
ಕುರುಗೋಡು, 12 ಅಕ್ಟೋಬರ್ (ಹಿ.ಸ.)
ಕುರುಗೋಡುತಾಲೂಕಿನ ಕೋಳೂರು ಗ್ರಾಮದ 4ನೇ ವಾರ್ಡ್ ನಿವಾಸಿ ಶರ್ಮಾಸ್ ವಲಿ (48 ವರ್ಷ) ಎಂಬ ವ್ಯಕ್ತಿ 2020ರ ಫೆ.01 ರಂದು ನಾಪತ್ತೆಯಾಗಿದ್ದು, ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಸಂಪರ್ಕಿಸುವಂತೆ ಸಬ್-ಇನ್ಸ್ಪೆಕ್ಟರ್ ಕೋರಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ:
ಎತ್ತರ 5.6 ಅಡಿ, ಗೋಧಿ ಬಣ್ಣ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ತೆಲುಗು ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಕಂದು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಲುಂಗಿ ಧರಿಸಿರುತ್ತಾನೆ.
ಕಾಣೆಯಾದ ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಭಿಸಿದಲ್ಲಿ ಸಾರ್ವಜನಿಕರು ಕುರುಗೋಡು ಠಾಣೆಯ ಪಿಎಸ್ಐ ಮೊ: 9480803051 ಅಥವಾ 9480803039 ಅನ್ನು ಸಂಪರ್ಕಿಸುವ0ತೆ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್