊಂಡು ಮತ್ತೆ ಜನಮಾನಸದಲ್ಲಿ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಸುರತ್ಕಲ್ ನಲ್ಲಿ ನಡೆದ ಯಕ್ಷಗಾನ ಒಂದರಲ್ಲಿ, ಕಯಾದುವಿನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಇದೀಗ ಆ ಭಾವನಾತ್ಮಕ ಸನ್ನಿವೇಶಗಳ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಇದರ ಬಗ್ಗೆ ಮಾದ್ಯಮಗಳಿ ಪ್ರತಿಕ್ರಿಯೆ ನೀಡಿದ ದಿಶಾ ಶೆಟ್ಟಿಯವರು ಇದು ಸಾಧನೆಯಲ್ಲ, ಟ್ರೆಂಡ್ ಕೂಡಾ ಅಲ್ಲ… ಇದು ನನ್ನ ಖುಷಿಯಷ್ಟೇ..!! ಎಂದು ಹೇಳಿದ್ದಾರೆ.

ಪತಿ ಪ್ರಥಮ್ ಶೆಟ್ಟಿ, ತಾಯಿ ಪ್ರಮದಾ ಸಿ. ಶೆಟ್ಟಿ ಹಾಗೂ ತಂದೆ ಚಂದ್ರ ಎನ್. ಎಮ್. ಅವರ ಹಾಗೂ ಕುಟುಂಬದ ಬೆಂಬಲ ಖುಷಿಕೊಟ್ಟಿದೆ ಎಂದು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande