ಹುಬ್ಬಳ್ಳಿ ಘಟನೆ ; ನಾಗರಿಕ ಸಮಾಜ ತಗ್ಗಿಸುವ ಕೃತ್ಯ : ವಿಜಯೇಂದ್ರ
ಬೆಂಗಳೂರು, 07 ಜನವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿಯಲ್ಲಿ ಬಂಧನಕ್ಕೆ ಪ್ರತಿರೋಧಿಸಿದ ಪಕ್ಷದ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಮಾಧ್ಯಮಗಳ ವರದಿಗಳು, ಆತಂಕಕಾರಿ ಮಾತ್ರವಲ್ಲ, ಸಮಸ್ತ ನಾಗರೀಕ ಸಮಾಜವೇ ತಲೆತಗ್ಗಿಸಬೇಕಾದ ಹೀನ ಕೃತ್ಯವಾಗಿದೆ ಎಂದು ಬಿಜೆಪಿ ರ
Byv


ಬೆಂಗಳೂರು, 07 ಜನವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿಯಲ್ಲಿ ಬಂಧನಕ್ಕೆ ಪ್ರತಿರೋಧಿಸಿದ ಪಕ್ಷದ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಮಾಧ್ಯಮಗಳ ವರದಿಗಳು, ಆತಂಕಕಾರಿ ಮಾತ್ರವಲ್ಲ, ಸಮಸ್ತ ನಾಗರೀಕ ಸಮಾಜವೇ ತಲೆತಗ್ಗಿಸಬೇಕಾದ ಹೀನ ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಘಟನೆ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಪ್ರತಿಕ್ರಿಯಿಸಿದ ಅವರು, ಕಾರಣ ಏನೇ ಇರಲಿ, ಈ ನೆಲದ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಗೌರವ ಎನ್ನುವುದು ಕೇವಲ ಮಾತಲ್ಲ, ಅದು ನಮ್ಮ ಪರಮೋಚ್ಚ ಆದ್ಯತೆ. ಪರಿಸ್ಥಿತಿ ಏನೇ ಇರಲಿ, ಒಬ್ಬ ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಸನ್ನಿವೇಶಕ್ಕೆ ಅವಕಾಶ ನೀಡಿದ್ದು ವ್ಯವಸ್ಥೆಯ ಲೋಪವಾಗಿದೆ. ಇಂತಹ ಅವಮಾನಕಾರಿ ಘಟನೆಗಳು ನಮ್ಮ ಕರ್ನಾಟಕದ ಘನತೆಗೆ ಕುಂದುಂಟು ಮಾಡಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ 'ಜಂಗಲ್ ರಾಜ್' ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಬೇಕಾದರೂ ಗೋಲಿಬಾರ್ ನಡೆಸಬಹುದು, ಕೊಲೆ ಮಾಡಬಹುದು, ಹಿಂದೂಗಳ ಧಾರ್ಮಿಕ ಮೆರೆವಣಿಗೆ ಮೇಲೆ ಕಲ್ಲು ತೂರಾಟ ನಡೆಸಬಹುದು, ಇಲ್ಲಿ ಎಷ್ಟು ಬೇಕಾದರೂ ಡ್ರಗ್ಸ್ ತಯಾರಿಸಬಹುದು, ನಮ್ಮ ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಾಗಿದೆ. ಹುಬ್ಬಳ್ಳಿಯ ಈ ಅಮಾನವೀಯ ದೌರ್ಜನ್ಯ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆಯ ಅಧಃಪಾತಕ್ಕೆ ದುರಂತ ಸಾಕ್ಷಿಯಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಮಹಿಳೆಯರ ಘನತೆಗೆ ಕುಂದು ತರುವ ಘಟನೆಗಳು ಯಾವುದೇ ಕಾರಣವಿರಲಿ, ಮರುಕಳಿಸದಂತೆ ನೋಡಿಕೊಳ್ಳುವ ತನ್ನ ಕನಿಷ್ಠ ಜವಾಬ್ದಾರಿಯನ್ನಾದರೂ ರಾಜ್ಯ ಸರ್ಕಾರ ನಿರ್ವಹಿಸಲಿ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande