
ಬಳ್ಳಾರಿ, 08 ಜನವರಿ (ಹಿ.ಸ.):
ಆ್ಯಂಕರ್ : ಶತಾಯುಷಿ ಶ್ರೀಮತಿ ಹಂಚಿನಹಾಳು ಮಠದ ಶಾಂತವೀರಮ್ಮ (103) ತಿಪ್ಪೇಸ್ವಾಮಿ ಅವರು ಗುರುವಾರ ಸಂಜೆ ಅಸುನೀಗಿದ್ದು, ಶುಕ್ರವಾರ 12.30 ಕ್ಕೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಮೃತರು ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್ ಸೇರಿ ಐವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರರು, ಅಳಿಯ, ಅಪಾರ ಸಂಖ್ಯೆಯ ಮೊಮ್ಮಕ್ಕಳು, ಶಿಷ್ಯ ವರ್ಗ, ಬಂಧು ವರ್ಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ವೀರಶೈವ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನ 12.45 ರ ನಂತರ ನೆರವೇರಲಿದೆ.
ವಿವರಗಳಿಗಾಗಿ : ಎಚ್.ಎಂ. ಮಹೇಂದ್ರ ಕುಮಾರ್, ಪತ್ರಕರ್ತರು, ಮೊಬೈಲ್ - 9449068333.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