ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ಆರೋಪ ; ಮಹಾರಾಷ್ಟ್ರದಲ್ಲಿ ಐವರ ಬಂಧನ
ಮುಂಬಯಿ, 09 ಜನವರಿ (ಹಿ.ಸ.) : ಆ್ಯಂಕರ್ : ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬೀಡ್ ಜಿಲ್ಲೆಯ ಕೇಜ್ ಪ್ರದೇಶದಲ್ಲಿ ಐದು ಜನರನ್ನು ಬಂಧಿಸಿದೆ. ಆರೋಪಿಗಳ ವಿರುದ್ಧ ಸಮಗ್ರ ತನಿಖೆ ಮುಂದುವರಿದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾ
Ats


ಮುಂಬಯಿ, 09 ಜನವರಿ (ಹಿ.ಸ.) :

ಆ್ಯಂಕರ್ : ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬೀಡ್ ಜಿಲ್ಲೆಯ ಕೇಜ್ ಪ್ರದೇಶದಲ್ಲಿ ಐದು ಜನರನ್ನು ಬಂಧಿಸಿದೆ. ಆರೋಪಿಗಳ ವಿರುದ್ಧ ಸಮಗ್ರ ತನಿಖೆ ಮುಂದುವರಿದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರು ನಕಲಿ ಟ್ರಸ್ಟ್ ಸ್ಥಾಪಿಸಿ, ಧಾರ್ಮಿಕ ಕಾರ್ಯದ ನೆಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ, ಆ ಹಣವನ್ನು ಭಯೋತ್ಪಾದಕ ಸಂಘಟನೆಗಳಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೇಜ್ ಪೊಲೀಸ್ ಠಾಣೆಯ ಸಹಕಾರದೊಂದಿಗೆ, ಗುಲ್ಜರ್-ಎ-ರಝಾ ಎಂಬ ಟ್ರಸ್ಟ್‌ಗೆ ಸಂಬಂಧ ಹೊಂದಿದ್ದ ಐವರನ್ನು ಜನವರಿ 8ರಂದು ಬಂಧಿಸಲಾಗಿದೆ.

ಬಂಧಿತರನ್ನು ಅಹ್ಮದುದ್ದೀನ್ ಖೈಸರ್ ಖಾಜಿ, ಇಮ್ರಾನ್ ಕಲೀಮ್ ಶೇಖ್, ಮುಜಮ್ಮಿಲ್ ನೂರ್ ಸೈಯದ್, ಅಹ್ಮದುದ್ದೀನ್ ಸತ್ತಾರ್ ಖಾಜಿ ಹಾಗೂ ತೌಫೀಕ್ ಜಾವೇದ್ ಖಾಜಿ ಎಂದು ಗುರುತಿಸಲಾಗಿದೆ. ಇವರು ಸುಳ್ಳು ಗುರುತಿನ ಚೀಟಿಗಳನ್ನು ಬಳಸಿ ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು, ಅದನ್ನು ಹಣಕಾಸು ವ್ಯವಹಾರಗಳಿಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದುವರೆಗೆ ನಡೆದ ಪರಿಶೀಲನೆಯಲ್ಲಿ ಟ್ರಸ್ಟ್ ಮೂಲಕ ಸುಮಾರು ₹4.73 ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ. ಬ್ಯಾಂಕುಗಳು ಹಾಗೂ ಆದಾಯ ತೆರಿಗೆ ಇಲಾಖೆಯನ್ನು ವಂಚಿಸಿರುವ ಅಂಶಗಳ ಕುರಿತು ಕೂಡ ತನಿಖೆ ನಡೆಯುತ್ತಿದೆ.

ಛತ್ರಪತಿ ಸಂಭಾಜಿ ನಗರದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವ ಜಾಲದ ತನಿಖೆ ವೇಳೆ ಗುಲ್ಜರ್-ಎ-ರಝಾ ಟ್ರಸ್ಟ್‌ ಮೇಲೆ ಅನುಮಾನ ಮೂಡಿದ್ದು, ಅದರ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ತಾಂತ್ರಿಕ ತನಿಖೆ ವೇಳೆ ಭಯೋತ್ಪಾದಕ ಸಂಪರ್ಕದ ಗಂಭೀರ ಅಂಶಗಳು ಬಹಿರಂಗಗೊಂಡಿವೆ.

ಟ್ರಸ್ಟ್ ಆಕ್ಸಿಸ್ ಬ್ಯಾಂಕ್‌ನ ಲಾತೂರ್ ಶಾಖೆಯಲ್ಲಿ ಐದು ಖಾತೆಗಳನ್ನು ತೆರೆದಿದ್ದು, ಇದಕ್ಕಾಗಿ ಅಹಲ್ಯಾನಗರ ವಕ್ಫ್ ಮಂಡಳಿಗೆ ಸಂಬಂಧಿಸಿದ ಇನ್ನೊಂದು ಸಂಘಟನೆಯ ನೋಂದಣಿ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ. ನೀತಿ ಆಯೋಗದ ದರ್ಪಣ್ ಪೋರ್ಟಲ್‌ನಲ್ಲಿಯೂ ನಕಲಿ ವಿವರಗಳನ್ನು ನಮೂದಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಎಲ್ಲ ಆಯಾಮಗಳ ಕುರಿತು ಎಟಿಎಸ್ ತನಿಖೆ ಮುಂದುವರಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande