
ಕುರುಗೋಡು, 12 ಅಕ್ಟೋಬರ್ (ಹಿ.ಸ.)
ಕುರುಗೋಡು ಪಟ್ಟಣದ ಸಮೀಪದ ಎಮ್ಮಿಗನೂರು ಗ್ರಾಮದ ಬ್ರಾಹ್ಮಣ ಕ್ಯಾಂಪ್ ನಿವಾಸಿ ಹೆಚ್.ಜಿ. ಕೃಷ್ಣ (29) ಎಂಬ ವ್ಯಕ್ತಿ ಆಗಸ್ಟ್ 25 ರಂದು ನಾಪತ್ತೆಯಾಗಿದ್ದು, ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಚಹರೆ ವಿವರಗಳು:
ಎತ್ತರ 5.5 ಅಡಿ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ/ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ಚಹರೆಯುಳ್ಳ ವ್ಯಕ್ತಿಯ ಸುಳಿವು ದೊರೆತಲ್ಲಿ ಕುರುಗೋಡು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08392-263433 ಅಥವಾ ಮೊಬೈಲ್ ಸಂಖ್ಯೆ 9480803051, 9480803039 ಗೆ ಸಂಪರ್ಕಿಸಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್