
ಬೆಂಗಳೂರು, 12 ಅಕ್ಟೋಬರ್ (ಹಿ.ಸ.):
ರಾಜ್ಯ ಹೈಕೊರ್ಟ್ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳವನ್ನು ರದ್ದು ಪಡೆಸಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಪಿಟಿಷನ್ ಹಾಕಬೇಕು.
ಇಲ್ಲದಿದ್ದರೆ ಈ ನಾವೇ ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಸರ್ಕಾರ ಮೀಸಲಾತಿಯನ್ನು ಹೆಚ್ಚು ಮಾಡುವಂತಹ ಸಂದರ್ಭದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿ ಆಧಾರದ ಮೇಲೆ, ಅದಕ್ಕೆ ವಿಧಾನ ಮಂಡಲದ ಎರಡೂ ಸದನದಲ್ಲಿ ಕಾನೂನನ್ನು ಪಾಸ್ ಮಾಡಿ ಮಾಡಿರುವಂತದ್ದು.
ಅದರ ಹಿಂದೆ ಸಂವಿಧಾನ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಕೊಡುವಂತಹ ಅವಕಾಶ ಇದೆ ಅನ್ನುವುದು ಸಂವಿಧಾನದಲ್ಲಿ ಇರುವ ಕಾರಣ ಮತ್ತು ನಾಗಮೋಹನ್ ದಾಸ್ ವರದಿ ಶಿಫಾರಸಿನ ಕಾರಣ ಇದು ಕಾನೂನನ್ನು ಮಾಡಿದೆ ಹೊರತಾಗಿ, ಇದು ಆದೇಶ ಅಲ್ಲ ಎಂದು ತಿಳಿಸಿದ್ದಾರೆ.
ಹಾಗೆ ಯಾರು ಪಿ.ಐ.ಎಲ್ ಹೋಗಿದ್ದಾರೆ ಅವರು ಎಸ್.ಸಿ, ಎಸ್.ಟಿ ಜನಾಂಗದ ಅಭಿವೃದ್ಧಿಯ ವಿರೋಧಿಗಳಾಗಿ ಪಿ.ಐ.ಎಲ್ ಹಾಕಿದ್ದರು.
ರಾಜ್ಯ ಸರ್ಕಾರ ಇದನ್ನು ಖಂಡಿತವಾಗಿಯೂ ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗಬೇಕು. ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ 50% ಕ್ಕಿಂತ ಹೆಚ್ಚು ರಿಸರ್ವೇಷನ್ ಆಗಿದೆ.
ತಮಿಳುನಾಡು, ಛತ್ತೀಸಗಢ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಗಿದೆ, ಆ ಉದಾಹರಣೆ ಸಮೇತವಾಗಿ ಸುಪ್ರೀಂಕೋರ್ಟ್ ನಲ್ಲಿ ರಿಟ್ ಪಿಟಿಷನ್ ಹಾಕಬೇಕು.
ರಾಜ್ಯ ಸರ್ಕಾರ ಹಾಕದಿದ್ದರೆ ನಾವು ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.
-----------
ಹಿಂದೂಸ್ತಾನ್ ಸಮಾಚಾರ್ / BHARGAVI G R