
ನವದೆಹಲಿ, 08 ಜನವರಿ (ಹಿ.ಸ.) :
ಆ್ಯಂಕರ್ : ಶೀತ ಪರಮಾಣುಗಳ ಮೇಲೆ ಯಾವುದೇ ವ್ಯತ್ಯಯ ಉಂಟುಮಾಡದೆ ಅವುಗಳ ಸ್ಥಳೀಯ ಸಾಂದ್ರತೆಯನ್ನು ನೈಜ ಸಮಯದಲ್ಲಿ ಅಳೆಯುವ ಹೊಸ ತಂತ್ರವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ರಾಮನ್ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ರೂಪಿಸಿರುವ ರಾಮನ್-ಡ್ರಿವನ್ ಸ್ಪಿನ್ ನಾಯ್ಸ್ ಸ್ಪೆಕ್ಟ್ರೋಸ್ಕೋಪಿ ತಂತ್ರವು ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಸೆನ್ಸಿಂಗ್ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಯಾಗಿದೆ.
ಈ ತಂತ್ರವು ಸಿಗ್ನಲ್ ಅನ್ನು ಲಕ್ಷಾಂತರ ಪಟ್ಟು ವರ್ಧಿಸಿ, ಅತೀ ಸಣ್ಣ ಪ್ರದೇಶದಲ್ಲೂ ಪರಮಾಣು ಸಾಂದ್ರತೆಯನ್ನು ವೇಗವಾಗಿ ಹಾಗೂ ನಿಖರವಾಗಿ ಅಳೆಯಲು ಸಾಧ್ಯವಾಗಿಸುತ್ತದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಕಡಿಮೆ ಸಮಯದಲ್ಲಿ ಹಾಗೂ ಪರಮಾಣುಗಳ ಕ್ವಾಂಟಮ್ ಸ್ಥಿತಿಯನ್ನು ಬದಲಾಯಿಸದೆ ಮಾಪನ ಸಾಧ್ಯವಾಗುತ್ತದೆ. ಕ್ವಾಂಟಮ್ ಸಂವೇದಕಗಳು, ಗ್ರಾವಿಮೀಟರ್‌ಗಳು ಮತ್ತು ತಟಸ್ಥ ಪರಮಾಣು-ಆಧಾರಿತ ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಈ ತಂತ್ರವು ವ್ಯಾಪಕ ಬಳಕೆಗೆ ದಾರಿ ಮಾಡಿಕೊಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa