ಡೇರಿ ಸಂಘಗಳ ಉಳಕೆ ಹಣ ಒಕ್ಕೂಟದಲ್ಲಿ ಠೇವಣಿ ಇಡಲಿ : ಚೆಲುವನಹಳ್ಳಿ ನಾಗರಾಜಪ್ಪ
ಡೇರಿ ಸಂಘಗಳ ಉಳಕೆ ಹಣ ಒಕ್ಕೂಟದಲ್ಲಿ ಠೇವಣಿ ಇಡಲಿ: ಚೆಲುವನಹಳ್ಳಿ ನಾಗರಾಜಪ್ಪ
ಡೇರಿ ಸಂಘಗಳ ಉಳಕೆ ಹಣ ಒಕ್ಕೂಟದಲ್ಲಿ ಠೇವಣಿ ಇಡಲಿ: ಚೆಲುವನಹಳ್ಳಿ ನಾಗರಾಜಪ್ಪ


ಕೋಲಾರ, 0೮ ಜನವರಿ (ಹಿ.ಸ) :

ಆ್ಯಂಕರ್ : ಕೋಮುಲ್ ಒಕ್ಕೂಟವು ಬೇರೆ ಬೇರೆ ಬ್ಯಾಂಕುಗಳ ಮೂಲಕ ೭% ಬಡ್ಡಿಗೆ ತರುವ ಬದಲಿಗೆ ಪ್ರಾಥಮಿಕ ಡೇರಿ ಸಂಘಗಳ ಉಳಿಕೆ ಹಣವನ್ನು ಒಕ್ಕೂಟದಲ್ಲಿ ಠೇವಣಿ ಇಡುವಂತಾಗಬೇಕು ಇದರಿಂದಾಗಿ ಬ್ಯಾಂಕುಗಳಿಂತ ಹೆಚ್ಚಿಗೆ ಬಡ್ಡಿಯನ್ನು ಒಕ್ಕೂಟವು ನೀಡಲಿದೆ ಎಂದು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ.ನಾಗರಾಜಪ್ಪ ತಿಳಿಸಿದರು.

ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಕೋಮುಲ್ ವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ಕೋಲಾರ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಒಕ್ಕೂಟವು ವಿಭಜನೆಯ ನಂತರ ಎಂವಿಕೆ ಗೋಲ್ಡನ್ ಡೇರಿ, ಸೋಲಾರ್ ಘಟಕ ಸೇರಿದಂತೆ ಹೊಸದಾಗಿ ಯಂತ್ರೋಪಕರಣಗಳ ಮೂಲಕ ಮಾದರಿ ಒಕ್ಕೂಟ ಮಾಡಲು ಆಡಳಿತ ಮಂಡಳಿ ಕ್ರಮ ವಹಿಸಿದೆ ಜೊತೆಗೆ ಉತ್ಪಾದಕರ ಆರ್ಥಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಇದಕ್ಕಾಗಿ ಡೇರಿ ಸಂಘಗಳ ಉಳಿತಾಯ ಹಣವನ್ನು ಒಕ್ಕೂಟದಲ್ಲಿ ಠೇವಣಿ ಇಡಲಿ ಎಂದರು.

ಹೈನುಗಾರಿಕೆ ಜೀವಾಳವಾಗಿರುವ ಜಿಲ್ಲೆಯಲ್ಲಿ ಕೋಮುಲ್ ಒಕ್ಕೂಟ ಮತ್ತು ಸರ್ಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯಗಳನ್ನು ಪಡೆದು ಹೈನುಗಾರಿಕೆಯನ್ನು ಉದ್ಯೋಗವನ್ನಾಗಿ ಆರಂಭಿಸುವ ಮುಖಾಂತರ ಕುಟುಂಬದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ರೈತರಿಗೆ ಆರ್ಥಿಕವಾಗಿ ಸದೃಢರಾಗಲು ಶಕ್ತಿ ಕೊಡುವ ಉದ್ಯಮ ಹೈನುಗಾರಿಕೆಯಾಗಿದೆ ಸರ್ಕಾರ, ಕೆಎಂಎಫ್ ಹಾಗೂ ಒಕ್ಕೂಟದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೈನುಗಾರರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಇವೆಲ್ಲದರ ಸದುಪಯೋಗ ಪಡೆದು ಹೆಚ್ಚು ಹೈನುಗಾರಿಕೆ ಉದ್ಯಮದ ಕಡೆ ರೈತರು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪ್ರಯತ್ನಿಸಬೇಕು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲನ್ನು ಹಾಕುವ ಹೈನುಗಾರರಿಗೆ ನಷ್ಟ ಎಂಬುದೇ ಇಲ್ಲ ಉತ್ಪಾದಕರ ರಾಸುಗಳಿಗೆ ಮೇವು, ವಿಮೆ, ಔಷದೋಪಚಾರ, ಸಾಕಲು ಅಗತ್ಯ ಪರಿಕರ, ವಿವಿಧ ಯಂತ್ರಗಳು ಸೇರಿದಂತೆ ಹಲವಾರು ಸವಲತ್ತುಗಳನ್ನು ಹೈನುಗಾರರಿಗೆ ನೀಡುತ್ತಿರುವುದರಿಂದಲೇ ಮಾದರಿ ಒಕ್ಕೂಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಡೇರಿಯ ನೂತನ ಆಡಳಿತ ಮಂಡಳಿ ವತಿಯಿಂದ ಕೋಮುಲ್ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ವಿಸ್ತರಣಾಧಿಕಾರಿಗಳಾದ ರಾಮಾಂಜಿನಪ್ಪ, ಶ್ರೀಕಾಂತ್, ಚಿಕ್ಕನಹಳ್ಳಿ ಡೇರಿ ಅಧ್ಯಕ್ಷ ಸಿ.ಅಮರೇಶ್, ಉಪಾಧ್ಯಕ್ಷ ನರೇಶ್ ಕುಮಾರ್, ನಿರ್ದೇಶಕರಾದ ಸಿ.ಸಿ ಶ್ರೀನಿವಾಸ್, ಸಿ.ನಾಗರಾಜ್, ಭಾಗ್ಯಲಕ್ಷ್ಮೀ, ವೆಂಕಟಮ್ಮ, ಸವಿತ, ಸುಧಾ, ಕಾರ್ಯದರ್ಶಿ ಗೋಪಾಲಪ್ಪ ಮುಖಂಡರಾದ ನಾರಾಯಣಸ್ವಾಮಿ ರಮೇಶ್ ಮುಂತಾದವರು ಇದ್ದರು.

ಚಿತ್ರ ; ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ.ನಾಗರಾಜಪ್ಪ ವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande