
ಗದಗ, 12 ಅಕ್ಟೋಬರ್ (ಹಿ.ಸ.):
ಪತ್ರ ವ್ಯವಹಾರ ಸೇರಿದಂತೆ ಅಂಚೆ ಇಲಾಖೆಯ ವಿವಿಧ ಸೇವೆಗಳನ್ನು ಗ್ರಾಹಕರು ತಮ್ಮ ಮನೆಯ ಸಮೀಪದಲ್ಲಿಯೇ ಸುಲಭವಾಗಿ ನೀಡುವ ಸಲುವಾಗಿ ಅಂಚೆ ಸೇವಾ ಕೇಂದ್ರ ಆರಂಭಿಸಲಾಗಿದೆ. ಅವುಗಳ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್. ಎಸ್. ಶಿರಹಟ್ಟಿ ಹೇಳಿದರು.
ಗದಗ ನಗರದ ವಿವೇಕಾನಂದ ನಗರದಲ್ಲಿ ನೂತನವಾಗಿ ಆರಂಭಿಸಲಾದ ಅಂಚೆ ಗ್ರಾಹಕ ಸ್ನೇಹಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅಚರು, ಅಂಚೆ ಇಲಾಖೆಯ ವಿವಿಧ ಸೇವೆಗಳು ಪ್ರತಿಯೊಬ್ಬ ಗ್ರಾಹಕರಿಗೂ ಸುಲಭವಾಗಿ ತಲುಪುವಂತಾಗಬೇಕು. ಇನ್ನೂ ಕೇಂದ್ರ ಹಾಗೂ ರಾಜ್ಯ ವಿವಿಧ ಯೋಜನೆಗಳನ್ನು ಸರ್ಕಾರವು ಅಂಚೆ ಇಲಾಖೆ ಮೂಲಕ ನೀಡಲಾಗುತ್ತಿದೆ. ಇಂದರಿಂದಾಗಿ ಅಂಚೆ ಸೇವೆಗಳನ್ನು ತ್ವರಿತ ಮತ್ತು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಅಂಚೆ ಗ್ರಾಹಕ ಸ್ನೇಹಿ ಸೇವಾ ಕೇಂದ್ರಗಳನ್ನು ತೆರಯಲು ಅವಕಾಶ ನೀಡಲಾಗಿದೆ ಎಂದರು.
ಈ ವೇಳೆ ನಿರ್ಮಲಾ ಮುಳಗುಂದಮಠ, ಶರಣಬಸಯ್ಯ ಮುಳಗುಂದಮಠ ಹಾಗೂ ವಿವೇಕಾನಂದ ನಗರ, ನಿಸರ್ಗ ಬಡಾವಣೆ ಮತ್ತು ರಾಜೀವ್ ಗಾಂಧಿ ನಗರದ ಹಿರಿಯರು ಮತ್ತು ಅಂಚೆ ಇಲಾಖೆ ಅಧಿಕಾರಿಗಳು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP