ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ದಿವಾಳಿಕೋರತನಕ್ಕೆ ಸಾಕ್ಷಿ ; ಬಿಜೆಪಿ ಮುಖಂಡ ವಾಸುದೇವ
ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ದಿವಾಳಿಕೋರತನಕ್ಕೆ ಸಾಕ್ಷಿ ; ಬಿಜೆಪಿ ಮುಖಂಡ ವಾಸುದೇವ
ಬಿಜೆಪಿ ಮುಖಂಡ ವಾಸುದೇವ


ಕೋಲಾರ,14 ಅಕ್ಟೋಬರ್ (ಹಿ.ಸ.):

ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿರುವುದಕ್ಕೆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಎಸ್.ಐ.ಆರ್ ವಿಚಾರದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಪಕ್ಷದನಾಯಕರು ನೀಡುತ್ತಿರುವ ಬೌದ್ಧಿಕ ದಿವಾಳಿತನದ ಹೇಳಿಕೆಗಳು ಗಮನಿಸಿದರೆ ಕಾಂಗ್ರೆಸ್ ಪಕ್ಷ ರಾಷ್ಟ್ರೀಯತೆ ಮರೆತು ರಾಷ್ಟ್ರದಲ್ಲಿ ಅಶಾಂತಿ ಮೂಡಿಸಲು ಮುಂದಾಗಿರುವAತೆ ಕಾಣುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಪ್ರತಿಯೊಬ್ಬ ಪ್ರಜೆಯ ಹಕ್ಕು ಸರ್ಕಾರದ ಯಾವುದೇ ನೀತಿ ಅಥವಾ ಯೋಜನೆಯೇ ಇರಲಿ, ಅದರಲ್ಲಿರುವ ಒಳ್ಳೆಯ-ಕೆಟ್ಟ ಅಂಶಗಳನ್ನು ವಿಶ್ಲೇಷಿಸದೆ, ಕೇವಲ ವಿರೋಧಿಸಬೇಕು ಎಂಬ ಏಕೈಕ ಉದ್ದೇಶದಿಂದ ಪ್ರತಿಭಟನೆ ಮಾಡುವುದು ಬೌದ್ಧಿಕ ದಿವಾಳಿತನ ತೋರಿಸುತ್ತದೆ. ದೇಶಕ್ಕಾಗಿ ದುಡಿಯುತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರನ್ನು ರಾಹುಲ್ ಗಾಂಧಿ ವಿಲನ್ ಎಂದು ಕರೆದಿರುವುದು ಅವರ ರಾಜಕೀಯ ಭೌದ್ಧಿಕ ದಿವಾಳಿತನ ಹಾಗೂ ರಾಜಕೀಯ ಅಪಕ್ವತೆ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಅಜಿತ್ ದೋವಲ್ ಅವರು ಪಾಕಿಸ್ತಾನದಲ್ಲಿ ಸುಮಾರು ಏಳು ವರ್ಷಗಳ ಕಾಲ ಜೀವದ ಹಂಗು ತೊರೆದು ರಹಸ್ಯ ಗೂಢಚಾರಿಕೆ ನಡೆಸಿದ್ದರು. ಪಾಕ್ ನೆಲದಲ್ಲಿ ಮುಸ್ಲಿಂ ಹಾಗೂ ಭಿಕ್ಷುಕನ ವೇಷದಲ್ಲಿ ಇದ್ದು, ವೈರಿ ದೇಶದ ಕೆಲವೊಂದು ಗುಪ್ತ ಮಾಹಿತಿ ಯನ್ನು ಸಂಗ್ರಹಿಸಿ ಭಾರತಕ್ಕೆ ಕಳುಹಿಸುವ ಮೂಲಕ ದೇಶದ ಭದ್ರತೆಗೆ ಇವರು ನೀಡಿರುವ ಕೊಡುಗೆಯನ್ನು ಮರೆಯುವ ಹಾಗಿಲ್ಲ. ತಮ್ಮ ರಾಜಕೀಯ ಏಳಿಗೆಗಾಗಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಗುರಿಯಾಗಿಸುವುದು ಅಪಾಯಕಾರಿ ಬೆಳವಣಿಗೆ. ಅಜಿತ್ ದೋವಲ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ ಅವರು ಭಾರತದ ಭದ್ರತೆಯ ಅಸ್ಮಿತೆ. ಅವರನ್ನು ವಿಲನ್ ಎಂದು ಕರೆದಿರುವ ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಮೋದಿ ಅವರನ್ನು ವಿರೋಧಿಸಲೇಬೇಕು ಎಂದರೆ ಜನರು ಮುಂದೆ ನೈಜ ರಾಜಕೀಯ ಮಾಡಿ. ಜನರ ವಿಶ್ವಾಸ ಗೆಲ್ಲಿ ಅದು ಬಿಟ್ಟು ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ಮೂಗು ತೋರಿಸಬೇಡಿ. ವಿದೇಶಿ ಶಕ್ತಿಗಳಿಗೆ ಜಾಗ ಮಾಡಿಕೊಡಬೇಡಿ ಭಾರತಕ್ಕೆ ಸ್ಟಾರ್ ಲಿಂಕ್ ಅನುಮತಿ ನೀಡುವ ವಿಚಾರದಲ್ಲಿ ಎಲೆನ್ ಮಸ್ಕ್ ಮಾಡಿರುವ ಭಾರತದ ವಿರುದ್ಧ ಆರೋಪಕ್ಕೆ ಟ್ವಿಟರ್ ನಲ್ಲಿ ನೀವು ನೀಡಿರುವ ವೆಲಕಮ್ ಇಂಡಿಯಾ ಉತ್ತರ ಎಷ್ಟು ಅಸಮಾಂಜಸವಾಗಿದೆ ಎಂದರೆ ನಿಮ್ಮದೇ ಪಕ್ಷದ ಹಿರಿಯ ಕಾಂಗ್ರೆಸ್ ನಾಯಕರು ತಲೆತಗ್ಗಿಸುವಂತಾಗಿದೆ ಎಂದಿದ್ದಾರೆ.

