ದೆಹಲಿ ಟರ್ಕ್‌ಮನ್ ಗೇಟ್ ಬಳಿ ಅಕ್ರಮ ಅತಿಕ್ರಮಣ ತೆರವು
ನವದೆಹಲಿ, 07 ಜನವರಿ (ಹಿ.ಸ.) : ಆ್ಯಂಕರ್ : ದೆಹಲಿ ಹೈಕೋರ್ಟ್‌ನ ನಿರ್ದೇಶನದಂತೆ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಬುಧವಾರ ಮುಂಜಾನೆ ಟರ್ಕ್‌ಮನ್ ಗೇಟ್ ಪ್ರದೇಶದಲ್ಲಿ ಅಕ್ರಮ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿತು. ಫೈಜ್-ಎ-ಇಲಾಹಿ ಮಸೀದಿಯ ಸುತ್ತಲಿನ ರಾಮಲೀಲಾ ಮೈದಾನದ ಬಳಿಯ ಸುಮಾರು 38,000 ಚ
ದೆಹಲಿ ಟರ್ಕ್‌ಮನ್ ಗೇಟ್ ಬಳಿ ಅಕ್ರಮ ಅತಿಕ್ರಮಣ ತೆರವು


ನವದೆಹಲಿ, 07 ಜನವರಿ (ಹಿ.ಸ.) :

ಆ್ಯಂಕರ್ : ದೆಹಲಿ ಹೈಕೋರ್ಟ್‌ನ ನಿರ್ದೇಶನದಂತೆ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಬುಧವಾರ ಮುಂಜಾನೆ ಟರ್ಕ್‌ಮನ್ ಗೇಟ್ ಪ್ರದೇಶದಲ್ಲಿ ಅಕ್ರಮ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿತು.

ಫೈಜ್-ಎ-ಇಲಾಹಿ ಮಸೀದಿಯ ಸುತ್ತಲಿನ ರಾಮಲೀಲಾ ಮೈದಾನದ ಬಳಿಯ ಸುಮಾರು 38,000 ಚದರ ಅಡಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ಧ್ವಂಸ ಕಾರ್ಯಾಚರಣೆಯನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ದೆಹಲಿ ಪೊಲೀಸರು ವ್ಯಾಪಕ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಗಳನ್ನು ಜಾರಿಗೆ ತಂದರು. ಇಡೀ ಪ್ರದೇಶವನ್ನು ಒಂಬತ್ತು ವಲಯಗಳಾಗಿ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯದ ಮೇಲ್ವಿಚಾರಣೆಯನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಹುದ್ದೆಯ ಅಧಿಕಾರಿಗಳು ವಹಿಸಿದ್ದರು. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.

ಕಾರ್ಯಾಚರಣೆಗೆ ಮುನ್ನ ಶಾಂತಿ ಕಾಪಾಡುವ ಉದ್ದೇಶದಿಂದ ಶಾಂತಿ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಪ್ರತಿನಿಧಿಗಳೊಂದಿಗೆ ಹಲವು ಸಮನ್ವಯ ಸಭೆಗಳನ್ನು ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳಾಗಿ ಅಗತ್ಯವಿರುವ ಎಲ್ಲಾ ತಡೆಗಟ್ಟುವಿಕೆ ಹಾಗೂ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಧ್ವಂಸ ಕಾರ್ಯಾಚರಣೆಯ ವೇಳೆ ಕೆಲವು ಸಮಾಜ ವಿರೋಧಿ ಶಕ್ತಿಗಳು ಕಲ್ಲು ತೂರಾಟ ನಡೆಸಿ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಿದರೂ, ಪೊಲೀಸರು ಸೌಮ್ಯ ಮತ್ತು ಸಮತೋಲಿತ ಬಲಪ್ರಯೋಗದ ಮೂಲಕ ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತಂದರು. ಯಾವುದೇ ಪ್ರಮುಖ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗಿದ್ದು, ಪ್ರದೇಶದಲ್ಲಿ ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಲಾಗಿದೆ.

ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಭೂಮಿಯಲ್ಲಿ ಪಾರ್ಕಿಂಗ್, ಖಾಸಗಿ ಆಸ್ಪತ್ರೆ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯುತ್ತಿದ್ದು, ಸ್ಮಶಾನವೂ ಅಸ್ತಿತ್ವದಲ್ಲಿತ್ತು. ಈ ಕುರಿತು ಎಂಸಿಡಿ ನೀಡಿದ್ದ ನೋಟಿಸ್ ಅನ್ನು ಮಸೀದಿ ಸಮಿತಿ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ ಭೂಮಿಯ ಮಾಲೀಕತ್ವ ಅಥವಾ ಅದು ವಕ್ಫ್ ಆಸ್ತಿ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಲು ಸಮಿತಿಗೆ ಸಾಧ್ಯವಾಗಲಿಲ್ಲ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಭೂಮಿಯನ್ನು ಅಕ್ರಮ ಆಕ್ರಮಣದಿಂದ ಮುಕ್ತಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ನ್ಯಾಯಾಲಯದ ಆದೇಶಗಳನ್ನು ಅತ್ಯಂತ ಸೂಕ್ಷ್ಮತೆ, ವೃತ್ತಿಪರತೆ ಹಾಗೂ ಕಾನೂನು ಪ್ರಕ್ರಿಯೆಯಂತೆ ಜಾರಿಗೊಳಿಸಲು ದೆಹಲಿ ಪೊಲೀಸರು ಬದ್ಧರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande