
ಕೋಲಾರ, 0೮ ಜನವರಿ (ಹಿ.ಸ) :
ಆ್ಯಂಕರ್ : ನಗರದ ಶಾಸಕರ ಕಛೇರಿ ಮುಂದೆ ಕಾರ್ಮಿಕ ಇಲಾಖೆಯ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರು ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಟೂಲ್‌ಕಿಟ್‌ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಕೊತ್ತೂರು ಮಂಜುನಾಥ್ ಕಟ್ಟಡ ಕಾರ್ಮಿಕರು ಶ್ರಮಿಕ ಜೀವಿಗಳಾಗಿದ್ದು, ಸದಾ ಕಷ್ಟದ ಕೆಲಸದಲ್ಲಿ ತೊಡಗಿರುತ್ತಾರೆ. ಅವರು ಪ್ರಾಣಾಪಾಯಗಳನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಾರೆ. ಇಂತಹ ಕಾರ್ಮಿಕರ ಹಿತಕ್ಕಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿ, ಅವರ ಬೆಂಬಲಕ್ಕೆ ನಿಂತಿದೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕಟ್ಟಡ ಕಾರ್ಮಿಕರು ದಿನನಿತ್ಯದ ಬದುಕಿನಲ್ಲಿ ಜೀವನ ನಿರ್ವಹಿಸಿಕೊಳ್ಳುತ್ತಾರೆ. ಅವರ ಕುಟುಂಬದ ಅಭ್ಯುದಯಕ್ಕಾಗಿ ಹಲವಾರು ಸವಲತ್ತುಗಳನ್ನು ನೀಡಲಾಗುತ್ತಿದೆ. ಕಾರ್ಮಿಕರ ಕುಟುಂಬಗಳ ನೆರವಿಗೆ ನಿಲ್ಲಲು ಸಾಕಷ್ಟು ಯೋಜನೆಗಳನ್ನು ತರಲಾಗಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಪಡೆಯಲು ನೋಂದಣಿ ಕಡ್ಡಾಯವಾಗಿದೆ ಬಹಳಷ್ಟು ಕಟ್ಟಡ ಕಾರ್ಮಿಕರು ಅನಕ್ಷಸ್ಥರಾಗಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಎಸ್ಸಿ ಕಾಂಗ್ರೆಸ್ ರಾಜ್ಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಸದಸ್ಯರಾದ ಸನ್ನಾಉಲ್ಲಾ, ತೌಸೀಫ್ ,ಮುನಿರಾಜು, ಅಂಜಲಿ, ದೀಪಾ, ಚೌಡೇಗೌಡ, ತಿರುಮಲಪ್ಪ, ಗಂಗಪ್ಪ, ನಾಗೇಶ್, ಲೋಕೇಶ್ ಕಾರ್ಮಿಕ ಇಲಾಖೆಯ ನಿರೀಕ್ಷಕಿ ಶ್ರೀದೇವಿ ಹಾಗೂ ಫಲಾನುಭವಿಗಳು ಇದ್ದರು.
ಚಿತ್ರ ; ಕಟ್ಟಡ ಕಾರ್ಮಿಕರಿಗೆ ಶಾಸಕ ಕೊತ್ತೂರು ಮಂಜುನಾಥ್ ಟೂಲ್ ಕಿಟ್ ಗಳನ್ನು ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್