ಸ್ಯಾಟಲೈಟ್ ಆಪರೇಟರ್ಗಳಿಗೆ ಭಾರತದ ಭದ್ರತಾ ಷರತ್ತುಗಳಲ್ಲಿ ಕಾನೂನುಬದ್ಧ ನಿಯಮಗಳಿವೆ. ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಇಂಟರ್ನೆಟ್ ನಲ್ಲಿ ಎಷ್ಟು ಭದ್ರತೆ ಲೋಪಗಳಿವೆ ಎಂಬುದನ್ನು ಗಮನಿಸಬೇಕಿದೆ. ರಷ್ಯ ಯುಕ್ರೇನ್ ಯುದ್ಧದ ವಿಷಯದಲ್ಲಿ ನಮ್ಮ ಸಿಸ್ಟಮ್ ಅಫ್ ಮಾಡಿದರೆ ಯುಕ್ರೇನ್ ನಿಮಿಷಗಳಲ್ಲಿ ಪತನವಾಗುತ್ತದೆ ಎಂದು ಎಲೆನ್ ಮಸ್ಕ್ ಹೇಳಿಕೆ ನೀಡಿದ್ದರು. ಸಂವಹನ ಅಧಾರಿತ ಉಪಗ್ರಹಗಳ ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಭದ್ರತಾ ವಿಷಯದಲ್ಲಿ ತನಿಖಾ ಸಂಸ್ಥೆಗಳಿಗೆ ಕಾನೂನುಬದ್ಧವಾಗಿ ಅಗತ್ಯವಿರುವ ಮಾಹಿತಿಯನ್ನು ಪಡೆಯುವ ವ್ಯವಸ್ಥೆ ಇರಬೇಕೆಂಬುದು ಸರ್ಕಾರದ ಪ್ರಮುಖ ಕಾಳಜಿಯಾಗಿದೆ ಎಂದಿದ್ದಾರೆ.

ಈ ಕಾರಣದಿಂದ ಸ್ಟಾರ್ಲಿಂಕ್ ಸೇರಿದಂತೆ ವಿದೇಶಿ ಉಪಗ್ರಹ ಸೇವಾ ಸಂಸ್ಥೆಗಳು ಭಾರತೀಯ ನಿಯಮಗಳಿಗೆ ಒಳಪಟ್ಟು ಕಾರ್ಯನಿರ್ವಹಿಸ ಬೇಕು ಎಂಬುದನ್ನು ರಾಹುಲ್ ಗಾಂಧಿಗೆ ಗೊತ್ತಿಲ್ಲವೇ ಕೇವಲ ಮೋದಿ ವಿರೋಧಿಸುವುದಕ್ಕಾಗಿ ಭಾರತದ ಹಿತಾಸಕ್ತಿಯನ್ನು ಬಲಿಕೊಡಬೇಡಿ, ವಾಜಪೇಯಿಯವರು ಮೊದಲೇ ಹೇಳಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷದಲ್ಲಿ ಇದ್ದಾಗ ದೇಶಕ್ಕೆ ಅಪಾಯಕಾರಿ ಎಂದಿದ್ದರು.

ಇದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇನ್ನೂ ರಾಷ್ಟ್ರೀಯ ನಾಯಕರಂತೆ ರಾಜ್ಯ ಕಾಂಗ್ರೆಸ್ ನಾಯಕರು ಕೊಡ ದೇಶದ ಹಿತಾಸಕ್ತಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಶ್ಮೀರವನ್ನು ಅಕ್ರಮವಾಗಿ ಭಾರತ ಹಿಡಿದಿಟ್ಟುಕೊಂಡಿದೆ, ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಿ ಇಲ್ಲದಿದ್ದರೆ ಭಾರತವನ್ನು ತುಕ್ಡೆ ತುಕ್ಡೆ ಮಾಡುವುದಾಗಿ ಭಾರತ ವಿರೋಧಿ ಹೇಳಿಕೆ ನೀಡಿದ ಉಮರ್ ಖಾಲಿದ್ ದೇಶದ್ರೋಹಿಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪಸ್ರಾದ್ ರಾಷ್ಟ್ರೀಯವಾದಿ ಎನ್ನುತ್ತಾರೆ. ದಶಕಗಳ ಕಾಲ ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರಿಗೆ ಬೆಲೆ ಇಲ್ಲವೇ, ಹುತಾತ್ಮ ಸೈನಿಕರಿಗೆ ಹಾಗೂ ಅವರ ಕುಟುಂಬಕ್ಕೆ ಕಾಂಗ್ರೆಸ್ ನೀಡುವ ಅಗೌರವ ಮತ್ತು ಕಾಂಗ್ರೆಸ್ ಪಕ್ಷದ ಮನಸ್ಥಿತಿ ತೋರಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande