ಸ್ವದೇಶಿ ಉತ್ಪನ್ನಗಳ ಬಳಕೆಗೆ ಸ್ವಾಮೀಜಿ ಕರೆ
ಗದಗ, 08 ಜನವರಿ (ಹಿ.ಸ.) : ಆ್ಯಂಕರ್ : ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಮತ್ತು ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಸ್ವದೇಶಿ ಮತ್ತು ನೈಸರ್ಗಿಕ ಧಾನ್ಯಗಳು, ನೈಸರ್ಗಿಕ ತರಕಾರಿಗಳಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡ
ಫೋಟೋ


ಗದಗ, 08 ಜನವರಿ (ಹಿ.ಸ.) :

ಆ್ಯಂಕರ್ : ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಮತ್ತು ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಸ್ವದೇಶಿ ಮತ್ತು ನೈಸರ್ಗಿಕ ಧಾನ್ಯಗಳು, ನೈಸರ್ಗಿಕ ತರಕಾರಿಗಳಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ವ್ಯಕ್ತಿಯ ಆರೋಗ್ಯವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ನುಡಿದರು.

ಗದುಗಿನಲ್ಲಿ ಹೆಚ್ಚು ಬೇಡಿಕೆಯಿರುವ ದೇಶೀಯ ಉತ್ಪನ್ನಗಳ ಮಾರಾಟ ಕೇಂದ್ರ ಕನೇರಿ ಮಠದ 'ಸಿದ್ದಗಿರಿ ನ್ಯಾಚುರಲ್ಸ್' ಮತ್ತು 'ಅಗ್ನಿ ಕವಚ'

ಮಾರಾಟ ಕೇಂದ್ರವನ್ನು ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ದಿವ್ಯ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಮುಖ್ಯ ಅತಿಥಿ ಶರಣಬಸಪ್ಪ ಎಸ್.ಗುಡಿಮನಿ ಮಾತನಾಡಿ, ನೈಸರ್ಗಿಕ ಆಹಾರಗಳ ಅರಿವು ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರಲ್ಲದೆ,

ಸ್ವದೇಶಿ ಉತ್ಪನ್ನಗಳ ಮುಖ್ಯಸ್ಥ ಸಂತೋಷ ಅಕ್ಕಿ ಮಾತನಾಡಿ, ಭಾರತೀಯ ನಿರ್ಮಿತ ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ದಕ್ಷತೆ ಹೆಚ್ಚಾಗುತ್ತದೆ. ಇಲ್ಲಿರುವ ಅನೇಕ ದೇಸಿ ಉತ್ಪನ್ನಗಳು ರಾಸಾಯನಿಕ-ಬಣ್ಣ ಮುಕ್ತವಾಗಿವೆ.

ಆನಂದ ಯಲಮಲಿ ಮಾತನಾಡಿ, ಎಲ್ಲಾ ಮನೆಗಳು, ಶಾಲೆಗಳು, ಅಂಗಡಿಗಳು, ಕಚೇರಿಗಳು ಒಂದೇ ಅಗ್ನಿ ಸುರಕ್ಷತಾ ಚೆಂಡನ್ನು ಹೊಂದಿರಬೇಕು. ಇದು ತುಂಬಾ ಸುಲಭವಾಗಿ ಲಭ್ಯವಿರುತ್ತದೆ ಮತ್ತು ಕೈಗೆಟುಕುವಂತಿದೆ ಎಂದರು.

ಈ ಸಂದರ್ಭದಲ್ಲಿ, ಅಶೋಕ್ ಟಿ.ಅಕ್ಕಿ, ಎಂ.ಎಸ್. ಕರಿಗೌಡ, ಎಚ್. ಎನ್. ಕಾಳೆ, ಪ್ರಕಾಶ್ ಅಕ್ಕಿ, ರಾಜು ಕುರಡಗಿ, ಶಿವಲೀಲಾ ಅಕ್ಕಿ, ಅನಿಲ್ ಅಬ್ಬಿಗೇರಿ, ಶಶಿಧರ ದಿಂಡೂರ, ರಾಘವೇಂದ್ರ ಕೊಪ್ಪರ, ರಮೇಶ ಸಜ್ಜಗರ, ಡಾ. ಉಮೇಶ ಹಾದಿ, ಸಂಜಯ ಹಬೀಬ್, ವೀರೇಶ ಪ್ರಭು ಗದುಗಿನ, ಬಸವರಾಜ ನರೇಗಲ್, ಅರುಣ ಹುಲ್ಲೂರು, ಶಶಿಧರಗೌಡ ಕಳ್ಳಿ, ವಿನಾಯಕ ಹೊರಕೇರಿ, ಚಂದ್ರು ಕುರಿ, ರೋಹನ್ ಕುಂದನಹಳ್ಳಿ, ನವೀನ್ ಕುರ್ತಕೋಟಿ, ರಾಹುಲ್ ಸಂಕನ್ನವರ್, ಮಹೇಶ ಕಮ್ಮಾರ, ಸುನೀಲ್ ಕುರ್ತಕೋಟಿ, ಸುನೀಲ್, ರವಿ ಮಾನ್ವಿ ಮುಂತಾದವರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande